ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

|
Google Oneindia Kannada News

ಮಿನೆಸೋಟಾ, ಮೇ 27: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಕಪ್ಪು ವರ್ಣೀಯನೊಬ್ಬ ಪ್ರಾಣ ಬಿಟ್ಟ ಘಟನೆಗೆ ಅಮೇರಿಕಾದ ಮಿನೆಸೋಟಾದಲ್ಲಿರುವ ಮಿನ್ನಿಯಾಪೊಲಿಸ್ ನಗರ ಸಾಕ್ಷಿಯಾಗಿದೆ.

ಅಮೇರಿಕಾದಲ್ಲಿ ಜನಾಂಗೀಯ ತಾರತಮ್ಯ ಇಂದು ನಿನ್ನೆಯದ್ದಲ್ಲ. ಕಪ್ಪು ವರ್ಣೀಯರ ಮೇಲೆ ಬಿಳಿಯರ ಪ್ರಾಬಲ್ಯ.. ವರ್ಣಭೇದ ಮನಸ್ಥಿತಿ ಅಲ್ಲಿ ಇನ್ನೂ ಚಾಲ್ತಿಯಲ್ಲಿ ಇದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ.

''ನನ್ನನ್ನು ಕೊಲ್ಲಬೇಡಿ'' ಎಂದು ಕಪ್ಪು ವರ್ಣೀಯ ಬೇಡಿಕೊಳ್ಳುತ್ತಿದ್ದರೂ, 'ಬಿಳಿ' ಪೊಲೀಸರು ಕಿಂಚಿತ್ತೂ ಕರುಣೆ ತೋರಲಿಲ್ಲ. ಕಪ್ಪು ವರ್ಣೀಯನ ಕುತ್ತಿಗೆ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ವರ್ಣಬೇಧ ನೀತಿ ಮೆಟ್ಟಿ ನಿಂತ ಮಂಡೇಲಗೆ ಟ್ವೀಟ್ ನಮನವರ್ಣಬೇಧ ನೀತಿ ಮೆಟ್ಟಿ ನಿಂತ ಮಂಡೇಲಗೆ ಟ್ವೀಟ್ ನಮನ

'ಬ್ಲಾಕ್' ಮ್ಯಾನ್ ಮೇಲೆ 'ವೈಟ್' ಪೊಲೀಸರ ಮೃಗೀಯ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮಾನವೀಯ ಬಿಳಿ ಪೊಲೀಸರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸದ್ಯ ಘಟನೆಗೆ ಸಂಬಂಧಪಟ್ಟ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಎಫ್.ಬಿ.ಐ ತನಿಖೆ ನಡೆಸುತ್ತಿದೆ.

ಅಸಲಿಗೆ ನಡೆದಿದ್ದು ಏನು.?

ಅಸಲಿಗೆ ನಡೆದಿದ್ದು ಏನು.?

ಮಿನ್ನಿಯಾಪೊಲಿಸ್ ನಗರದ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮತ್ತು ಪೊಲೀಸರ ನಡುವಿನ ಮುಖಾಮುಖಿ ನಡೆದಿದ್ದು ಸೋಮವಾರ ರಾತ್ರಿ 8 ಗಂಟೆಯ ಬಳಿಕ. ಕಪ್ ಫುಡ್ಸ್ ಎಂಬಲ್ಲಿ ನಕಲಿ ದಾಖಲೆಗಳನ್ನು ಬಳಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ ಎಂಬ ವರದಿಯ ಮೇರೆಗೆ ಚಿಕಾಗೊ ಅವೆನ್ಯೂ ಸೌತ್ ನಲ್ಲಿನ 3700 ಬ್ಲಾಕ್ ಗೆ ಪೊಲೀಸರನ್ನು ಕರೆಸಲಾಗಿತ್ತು. (ಈ ಬಗ್ಗೆ ಅಂಗಡಿಯ ಮಾಲೀಕ ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ.)


ಅದೇ ಸ್ಥಳದಲ್ಲಿ ಕಾರ್ ನಲ್ಲಿ ಜಾರ್ಜ್ ಫ್ಲಾಯ್ಡ್ ಇರುವುದನ್ನು ಪೊಲೀಸರು ಗಮನಿಸಿದರು. ಮಾದಕ ವ್ಯಸನಿಯಾಗಿ ಕಾಣಿಸಿಕೊಂಡ ಜಾರ್ಜ್ ಫ್ಲಾಯ್ಡ್ ನನ್ನು ಕಾರಿನಿಂದ ಇಳಿಯುವಂತೆ ಪೊಲೀಸರು ಸೂಚಿಸಿದರು.


ಕಾರ್ ನಿಂದ ಹೊರಬಂದ ಬಳಿಕ ಜಾರ್ಜ್ ಫ್ಲಾಯ್ಡ್ ಗೆ ಕೈಕೋಳ ತೊಡಿಸಲು ಪೊಲೀಸರು ಮುಂದಾದರು. ಆಗ ಜಾರ್ಜ್ ಫ್ಲಾಯ್ಡ್ ''ದೈಹಿಕವಾಗಿ ವಿರೋಧಿಸಿದರು'' ಎಂದು ಪೊಲೀಸರು ಹೇಳಿದ್ದಾರೆ.

