ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್: ಐಡಾ ಚಂಡಮಾರುತ ಸೃಷ್ಟಿಸಿದ ಪ್ರವಾಹಕ್ಕೆ 44 ಮಂದಿ ಸಾವು

|
Google Oneindia Kannada News

ವಾಶಿಂಗ್ಟನ್, ಸಪ್ಟೆಂಬರ್ 3: ನ್ಯೂಯಾರ್ಕ್ ನಲ್ಲಿ ಐಡಾ ಚಂಡಮಾರುಕದಿಂದ ಅಪ್ಪಳಿಸಿದ ಪ್ರವಾಹಕ್ಕೆ ಎರಡು ವರ್ಷದ ಪುಟ್ಟ ಮಗು ಸೇರಿದಂತೆ 44ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಬಿರುಗಾಳಿ ಹೆಚ್ಚಿದ ಹಿನ್ನೆಲೆ ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಹಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಚಂಡಮಾರುತದಿಂದ ಪ್ರಕೃತಿ ವಿಕೋಪ ಸೃಷ್ಟಿಯಾಗಿದೆ. ಲಾ ಗಾರ್ಡಿಲಾ ಹಾಗೂ ಜೆಎಫ್‌ಕೆ ವಿಮಾನ ನಿಲ್ದಾಣಗಳಲ್ಲಿ ಮತ್ತು ನೆವಾರ್ಕ್ ಇಂಟರ್‌ನ್ಯಾಷನಲ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ಅಡ್ಲಾಂಟಿಕ್ ಮತ್ತು ಈಶಾನ್ಯ ಅಮೆರಿಕಾದಲ್ಲಿ ದಾಖಲೆಯ ಮಟ್ಟದ ಮಳೆಯಾದ ಹಿನ್ನೆಲೆ ಅನೇಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

"ನನಗೆ 50 ವರ್ಷ ವಯಸ್ಸಾಗಿದೆ ಮತ್ತು ನಾನು ಇಷ್ಟು ಮಳೆಯನ್ನು ನೋಡಿರಲಿಲ್ಲ. ಕಾಡಿನಲ್ಲಿ ವಾಸಿಸುವ ಹಾಗಾಗಿದ್ದು, ಉಷ್ಣವಲಯದ ಮಳೆಯಂತೆ ನಂಬಲಸಾಧ್ಯವಾಗಿದೆ. ಈ ವರ್ಷ ಎಲ್ಲವೂ ತುಂಬಾ ವಿಚಿತ್ರವಾಗಿದೆ, "ಮೆಟೊಡಿಜಾ ಮಿಹಾಜ್ಲೋವ್ ಹೇಳಿದ್ದಾರೆ. ಅವರ ಮ್ಯಾನ್ಹ್ಯಾಟನ್ ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿ ಮೂರು ಅಡಿ ನೀರು ತುಂಬಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ. ನ್ಯೂಯಾರ್ಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಐಡಾ ಚಂಡಮಾರುತ ಸೃಷ್ಟಿಸಿದ ಅವಾಂತರಗಳ ಪ್ರಮುಖ ಅಂಶಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

44 Dead As Hurricane Ida Brings Flash Flooding in New York Area

ಅಮೆರಿಕಾದಲ್ಲಿ ಐಡಾ ಚಂಡಮಾರುತದ ಅವಾಂತರ:

* ಲೂಯಿಸಿಯಾನ ರಾಜ್ಯದ ಕೆಲವು ಭಾಗಗಳು ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಅಡುಗೆ ಅನಿಲ (ಗ್ಯಾಸ್) ಪೂರೈಕೆಯ ವ್ಯತ್ಯಯವಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

* ಯುಎಸ್ ಅಧ್ಯಕ್ಷ ಜೋ ಬಿಡೆನ್ ಲೂಯಿಸಿಯಾನದಲ್ಲಿ ದೊಡ್ಡ ದುರಂತವನ್ನು ಘೋಷಿಸಿದ್ದಾರೆ. ಐಡಾ ಪೀಡಿತ ಪ್ರದೇಶಗಳಲ್ಲಿ ಚೇತರಿಕೆಯ ಪ್ರಯತ್ನಗಳಿಗೆ ಪೂರಕವಾಗಿ ಫೆಡರಲ್ ನೆರವಿಗೆ ಆದೇಶಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

* "ಇದರಲ್ಲಿ ನಾವೆಲ್ಲ ಒಟ್ಟಿಗಿದ್ದೇವೆ. ರಾಷ್ಟ್ರವು ಸಹಾಯ ಮಾಡಲು ಸಿದ್ಧವಾಗಿದೆ "ಎಂದು ಬಿಡೆನ್ ದಕ್ಷಿಣ ರಾಜ್ಯ ಲೂಯಿಸಿಯಾನಕ್ಕೆ ಪ್ರವಾಸಕ್ಕೆ ಮುನ್ನ ಹೇಳಿದರು.

* ನ್ಯೂಜೆರ್ಸಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ, ನ್ಯೂಯಾರ್ಕ್ ನಗರದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ. ನ್ಯೂಯಾರ್ಕ್‌ನ ಉಪನಗರವಾದ ವೆಸ್ಟ್‌ಚೆಸ್ಟರ್‌ನಲ್ಲಿ ಮೂವರು ಪ್ರಾಣ ಕಳೆದುಕೊಂಡರು, ಪೆನ್ಸಿಲ್ವೇನಿಯಾದ ಮಾಂಟ್‌ಗೊಮೆರಿ ಕೌಂಟಿಯಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ಮೇರಿಲ್ಯಾಂಡ್‌ನಲ್ಲಿ 19 ವರ್ಷದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

* ಯುಎಸ್ ಬುಧವಾರ ಐಡಾ ಚಂಡಮಾರುತದಲ್ಲಿ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸುವುದು, ರಸ್ತೆಗಳನ್ನು ತೆರವುಗೊಳಿಸುವುದು. ಆಹಾರ ಮತ್ತು ನೀರನ್ನು ವಿತರಿಸುವ ಕಾರ್ಯಾಚರಣೆಗಾಗಿ ಸಾವಿರಾರು ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ನಿಯೋಜಿಸಿತ್ತು.

* "11 ರಾಜ್ಯಗಳ 5,400 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯು ಬುಧವಾರ ಲೂಯಿಸಿಯಾನದಲ್ಲಿದ್ದರು, 36 ವಿಮಾನಗಳು, 74 ದೋಣಿಗಳು, 198 ಬೋಟ್, ಜನರೇಟರ್‌ಗಳು ಮತ್ತು ಎಂಜಿನಿಯರ್‌ಗಳೊಂದಿಗೆ ಮೊದಲ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ನೆರವು ನೀಡಿದರು" ಎಂದು ನ್ಯಾಷನಲ್ ಗಾರ್ಡ್ ಬ್ಯೂರೋ ಜನರಲ್ ಡೇನಿಯಲ್ ಹೊಕಾನ್ಸನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
New York City flooding updates: Hurricane Ida Flash Flooding killed at least 44 people in the New York area overnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X