ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನೆಲದಲ್ಲಿ ಶೇ.70ರಷ್ಟು ಮಂದಿಗೆ ಕೋವಿಡ್-19 ಪಾಸಿಟಿವ್!

|
Google Oneindia Kannada News

ವಾಶಿಂಗ್ಟನ್, ಜುಲೈ 22: ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ ಕೋವಿಡ್-19 ಸೋಂಕಿನಿಂದ ಯುನೈಟೆಡ್ ಸ್ಟೇಟ್ಸ್ ನಲುಗಿ ಹೋಗಿದೆ. ಅಮೆರಿಕಾ ನೆಲದಲ್ಲಿ ಶೇಕಡಾ 70 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ.

"ಸಿಡಿಸಿ ಅಂಕಿ-ಅಂಶಗಳ ಪ್ರಕಾರ, ಶೇ.70ಕ್ಕೂ ಹೆಚ್ಚು ಮಂದಿಗ ಕೋವಿಡ್-19 ಸೋಂಕು ತಗುಲಿದೆ. ಈ ಹಂತದಲ್ಲಿ ಅಮೆರಿಕಾದ ಪ್ರತಿಯೊಬ್ಬರಿಗೂ ಸೋಂಕು ತಗುಲಿತ್ತಾ ಎಂಬ ಬಗ್ಗೆ ಹೇಳುವುದಕ್ಕೆ ಸಾಧ್ಯವಿಲ್ಲ," ಎಂದು ಕೊರೊನಾ ವೈರಸ್ ಸಂಬಂಧಿತ ವೈಟ್ ಹೌಸ್ ಸಂಯೋಜಕರಾದ ಆಶಿಶ್ ಜಾ ಮಾಹಿತಿ ನೀಡಿದ್ದಾರೆ.

ನ್ಯಾನ್ಸಿ ಪೆಲೊಸಿ ತೈವಾನ್‌ ಭೇಟಿ ನೀಡುವುದು ಒಳ್ಳೆಯ ಆಲೋಚನೆಯಲ್ಲ: ಜೋ ಬೈಡೆನ್‌ನ್ಯಾನ್ಸಿ ಪೆಲೊಸಿ ತೈವಾನ್‌ ಭೇಟಿ ನೀಡುವುದು ಒಳ್ಳೆಯ ಆಲೋಚನೆಯಲ್ಲ: ಜೋ ಬೈಡೆನ್‌

ಯುಎಸ್ ಅಧ್ಯಕ್ಷ ಜೋ ಬೈಡೆನ್ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಈ ಅಂಶವನ್ನು ಅವರು ಉಲ್ಲೇಖಿಸಿದ್ದಾರೆ. ಇತ್ತೀಚಿಗಷ್ಟೇ ಯುಎಸ್ ಅಧ್ಯಕ್ಷ ಜೋ ಬೈಡೆನ್‌ಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಡಪಟ್ಟಿತ್ತು. ಬಹುಶಃ ಸೋಂಕು ಹರಡುವಿಕೆಯಲ್ಲಿ ಉಪ ತಳಿಗಳ ಪಾತ್ರ ಬಹುಮುಖ್ಯವಾಗಿದೆ ಎನಿಸುತ್ತಿದೆ ಎಂದು ಆಶಿಶ್ ಜಾ ಹೇಳಿದ್ದಾರೆ.

 ಬೈಡೆನ್ ಆರೋಗ್ಯದ ಬಗ್ಗೆ ವಿಡಿಯೋ ಬಿಡುಗಡೆ

ಬೈಡೆನ್ ಆರೋಗ್ಯದ ಬಗ್ಗೆ ವಿಡಿಯೋ ಬಿಡುಗಡೆ

ಕೊರೊನಾ ವೈರಸ್ ಸೋಂಕು ತಗುಲಿರುವ ಅಧ್ಯಕ್ಷ ಜೋ ಬೈಡೆನ್ ಆರೋಗ್ಯ ಸ್ಥಿತಿ ಬಗ್ಗೆ ವೈಟ್ ಹೌಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. 79 ವರ್ಷದ ಬೈಡೆನ್ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೋವಿಡ್-19 ಸಂಬಂಧಿಸಿದ ಸೌಮ್ಯ ಲಕ್ಷಣಗಳಷ್ಟೇ ಪತ್ತೆಯಾಗಿವೆ. ಅಧ್ಯಕ್ಷರ ದೇಹದಲ್ಲಿ ಹೆಚ್ಚುವರಿ ಲಕ್ಷಣಗಳು ಪತ್ತೆಯಾಗಿಲ್ಲ. ಅವರ ಉಸಿರಾಟದ ಪ್ರಮಾಣ ಉತ್ತಮವಾಗಿದ್ದು, ಆಕ್ಸಿಜನ್ ಲೆವೆಲ್ ಸಹ ಚೆನ್ನಾಗಿದೆ. ಬೈಡೆನ್ ಆರೋಗ್ಯ ಸ್ಥಿರವಾಗಿದೆ ಎಂದು ಆಶಿಶ್ ಜಾ ಮಾಹಿತಿ ನೀಡಿದ್ದಾರೆ.

