ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಒಪ್ಪಿಕೊಂಡ ಅಮೆರಿಕ: ಇರಾನ್ ದಾಳಿಯಿಂದ 34 ಸೈನಿಕರಿಗೆ ಗಾಯ

|
Google Oneindia Kannada News

ವಾಷಿಂಗ್ಟನ್, ಜನವರಿ 25: ಇರಾಕ್‌ನ ಬಾಗ್ದಾದ್ ಬಳಿಯ ಅಮೆರಿಕ ಸೇನಾ ಮೇಲೆ ನಡೆದ ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ಅಮೆರಿಕ ಸೇನೆಯ 34 ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕದ ಪೆಂಟಗಾನ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಕಳೆದ ಜನವರಿ 8 ರಂದು ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಸೇನೆಯು ಅಮೆರಿಕ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು.

 ಯೂಟರ್ನ್ ಹೊಡೆದ ಅಮೆರಿಕ

ಯೂಟರ್ನ್ ಹೊಡೆದ ಅಮೆರಿಕ

ಕ್ಷಿಪಣಿ ದಾಳಿಯಿಂದ ಅಮೆರಿಕ ಸೇನೆಯ ಸಿಬ್ಬಂದಿಗೂ ಗಾಯವಾಗಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ದಿನ್ನು ಅಮೆರಿಕದ ಹಿರಿಯ ಅಧಿಕಾರಿಗಳು ಕೂಡ ಮುನರುಚ್ಛರಿಸಿದ್ದರು. ಆದರೆ ಎರಡು ವಾರಗಳ ಬಳಿಕ ಸತ್ಯ ಒಪ್ಪಿಕೊಂಡಿರುವ ಅಮೆರಿಕ 34 ಸೈನಿಕರಿಗೆ ಗಾಯವಾಗಿರುವುದನ್ನು ಒಪ್ಪಿಕೊಂಡಿದೆ. ಇವರೆಲ್ಲರಿಗೂ ಮೆದುಳಿನಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಸೇನೆ ಸ್ಪಷ್ಟಪಡಿಸಿದೆ. ಇವರನ್ನು ಆರಂಭದಲ್ಲಿ ಚಿಕಿತ್ಸೆಗಾಗಿ ಜರ್ಮನಿಗೆ ರವಾನಿಸಲಾಗಿತ್ತು. ಆದರೆ ಈಗ ಅವರೆಲ್ಲರನ್ನೂ ಅಮೆರಿಕಕ್ಕೆ ಕರೆತರಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಇರಾಕ್‌ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಮತ್ತೆ ರಾಕೆಟ್ ದಾಳಿಇರಾಕ್‌ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಮೇಲೆ ಮತ್ತೆ ರಾಕೆಟ್ ದಾಳಿ

 80ಕ್ಕೂ ಹೆಚ್ಚು ಸೈನಿಕರ ಹತ್ಯೆಯಾಗಿದೆ ಎಂದಿದ್ದ ಇರಾನ್

80ಕ್ಕೂ ಹೆಚ್ಚು ಸೈನಿಕರ ಹತ್ಯೆಯಾಗಿದೆ ಎಂದಿದ್ದ ಇರಾನ್

ಜನವರಿ 8ರ ಕ್ಷಿಪಣಿ ದಾಳಿಯಲ್ಲಿ ಅಮೆರಿಕ ಸೇನೆಯ 80ಕ್ಕೂ ಅಧಿಕ ಸಿಬ್ಬಂದಿಯ ಹತ್ಯೆಯಾಗಿದೆ. ಈ ಮೂಲಕ ಖಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿದ್ದವು.ಆದರೆ ಇದಕ್ಕೆ ಪ್ರತಿಯಾಗಿ ಅಮೆರಿಕ ಕಠಿಣ ಸೇನಾ ಕ್ರಮದ ಎಚ್ಚರಿಕೆ ನೀಡಿದ ಬಳಿಕ ಇರಾನ್ ಕೂಡ ಯೂ ಟರ್ನ್ ಹೊಡೆದಿತ್ತು. ಯಾವುದೇ ಸೈನಿಕರನ್ನು ದಾಳಿಯಲ್ಲಿ ಸಾಯಿಸಲಾಗಿಲ್ಲ. ಇದು ಕೇವಲ ಸಾಂಕೇತಿಕ ದಾಳಿಯಾಗಿತ್ತು ಎಂದು ಹೇಳಿಕೊಂಡಿತ್ತು.

