ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 6 ವಾರಗಳ ಹಸುಗೂಸು ಕೊರೊನಾ ವೈರಸ್‌ಗೆ ಬಲಿ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 2: ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ ಆರು ವಾರಗಳ ಕಂದಮ್ಮ ಬಲಿಯಾಗಿದೆ.

Recommended Video

ಅಮೇರಿಕಾದಲ್ಲಿರೋ ಕನ್ನಡತಿ ಭಾರತೀಯರಿಗೆ ಹೇಳಿದ್ದೇನು? | Girl From America Message for Kannadigas | Stay Home

ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದವರಲ್ಲಿ ಅತಿ ಚಿಕ್ಕ ಮಗು ಇದಾಗಿದೆ. ಅಮೆರಿಕ ಗವರ್ನರ್ ನೆಡ್ ಲೆಮಾಂಟ್ ಟ್ವೀಟ್ ಮಾಡಿದ್ದು, 'ಕಳೆದ ವಾರ ಕೊರೊನಾಗೆ ತುತ್ತಾಗಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ' ಎಂದು ತಿಳಿಸಿದ್ದಾರೆ.

ಕೊರೊನಾ: 'ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬೇಡ' ಕೊರೊನಾ: 'ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬೇಡ'

ಮಗುವಿನ ಆರೋಗ್ಯ ಏರುಪೇರಾಗಲು ಕಾರಣ ಏನೆಂಬುದು ಮೊದಲು ಗೊತ್ತಿರಲಿಲ್ಲ, ಬಳಿಕ ನನ್ನೆಯಷ್ಟೇ ಮಗುವಿಗೆ ಕೊರೊನಾ ಇರುವುದು ತಿಳಿದುಬಂದಿತ್ತು.

6 Week Old Baby Dies Of Coronavirus In America

ಒಂದು ವರ್ಷಕ್ಕಿಂತಲೂ ಕಡಿಮೆ ಇರುವ ಮಗುವಿಗೆ ಕೊರೊನಾ ಬಂದಿದೆ. ಈ ಕುರಿತು ಅಧ್ಯಯನ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.ಆದರೆ ಸ್ಥಳೀಯ ಮಾಧ್ಯಮಗಳು ಮಗುವಿಗೆ 9 ತಿಂಗಳಾಗಿದೆ ಎಂದು ಹೇಳಿವೆ. ಅಮೆರಿಕದಲ್ಲಿ ಈಗಾಗಲೇ 4,476 ಮಂದಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ನ್ಯೂಯಾರ್ಕ ನಗರವೊಂದರಲ್ಲೇ 2 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ನ್ಯೂಯಾರ್ಕ್ ಹಾಗೂ ನ್ಯೂಜರ್ಸಿಯಲ್ಲಿ ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಕೊರೊನಾ ವೈರಸ್‌ನ 8 ತಳಿಗಳನ್ನು ಗುರುತಿಸಿದ ವಿಜ್ಞಾನಿಗಳು ಕೊರೊನಾ ವೈರಸ್‌ನ 8 ತಳಿಗಳನ್ನು ಗುರುತಿಸಿದ ವಿಜ್ಞಾನಿಗಳು

ಅಮೆರಿಕದ ನೌಕಾಸೇನೆಯ ಯುದ್ಧ ಹಡಗಿನಲ್ಲಿ ಮಾರಕ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಹಡಗಿನಲ್ಲಿರುವ ನೌಕಾಸೇನೆಯ ಸೈನಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ.

ಪರಮಾಣು ಶಸ್ತ್ರಗಳನ್ನು ಹೊತ್ತು ಗಸ್ತು ತಿರುಗುತ್ತಿರುವ ಅಮೆರಿಕ ನೌಕಾಸೇನೆಯ 'ಥಿಯೊಡೋರ್ ರೂಸ್‌ವೆಲ್ಟ್' ಎಂಬ ಯುದ್ಧ ಹಡಗಿನ ಸೈನಿಕರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಡಗಿನ ಕ್ಯಾಪ್ಟನ್ ಬ್ರೆಟ್ ಕ್ರೊಜಿಯರ್ ನೌಕಾಪಡೆಯ ಉನ್ನತ ಅಧಿಕಾರಿಗಳಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.

English summary
A six-week-old infant has died of complications relating to COVID-19, the governor of the US state of Connecticut said Wednesday, in one of the youngest recorded deaths from the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X