ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಎರಡು ವಿಮಾನಗಳು ಡಿಕ್ಕಿ: ಶಾಸಕ ಸೇರಿ 7 ಮಂದಿ ದುರ್ಮರಣ

|
Google Oneindia Kannada News

ಅಲಾಸ್ಕ, ಆಗಸ್ಟ್ 01: ಎರಡು ವಿಮಾನಗಳ ಮಧ್ಯೆ ಪರಸ್ಪರ ಡಿಕ್ಕಿ ಉಂಟಾಗಿ ಶಾಸಕ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ಅಲಾಸ್ಕದಲ್ಲಿ ಶುಕ್ರವಾರ ನಡೆದಿದೆ.

ಅಲಾಸ್ಕದ ಕೆನೈ ಪೆನಿನ್ಸುಲಾದ ಸೋಲ್ಡೊಟ್ನಾ ನಗರದ ವಿಮಾನ ನಿಲ್ದಾಣದ ಸಮೀಪದಲ್ಲಿ ಸಂಭವಿಸಿದ ವಿಮಾನಗಳ ಪತನದಲ್ಲಿ ಯಾರೊಬ್ಬರು ಸಹ ಉಳಿದಿಲ್ಲ. ಇದೇ ಪ್ರದೇಶದವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಗ್ಯಾರಿ ನೂಪ್​ ವಿಮಾನವೊಂದರಲ್ಲಿ ಒಬ್ಬರೇ ಬರುತ್ತಿದ್ದರು.

ದೇಶೀಯ ವಿಮಾನಗಳ ನಿರ್ಬಂಧ ನವೆಂಬರ್ 24ರವರೆಗೆ ವಿಸ್ತರಣೆದೇಶೀಯ ವಿಮಾನಗಳ ನಿರ್ಬಂಧ ನವೆಂಬರ್ 24ರವರೆಗೆ ವಿಸ್ತರಣೆ

ಮತ್ತೊಂದು ವಿಮಾನವು ಸೌಥ್​ ಕರೊಲಿನಾದಿಂದ ಅಲಾಸ್ಕ ಕಡೆಗೆ ಬರುತ್ತಿತ್ತು. ಅದರಲ್ಲಿ 4 ಪ್ರವಾಸಿಗರು, ಓರ್ವ ಗೈಡ್​ ಹಾಗೂ ಪೈಲಟ್​ ಇದ್ದರು. ಇತರೆ ಸಂತ್ರಸ್ತರನ್ನು ಪೈಲಟ್​ ಗ್ರೆಗೋರಿ ಬೆಲ್​ (67), ಗೈಡ್​ ಡೇವಿಡ್​​ ರೋಜರ್ಸ್​ (40) ಮತ್ತು ಸೌಥ್​ ಕರೊಲಿನಾ ಪ್ರವಾಸಿಗರಾದ ಕಲೆಬ್​ ಹಸ್ಲಿ (26), ಹೆದರ್​ ಹಸ್ಲಿ (25), ಮೆಕಾಯ್​ ಹಸ್ಲಿ (24) ಮತ್ತು ಕ್ರಿಸ್ಟಿ ರೈಟ್​ (23) ಎಂದು ಗುರುತಿಸಲಾಗಿದೆ.

7 Killed, As Two Planes Collide In Alaska

ಸದ್ಯ ಈ ಪ್ರಕರಣ ತನಿಖೆಗೆ ಆದೇಶಿಸಲಾಗಿದೆ. ಅಲಾಸ್ಕದಲ್ಲಿ ಕೊನೆಯಾದಾಗಿ 2019ರ ಮೇನಲ್ಲಿ ಕೆಟ್ಚಿಕನ್​ ಸಮೀಪ ವಿಮಾನಗಳ ಡಿಕ್ಕಿಯಾಗಿತ್ತು. ಈ ವೇಳೆ 6 ಮಂದಿ ಮೃತರಾಗಿದ್ದರು. 10 ಮಂದಿಯನ್ನು ರಕ್ಷಿಸಲಾಗಿತ್ತು.

ವಾಯು ಮಾರ್ಗ ಮಧ್ಯದಲ್ಲಿ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರ ಪರಿಣಾಮ ಒಟ್ಟು ಏಳು ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ಇನ್ನು ಪತನಗೊಂಡ ವಿಮಾನದ ಅವಶೇಷಗಳು ಹೆದ್ದಾರಿ ಮೇಲೆಯೇ ಬಿದ್ದಿವೆ.

ಶಾಸಕ ಗ್ಯಾರಿ ನೂಪ್ ರಿಪಬ್ಲಿಕನ್ ಮತ್ತು ರಾಜ್ಯ ಸದನದ ಉಭಯಪಕ್ಷೀಯ ಬಹುಮತದ ಸದಸ್ಯರಲ್ಲೊಬ್ಬರಾಗಿದ್ದರು.

English summary
A midair plane collision in Anchorage on Friday killed seven people, including a state lawmaker who was piloting one of the aircraft, Alaska officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X