ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನ

|
Google Oneindia Kannada News

ಇಂದಿನಿಂದ ಅಮೆರಿಕದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಜೋ ಬೈಡನ್ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿಗೆ ಏರಲಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಹೊಸ ಯುಗ ಆರಂಭವಾಗಲಿದೆ. ಇಷ್ಟು ಮಾತ್ರವಲ್ಲ, ಜೋ ಬೈಡನ್ ಚುನಾವಣೆ ಸಮಯದಲ್ಲಿ ಮಾತು ಕೊಟ್ಟಂತೆ ಭಾರತ ಮೂಲದವರಿಗೆ ಸಾಕಷ್ಟು ಮನ್ನಣೆ ನೀಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ತಮ್ಮ ಸಂಪುಟದಲ್ಲೇ 20 ಭಾರತೀಯರಿಗೆ ಸ್ಥಾನ ಕೊಟ್ಟಿದ್ದಾರೆ. 20 ಜನರ ಪೈಕಿ 17 ಖಾತೆಗಳು ಪ್ರಬಲವೆಂದು ಕರೆಯಬಹುದಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಭಾರತೀಯರನ್ನ ಸೆಳೆಯಲು ಟ್ರಂಪ್ ಹಾಗೂ ಬೈಡನ್ ಮಧ್ಯೆ ದೊಡ್ಡ ಸಮರ ನಡೆದಿತ್ತು. ಏಕೆಂದರೆ ಭಾರತೀಯರ ಬಲ ಇಲ್ಲದೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂಬ ವಿಚಾರ ಇಬ್ಬರಿಗೂ ತಿಳಿದಿತ್ತು. ಹೀಗೆ ಭಾರತೀಯರ ಮನವೊಲಿಕೆಗೆ ಸರ್ಕಸ್ ಮಾಡಿದ್ದರು. ಲಕ್ಷಾಂತರ ಮತ ಮಿಸ್ ಮಾಡಬಾರದು ಅಂತಾ ಸಾಕಷ್ಟು ಪ್ಲಾನ್‌ಗಳನ್ನು ಟ್ರಂಪ್ ಹಾಗೂ ಬೈಡನ್ ಮಾಡಿದ್ದರು.

ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್

ಆದರೆ ಭಾರತ ಮೂಲದ ಅಮೆರಿಕನ್ನರು ಇಷ್ಟಪಟ್ಟಿದ್ದು ಬೈಡನ್ ಅವರನ್ನು. ಹೌದು ಬೈಡನ್ ಭರ್ಜರಿ ಗೆಲುವಿನ ಹಿಂದೆ ನಮ್ಮ ದೇಶದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿರುವವರ ಪಾಲು ದೊಡ್ಡದಿದೆ. ಅಂದಹಾಗೆ ಇದೇ ಕಾರಣಕ್ಕೆ ಚುನಾವಣೆ ಸಮದಲ್ಲಿ ಬೈಡನ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಇದರಿಂದ ಭಾರತಕ್ಕೇನು ಲಾಭ..?

ಇದರಿಂದ ಭಾರತಕ್ಕೇನು ಲಾಭ..?

ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಹಿಡಿದು, ಭದ್ರತಾ ಮಂಡಳಿವರೆಗೂ ಇನ್ನು ಮುಂದೆ ಭಾರತ ಮೂಲದ ಪ್ರತಿಭೆಗಳು ರಾರಾಜಿಸಲಿವೆ. ಇದರಿಂದ ಭಾರತಕ್ಕೆ ಸಾಕಷ್ಟು ಲಾಭವಿದೆ. ಸಚಿವ ಸ್ಥಾನದಲ್ಲಿ ನಮ್ಮ ದೇಶದವರು ಕೂತಾಗ, ಅದರಿಂದ ನಮ್ಮ ದೇಶಕ್ಕೆ ಸಾಕಷ್ಟು ಅನುಕೂಲವಾಗಲಿದೆ. ನಮ್ಮ ಸುತ್ತಮುತ್ತ ಚೀನಾ ಹಾಗೂ ಪಾಕಿಸ್ತಾನದಂತಹ ಶತ್ರು ರಾಷ್ಟ್ರಗಳು ಕಾಲು ಕೆರೆದು ಜಗಳಕ್ಕೆ ಬರುತ್ತಿರುವಾಗ ನಮಗೆ ಅಮೆರಿಕದ ಸಾಥ್ ಅತ್ಯಗತ್ಯ. ಹೀಗಾಗಿ ಭಾರತಕ್ಕೆ ಬೈಡನ್ ಸಂಪುಟದ ಭಾರತೀಯರು ಬಲ ತುಂಬಲಿದ್ದಾರೆ. ಅದರಲ್ಲೂ ಕರ್ನಾಟಕ ಮೂಲದ ಇಬ್ಬರು ಜೋ ಬೈಡನ್ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾದ್ರೆ ಬೈಡನ್ ಸಂಪುಟ ಸೇರಿದ ಭಾರತೀಯರು ಹಾಗೂ ಅವರ ಹುದ್ದೆಯ ವಿವರ ಮುಂದೆ ತಿಳಿಯೋಣ.