ವೈರಲ್ ಆದ ವಿಡಿಯೋ

ವೈರಲ್ ಆದ ವಿಡಿಯೋ

ಜಾರ್ಜ್ ಫ್ಲಾಯ್ಡ್ ಮೇಲೆ ಬಿಳಿ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತಾದ ವಿಡಿಯೋವೊಂದರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂಬತ್ತು ನಿಮಿಷದ ವಿಡಿಯೋದಲ್ಲಿ ರಸ್ತೆ ಮೇಲೆ ಬಿದ್ದಿದ್ದ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ ಬಿಳಿ ಪೊಲೀಸ್ ಬಲವಾಗಿ ಮಂಡಿಯೂರಿದ್ದು ಸೆರೆಯಾಗಿದೆ.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಅಂತ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

''ಆತನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿ. ಯಾಕೆ ಹಿಂಸೆ ನೀಡುತ್ತಿದ್ದೀರಾ.?'' ಎಂದು ಸ್ಥಳೀಯರು ಹೇಳಿದರೂ, ಅದನ್ನ ಕೇಳಿಸಿಕೊಳ್ಳುವ ತಾಳ್ಮೆ 'ವೈಟ್' ಪೊಲೀಸರಿಗೆ ಇರಲೇ ಇಲ್ಲ.


ಐದು ನಿಮಿಷಗಳ ಬಳಿಕ ಜಾರ್ಜ್ ಫ್ಲಾಯ್ಡ್ ಪ್ರಜ್ಞೆ ತಪ್ಪಿದಾಗ, ನಾಡಿಮಿಡಿತ ಪರೀಕ್ಷಿಸುವಂತೆ ಸ್ಥಳೀಯರು ಪೊಲೀಸರಿಗೆ ಕೇಳಿಕೊಳ್ಳುತ್ತಾರೆ. ಆದರೆ, ಸ್ಥಳಕ್ಕೆ ಆಂಬ್ಯುಲೆನ್ಸ್ ಬರುವವರೆಗೂ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲಿಂದ ತಮ್ಮ ಕಾಲನ್ನ 'ವೈಟ್' ಪೊಲೀಸ್ ಸಡಿಲಗೊಳಿಸುವುದೇ ಇಲ್ಲ.

ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ?ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ?

ಜೋ ಬಿಡೆನ್ ಟ್ವೀಟ್

''ಜಾರ್ಜ್ ಫ್ಲಾಯ್ಡ್ ಮತ್ತು ಕುಟುಂಬಕ್ಕೆ ನ್ಯಾಯ ಸಿಗಬೇಕು'' ಎಂದು ಜೋ ಬಿಡೆನ್ ಕೂಡ ಟ್ವೀಟ್ ಮಾಡಿದ್ದಾರೆ.

''ಪೊಲೀಸರ ಅಮಾನವೀಯ ವರ್ತನೆ ಕಂಡು ಮನಸ್ಸು ಜರ್ಜರಿತಗೊಂಡಿದೆ'' ಎಂದು ಟಿಮ್ ವಾಲ್ಝ್ ಹೇಳಿದ್ದಾರೆ.

''ಅಮೇರಿಕಾದಲ್ಲಿ ಕಪ್ಪು ವರ್ಣೀಯನಾಗಿರುವ ಮಾತ್ರಕ್ಕೆ ಮರಣ ದಂಡನೆ ಸಿಗಬಾರದು. ಆ ವಿಡಿಯೋ ನಿಜಕ್ಕೂ ಭಯಾನಕವಾಗಿದೆ'' ಎಂದಿದ್ದಾರೆ ಮಿನ್ನಿಯಾಪೊಲಿಸ್ ಮೇಯರ್ ಜೇಕಬ್ ಫ್ರೇ.

''ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪುವುದನ್ನು ತಪ್ಪಿಸಬಹುದಾಗಿತ್ತು. ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲಿಂದ ಪೊಲೀಸ್ ಕಾಲು ತೆಗೆದಿದ್ದರೆ ಸಾಕಿತ್ತು. ಆದರೆ, ಪೊಲೀಸ್ ಅದನ್ನು ಮಾಡಲಿಲ್ಲ'' ಎಂದು ಚಾರ್ಲ್ಸ್ ಮೆಕ್ ಮಿಲ್ಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲಸದಿಂದ ವಜಾ

ಕೆಲಸದಿಂದ ವಜಾ

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಿನ್ನಿಯಾಪೊಲಿಸ್ ನಗರದ ಪೊಲೀಸ್ ಚೀಫ್ ಮೆಡಾರಿಯಾ ಅರಾಡೊಂಡೋ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಜೊತೆಗೆ ತನಿಖೆ ನಡೆಸಲು ಎಫ್.ಬಿ.ಐಗೆ ವಹಿಸಿದ್ದಾರೆ.

ಪೊಲೀಸರ ವರ್ತನೆಗೆ ಧಿಕ್ಕಾರ

ಬಿಳಿ ಪೊಲೀಸರ ದುರ್ವತನೆಯನ್ನ ವಿಡಿಯೋದಲ್ಲಿ ನೋಡಿದ ಬಳಿಕ, ಮಂಗಳವಾರ ಮಧ್ಯಾಹ್ನ ಸಾವಿರಾರು ಮಂದಿ ಉಗ್ರ ಪ್ರತಿಭಟನೆ ನಡೆಸಿದರು. ಪೊಲೀಸರ ಅಮಾನವೀಯ ವರ್ತನೆಗೆ ಜನ ಸಾಮಾನ್ಯರು ಧಿಕ್ಕಾರ ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿದರು.

English summary
4 Minnesota Police officers have been fired after the death of a black man George Floyd. Video of the incident in Minneapolis was posted on Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X