ಆರೋಗ್ಯ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ ಬೈಡೆನ್

ಆರೋಗ್ಯ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ ಬೈಡೆನ್

"ಈ ದಿನ ಬೆಳಗ್ಗೆ ತಮಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ ನಾನು ಎರಡು ಡೋಸ್ ಲಸಿಕೆ, ಎರಡು ಡೋಸ್ ಬೂಸ್ಟರ್ ಲಸಿಕೆಯನ್ನು ಪಡೆದುಕೊಂಡಿದ್ದೇನೆ, ಸೋಂಕಿನ ಸೌಮ್ಯ ಲಕ್ಷಣಗಳು ಗೋಚರಿಸಿವೆ. ನಿಮ್ಮ ಕಾಳಜಿ ಮತ್ತು ಅಕ್ಕರೆಗೆ ನಾನು ಆಭಾರಿಯಾಗಿದ್ದಾನೆ. ನಾನು ಆರೋಗ್ಯವಾಗಿಯೇ ಇದ್ದು, ಸಾಕಷ್ಟು ಕೆಲಸವನ್ನು ಮಾಡುತ್ತಿದ್ದೇನೆ. ಮೊದಲಿನ ರೀತಿಯಲ್ಲೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಮೇಲೆ ನೀವು ತೋರಿಸಿದ ಕಾಳಜಿ ಮತ್ತು ಇಟ್ಟಿರುವ ವಿಶ್ವಾಸಕ್ಕೆ ಧನ್ಯವಾದ," ಎಂದು ಬೈಡೆನ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಲಸಿಕೆ ಪಡೆದುಕೊಳ್ಳಿ ಎಂದು ಒತ್ತಾಯ

ಕೋವಿಡ್-19 ಲಸಿಕೆ ಪಡೆದುಕೊಳ್ಳಿ ಎಂದು ಒತ್ತಾಯ

ಯುನೈಟೆಡ್ ಸ್ಟೇಟ್ಸ್ ನೆಲದಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಯಾರು ಕೋವಿಡ್-19 ಬೂಸ್ಟರ್ ಡೋಸ್ ಹಾಕಿಸಿಕೊಂಡಿಲ್ಲವೋ ಅವರು ಮೊದಲು ಲಸಿಕೆಯನ್ನು ಪಡೆದುಕೊಳ್ಳಿ ಎಂದು ಆಶಿಶ್ ಜಾ ಸಲಹೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕು ಪತ್ತೆಯಾದ ರೋಗಿಗಳು ತಮ್ಮ ಚಿಕಿತ್ಸೆ ಅರ್ಹತೆಯ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

" ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆರೋಗ್ಯವನ್ನು ರಕ್ಷಿಸುವುದಕ್ಕೆ ಖಂಡಿತವಾಗಿಯೂ ನಾವು ಹಾರ್ಡ್ ವರ್ಕ್ ಮಾಡುತ್ತಿದ್ದೇವೆ. ಡಬಲ್ ಡೋಸ್, ಬೂಸ್ಟರ್ ಡೋಸ್ ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇೆವೆ. ಅದೇ ರೀತಿ ಅಮೆರಿಕಾದ ಪ್ರತಿಯೊಬ್ಬ ಪ್ರಜೆಗಳ ಆರೋಗ್ಯವೂ ನಮಗೆ ಮುಖ್ಯವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕಾಗಿದೆ," ಎಂದಿದ್ದಾರೆ.

ಅಮೆರಿಕಾದಲ್ಲಿ ಹೇಗಿದೆ ಕೊರೊನಾ ವೈರಸ್?

ಅಮೆರಿಕಾದಲ್ಲಿ ಹೇಗಿದೆ ಕೊರೊನಾ ವೈರಸ್?

ಯುಎಸ್ಎನಲ್ಲಿ ಬೇಸಿಗೆಯ ಕೋವಿಡ್-19 ಅಲೆಗೆ ಓಮಿಕ್ರಾನ್ ರೂಪಾಂತರದ ಬಿಎ.5 ಉಪ ತಳಿ ಮುಖ್ಯ ಕಾರಣವಾಗಿದೆ. ಯುಎಸ್ ಆರೋಗ್ಯ ಮತ್ತು ಮಾನವ ಸೇವಾ ದತ್ತಾಂಶದ ಪ್ರಕಾರ, 35 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಅದೇ ರೀತಿ 25 ರಾಜ್ಯಗಳ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್-19 ಸೋಂಕಿತರ ಸಂಖ್ಯೆಯು ಏರಿಕೆಯಾಗಿದೆ.

ಸಿಡಿಸಿ ಅಂಕಿ-ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 100,711 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಇದೇ ಅವಧಿಯಲ್ಲಿ 251 ಸೋಂಕಿತರು ಮೃತಪಟ್ಟಿದ್ದರೆ, 107,436 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೂ 91,942,744 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 87,107,075 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 1,051,235 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಯುಎಸ್ಎನಲ್ಲಿ 3,784,434 ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳಿವೆ.

Recommended Video

KLರಾಹುಲ್ ಗೆ ಕೊರೋನಾ ಪಾಸಿಟಿವ್: ಕಾಯಿಲೆಯಲ್ಲೇ ಕಾಲ ಕಳೆಯುವಂತಾಯ್ತು ಕನ್ನಡಿಗನ ಪರಿಸ್ಥಿತಿ | *Cricket | OneIndia

English summary
70 per cent Americans infected with Coronavirus, White House urges to get vaccinated after Biden tests positive, Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X