ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ರೋಗದಿಂದ ಗುಣಮುಖರಾದ್ರು, ಆಸ್ಪತ್ರೆ ಬಿಲ್ ನೋಡಿ ದಂಗಾದ್ರು

|
Google Oneindia Kannada News

ವಾಷಿಂಗ್ಟನ್, ಜೂನ್ 15: ಕೊರೊನಾ ಸೋಂಕಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 70 ವರ್ಷದ ವ್ಯಕ್ತಿ ಕೊನೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಬಿಡುಗಡೆ ಸಮಯದಲ್ಲಿ ಕೊಟ್ಟ ಆಸ್ಪ್ರೆಯ ಬಿಲ್ ನೋಡಿ ಕೋಮಾಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ಆಸ್ಪತ್ರೆ ಬಿಲ್ 1.1 ಮಿಲಿಯನ್ ಯುಎಸ್ ಡಾಲರ್‌ನಷ್ಟಾಗಿತ್ತು.

ಮೈಕೇಲ್ ಎಂಬುವವರು ತನ್ನ ಪತ್ನಿ, ಮಕ್ಕಳನ್ನು ಕರೆದು ನಾನಿನ್ನು ಬದುಕಿರುವುದಿಲ್ಲ ಎಂದು ಹೇಳಿ ಗುಡ್ ಬೈ ಹೇಳಿದ್ದರು. ಆದರ ಆಶ್ಚರ್ಯವೆಂಬಂತೆ ಅವರು ಚೇತರಿಸಿಕೊಂಡರು. ಸ್ವೀಡಿಶ್ ಮೆಡಿಕಲ್ ಸೆಂಟರ್‌ನಲ್ಲಿ ಮಾರ್ಚ್ 4 ರಂದು ದಾಖಲಾಗಿದ್ದರು, ಒಟ್ಟು 62 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.

ಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತಕೊರೊನಾ 'ಗಂಭೀರ' ಪ್ರಕರಣಗಳಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತ

ಮೇ 5 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. 181 ಪುಟಗಳ ಆಸ್ಪತ್ರೆ ಬಿಲ್ ನೀಡಿದ್ದರು. ಪ್ರತಿ ನಿತ್ಯ 9,736 ಡಾಲರ್‌ನಂತೆ ಬಿಲ್ ನೀಡಿದ್ದರು. ಒಟ್ಟು 62 ದಿನಗಳಲ್ಲಿ 1.1 ಮಿಲಿಯನ್ ಡಾಲರ್ ಅಂದರೆ ಅಂದಾಜು 8 ಕೋಟಿ 37 ಲಕ್ಷರೂನ ಬಿಲ್ ನೀಡಲಾಗಿತ್ತು.

70-Year-Old US Man Beats COVID-19, Gets Whopping 1.1 Million USD Hospital Bill

ಅವರು ಮಾಡಿಸಿದ್ದ ವಿಮೆಯಿಂದ 6 ಸಾವಿರ ಡಾಲರ್ ದೊರೆತಿತ್ತು. 'ಆದರೆ ನಾನು ಬದುಕಿದ್ದರೂ ಏನು ಪ್ರಯೋಜನ ನನಗಾಗಿ ಇಷ್ಟೊಂದು ವೆಚ್ಚ ಮಾಡುವುದು ಬೇಡವಾಗಿತ್ತು. ನನಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ' ಎಂದು ಮೈಕೇಲ್ ಹೇಳಿಕೊಂಡಿದ್ದಾರೆ.

English summary
He may have recovered from the deadly coronavirus, but the hospital bill left him reeling in shock. Yes! A 70-year-old man in the US, who nearly died from the coronavirus, was taken aback after he was given a whopping USD 1.1 million bill for his medical expense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X