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ

ಅಮೆರಿಕದಲ್ಲಿ ‘ತಿರಂಗ’..!

ಅಮೆರಿಕದಲ್ಲಿ ‘ತಿರಂಗ’..!

1 ಡಾ. ವಿವೇಕ್ ಮೂರ್ತಿ, ಅಮೆರಿಕ ಸರ್ಜನ್ ಜನರಲ್
2 ಮಾಲಾ ಅಡಿಗ, ಪ್ರಥಮ ಮಹಿಳೆಯ ನೀತಿ ನಿಯಮ ನಿರ್ದೇಶಕಿ
3 ನೀರಾ ಟಂಡನ್, ಶ್ವೇತಭವನ ನಿರ್ವಹಣೆ, ಬಜೆಟ್ ಸಹಾಯಕ ನಿರ್ದೇಶಕಿ
4 ವನಿತಾ ಗುಪ್ತಾ, ನ್ಯಾಯಾಂಗ ಇಲಾಖೆ ಸಹಾಯಕ ಅಟಾರ್ನಿ ಜನರಲ್
5 ಸಬ್ರಿಯಾನಾ ಸಿಂಗ್, ಮಾಧ್ಯಮ ಉಪಕಾರ್ಯದರ್ಶಿ
6 ಗರೀಮಾ ವರ್ಮಾ, ಡಿಜಿಟಲ್ ನಿರ್ದೇಶಕಿ
7 ಉಜ್ರಾ ಝೇಯಾ, ವಿದೇಶಾಂಗ ಇಲಾಖೆ ವಿಭಾಗ
8 ವಿನಯ್ ರೆಡ್ಡಿ, ಅಧ್ಯಕ್ಷರ ಭಾಷಣ ಬರಹದ ನಿರ್ದೇಶಕ
9 ವೇದಾಂತ್ ಪಟೇಲ್, ಸಹಾಯಕ ಮಾಧ್ಯಮ ಕಾರ್ಯದರ್ಶಿ
10 ಐಶಾ ಶಾ, ವೈಟ್‌ಹೌಸ್‌ನ ಡಿಜಿಟಲ್ ಸ್ಟ್ರಾಟಜಿ ವಿಭಾಗ
11 ಗೌತಮ್ ರಾಘವನ್, ಅಧ್ಯಕ್ಷರ ಸಿಬ್ಬಂದಿ ಕಚೇರಿ
12 ಸೋನಿಯಾ ಅಗರ್ವಾಲ್, ಹವಾಮಾನ ನೀತಿ ವಿಭಾಗ
13 ಭರತ್ ರಾಮಮೂರ್ತಿ, ನ್ಯಾಷನಲ್ ಎಕನಾಮಿಕ್ ಕೌನ್ಸಿಲ್
14 ಸಮೀರಾ ಫಾಜಿಲ್, ನ್ಯಾಷನಲ್ ಎಕನಾಮಿಕ್ ಕೌನ್ಸಿಲ್
15 ವಿಧುರ್ ಶರ್ಮಾ, ಕೊರೊನಾ ನಿರ್ವಹಣಾ ತಂಡ
16 ತರುಣ್ ಛಬ್ರಾ, ತಂತ್ರಜ್ಞಾನ ಮತ್ತು ರಾಷ್ಟ್ರೀಯ ಭದ್ರತಾ ನಿರ್ದೇಶಕ
17 ಸುಮೋನಾ ಗುಹಾ, ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕಿ
18 ಶಾಂತಿ ಕಲಥಿಲ್, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕು ಸಂಯೋಜನೆ
19 ನೇಹಾ ಗುಪ್ತಾ, ಸಹಾಯಕ ಸಲಹೆಗಾರ್ತಿ
20 ರೀಮಾ ಶರ್ಮಾ, ಉಪ ಸಹಾಯಕ ಸಲಹೆಗಾರ್ತಿ