 ನಡೆಯುತ್ತಲೇ ಇರುವ ಕ್ಷಿಪಣಿ ದಾಳಿ

ನಡೆಯುತ್ತಲೇ ಇರುವ ಕ್ಷಿಪಣಿ ದಾಳಿ

ಇರಾಕ್‌ನಲ್ಲಿ ಅಮೆರಿಕದ ಗುತ್ತಿಗೆದಾರರೊಬ್ಬರ ಹತ್ಯೆ ಹಾಗೂ ರಾಯಭಾರಿ ಕಚೇರಿ ಮೇಲೆ ಕ್ಷಿಪಣಿ ದಾಳಿಯ ಬಳಿಕ ಇರಾನ್ ಸೇನಾ ಮುಖ್ಯಸ್ಥ ಖಾಸಿಮ್ ಸುಲೈಮಾನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ನಡೆದ ಇರಾನ್ ಕ್ಷಿಪಣಿ ದಾಳಿಗೆ 34 ಮಂದಿ ಗಾಯಗೊಂಡಿರುವುದು ಈಗ ವರದಿಯಾಗಿದೆ. ಈ ಹಿಂದೆಯೇ ಪ್ರತೀಕಾರದ ಮಾತನ್ನಾಡಿದ್ದ ಇರಾನ್ ಕ್ಷಿಪಣಿ ದಾಳಿಯನ್ನು ಇನ್ನೂ ನಿಲ್ಲಿಸಿಲ್ಲ. ಬಾಗ್ದಾದ್‌ನಲ್ಲಿದ ರಾಯಭಾರಿ ಕಚೇರಿ ಸುತ್ತಮುತ್ತ ಈಗಾಗಲೇ 4 ದಾಳಿ ನಡೆಸಿದೆ. ಆದರೆ ಈ ದಾಳಿಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ, ಅಥವಾ ಮೃತಪಟ್ಟಿಲ್ಲ.

ಉಕ್ರೇನ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ನೀಡಲ್ಲ: ಯೂಟರ್ನ್ ಹೊಡೆದ ಇರಾನ್ಉಕ್ರೇನ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ನೀಡಲ್ಲ: ಯೂಟರ್ನ್ ಹೊಡೆದ ಇರಾನ್

 ಮಾಯವಾದ ಯುದ್ಧದ ಛಾಯೆ

ಮಾಯವಾದ ಯುದ್ಧದ ಛಾಯೆ

ಖಾಸಿಂ ಸುಲೈಮಾನಿ ಹತ್ಯೆ ಬಳಿಕ ಮಧ್ಯ ಪ್ರಾಚ್ಯದಲ್ಲಿ ಸಮರ ಛಾಯೆ ಆವರಿಸಿತ್ತು. ಯಾವುದೇ ಕ್ಷಣದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ನೇರ ಯುದ್ಧ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಇದರಿಂದ ತೈಲ ಬೆಲೆಗಳು ಗಗನಕ್ಕೇರುತ್ತಿದ್ದವು. ಆದರೆ ಉಭಯ ದೇಶಗಳು ಸೇನಾ ಪ್ರತೀಕಾರ ಕ್ರಮಗಳ ಮೇಲೆ ನಿಯಂತ್ರಣ ಹೇರಿದ್ದರಿಂದ ಯುದ್ಧದ ಕಾರ್ಮೋಡ ಸರಿದಿದೆ. ಸದ್ಯಕ್ಕೆ ಮಧ್ಯಪ್ರಾಚ್ಯದಲ್ಲಿ ಇಂತಹ ನೇರ ಯುದ್ಧ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಆದಾಗ್ಯೂ ಇರಾನ್ ಸುಮ್ಮನೆ ಕೂರುವ ರಾಷ್ಟ್ರವಲ್ಲ, ಪ್ರತೀಕಾರದ ಕ್ರಮ ಏನಾಗಿರಬಹುದು ಎಂಬ ಆತಂಕ ಮಿಶ್ರಿತ ಕುತೂಹಲ ಎಲ್ಲರನ್ನು ಕಾಡುತ್ತಿದೆ.

English summary
Finally US Government clarified that 34 army personnel injured after January 8 Iran Areal Strike On US Army Base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X