India
 • search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಚಿಕಾಗೋದಲ್ಲಿ ಗುಂಡಿನ ದಾಳಿಗೆ 6 ಸಾವು, 24 ಮಂದಿಗೆ ಗಾಯ

|
Google Oneindia Kannada News

ಚಿಕಾಗೋ, ಜುಲೈ 5: ಯುನೈಟೆಡ್ ಸ್ಟೇಟ್ಸ್(ಯುಎಸ್)ನ ಚಿಕಾಗೋ ಉಪನಗರದಲ್ಲಿ ಸೋಮವಾರ ನಡೆದ ಪರೇಡ್‌ನ ವೇಳೆ ನಡೆಸಿರುವ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಕನಿಷ್ಠ 24 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ವರದಿಗಳ ಪ್ರಕಾರ, ಸ್ವಾತಂತ್ರ್ಯೋತ್ಸವದ ಆಚರಣೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಬಂದೂಕುಧಾರಿಯು ಚಿಲ್ಲರೆ ಅಂಗಡಿಯ ಛಾವಣಿಯಿಂದ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನು ಆರಂಭಿಸಿದ್ದಾನೆ.

ಸ್ವಾತಂತ್ರ್ಯೋತ್ಸವ ದಿನದಂದೇ ಅಮೆರಿಕದಲ್ಲಿ ಶೂಟೌಟ್ ಸ್ವಾತಂತ್ರ್ಯೋತ್ಸವ ದಿನದಂದೇ ಅಮೆರಿಕದಲ್ಲಿ ಶೂಟೌಟ್

ಹೈಲ್ಯಾಂಡ್ ಪಾರ್ಕ್‌ನ ಬೀದಿಗಳಲ್ಲಿ ಗುಂಡು ಹಾರಿಸಿದ್ದರಿಂದ ಮೆರವಣಿಗೆಯಲ್ಲಿ ಭಾಗವಹಿಸುವವರು ಇದ್ದಕ್ಕಿದ್ದಂತೆ ಭಯಭೀತರಾಗಿ ಓಡಿಹೋಗುವುದಕ್ಕೆ ಶುರು ಮಾಡಿದರು. ಪಾದಚಾರಿ ಮಾರ್ಗದಲ್ಲಿ ಕುಳಿತು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಆದರೆ ಗುಂಡಿನ ಸದ್ದು ಕೇಳಿ ಬರುತ್ತಿದ್ದಂತೆ ಇಡೀ ಚಿತ್ರಣವೇ ಬದಲಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ.

24 ಮಂದಿ ಆಸ್ಪತ್ರೆಗೆ ದಾಖಲು: ಗುಂಡಿನ ದಾಳಿ ನಡೆದ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಗಾಯಗೊಂಡ 24 ಜನರನ್ನು ಹೈಲ್ಯಾಂಡ್ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರದ ಪೊಲೀಸ್ ಕಮಾಂಡರ್ ಕ್ರಿಸ್ ಓ'ನೀಲ್ ಹೇಳಿದ್ದಾರೆ.

ಹೈಲ್ಯಾಂಡ್ ಪಾರ್ಕ್ ನಗರದಲ್ಲಿ ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಜುಲೈ 4ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು. "ಹೈಲ್ಯಾಂಡ್ ಪಾರ್ಕ್ ಪೊಲೀಸರು ಡೌನ್‌ಟೌನ್ ಹೈಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿ ನೀಡಿದರು. "ಜುಲೈ 4 ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ದಯವಿಟ್ಟು ಡೌನ್ಟೌನ್ ಹೈಲ್ಯಾಂಡ್ ಪಾರ್ಕ್ ಅನ್ನು ಬಿಟ್ಟು, HP ಡೌನ್‌ಟೌನ್‌ನಲ್ಲಿದ್ದರೆ ಆಶ್ರಯ ಪಡೆಯಿರಿ. ಅದು ಲಭ್ಯವಾದಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು, "ಎಂದು ಫೇಸ್‌ಬುಕ್‌ನಲ್ಲಿ ಸೂಚಿಸಲಾಯಿತು.

ಗನ್ ವಯಲೆನ್ಸ್ ಆರ್ಕೈವ್ ವೆಬ್‌ಸೈಟ್‌ನ ಪ್ರಕಾರ, ಆತ್ಮಹತ್ಯೆಗಳು ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವರ್ಷಕ್ಕೆ ಗುಂಡಿನ ದಾಳಿಯಿಂದಲೇ ಸುಮಾರು 40,000 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಗನ್ ನಿಯಂತ್ರಣದ ಕುರಿತಾಗಿ ದೇಶದಲ್ಲಿ ಗಂಭೀರ ಚರ್ಚೆ ನಡೆಸಲಾಗುತ್ತಿದೆ. ಕಳೆದ ಮೇ ತಿಂಗಳಲ್ಲಿ ಎರಡು ಹತ್ಯಾಕಾಂಡಗಳಿಂದ ಈ ವಿಷಯವು ಮತ್ತಷ್ಟು ಗಂಭೀರತೆ ಪಡೆದುಕೊಂಡಿತು.

   ಬಸವರಾಜ್ ಬೊಮ್ಮಾಯಿ ಅವರು ಪಿಎಸ್‌ಐ ನೇಮಕಾತಿ ಬಗ್ಗೆ ಮಾತನಾಡಿದ್ದಾರೆ | Oneindia

   English summary
   6 Killed, 24 people injured In Shooting At A Fourth Of July Parade In A Chicago Suburban.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X