13 ಭಾರತೀಯ ನಾರಿಯರಿಗೆ ಸ್ಥಾನ

13 ಭಾರತೀಯ ನಾರಿಯರಿಗೆ ಸ್ಥಾನ

ಬೈಡನ್ ಸಂಪುಟದ ಬಗ್ಗೆ ಅತಿಮುಖ್ಯವಾಗಿ ಹೇಳಬೇಕಾದ ಮಾತೆಂದರೆ, ಇದೀಗ 20 ಭಾರತೀಯರನ್ನು ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿರುವ ಬೈಡನ್ ಅದರಲ್ಲಿ 13 ಭಾರತ ಮೂಲದ ಮಹಿಳೆಯರಿಗೆ ಸ್ಥಾನ ನೀಡಿದ್ದಾರೆ. ಇದು ಅಮೆರಿಕ ಇತಿಹಾಸದಲ್ಲೇ ದೊಡ್ಡ ನಿರ್ಣಯ. ಈವರೆಗೆ ಇಷ್ಟೊಂದು ಪ್ರಮಾಣದಲ್ಲಿ ಭಾರತೀಯರನ್ನು ಯಾವುದೇ ಅಮೆರಿಕನ್ ಅಧ್ಯಕ್ಷ ತನ್ನ ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ ಭಾರತೀಯರ ಪ್ರತಿಭೆಗೆ ಈ ಬಾರಿ ಬೈಡನ್ ತಲೆಬಾಗಿದ್ದಾರೆ. ಅತ್ಯುತ್ತಮ ಸ್ಥಾನಗಳಿಗೆ ಭಾರತ ಮೂಲದವರನ್ನೇ ಆಯ್ಕೆ ಮಾಡಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಆದ್ಯತೆ ನೀಡಿರುವುದು ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣ

ಕಮಲಾ ಸಾಧನೆ ಅವಿಸ್ಮರಣೀಯ

ಕಮಲಾ ಸಾಧನೆ ಅವಿಸ್ಮರಣೀಯ

ಅಮೆರಿಕ ಎಂದರೆ ಕೈಗೆಟುಕದ ಕುಸುಮ ಎಂಬ ಕಾಲವೊಂದಿತ್ತು. ಆದರೆ ಈಗ ಮಾತು ಬದಲಾಗಿದೆ. ಅದನ್ನು ಸಾಧಿಸಿದ್ದು ಕಮಲಾ ಹ್ಯಾರಿಸ್. ಭಾರತದ ತಮಿಳುನಾಡು ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಇದೀಗ ಅಮೆರಿಕದ ಉಪಾಧ್ಯಕ್ಷೆ. ಈ ಮೂಲಕ ಅಮೆರಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರಿಗೆ ಇಂತಹದ್ದೊಂದು ದೊಡ್ಡ ಅವಕಾಶ ಸಿಕ್ಕಂತಾಗಿದೆ. ಬೈಡನ್ ಗೆಲುವಲ್ಲಿ ಕಮಲಾ ಹ್ಯಾರಿಸ್ ಆಯ್ಕೆ ಪರಿಣಾಮ ದೊಡ್ಡದಿದೆ. ಹೇಗೆಂದರೆ ಕಮಲಾ ಹ್ಯಾರಿಸ್ ತಾಯಿ ಭಾರತ ಮೂಲದವರು ಹಾಗೂ ಅವರ ತಂದೆ ಜಮೈಕನ್ ಆಗಿದ್ದು, ಇದೇ ಕಾರಣಕ್ಕೆ ಒಂದು ಕಡೆ ಭಾರತೀಯರ ಮತ ಹಾಗೂ ಮತ್ತೊಂದ್ಕಡೆ ಆಫ್ರಿಕನ್-ಅಮೆರಿಕನ್ಸ್ ಮತಗಳನ್ನು ಬೈಡನ್ ಕೊಳ್ಳೆ ಹೊಡೆದರು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಲಾಗುತ್ತಿದೆ.

46ನೇ ಅಧ್ಯಕ್ಷ ಜೋ ಬೈಡನ್

46ನೇ ಅಧ್ಯಕ್ಷ ಜೋ ಬೈಡನ್

ಟ್ರಂಪ್ ಕಟ್ಟಿದ ಮಹಾಗೋಡೆ ಛಿದ್ರ ಮಾಡಿ ನೂರಾರು ಅಡೆತಡೆಗಳ ಮಧ್ಯೆ ಜೋ ಬೈಡನ್ ಗೆದ್ದು ಬೀಗಿದ್ದಾರೆ. ಟ್ರಂಪ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಬೈಡನ್ ಪದಗ್ರಹಣಕ್ಕೆ ಸಕಲಸಿದ್ಧತೆ ನಡೆದಿದೆ. ಒಟ್ಟು 306 ಎಲೆಕ್ಟೋರಲ್ ಮತಗಳನ್ನು ಪಡೆದು ಬೈಡನ್ ಅಮೆರಿಕದ ಅಧ್ಯಕ್ಷೀಯ ಖುರ್ಚಿ ಮೇಲೆ ಕೂರುತ್ತಿದ್ದಾರೆ. ಆದ್ರೆ 232 ಎಲೆಕ್ಟೋರಲ್ ಮತ ಪಡೆದಿರುವ ಟ್ರಂಪ್ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಪಕ್ಕಾ ಆಗಿದೆ. ಅದಕ್ಕಾಗಿ ಭರದ ಸಿದ್ಧತೆಗಳು ಸಾಗಿವೆ.

ಕೊರೊನಾ ಕೂಪದಲ್ಲಿ ಅಮೆರಿಕ

ಕೊರೊನಾ ಕೂಪದಲ್ಲಿ ಅಮೆರಿಕ

ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಸದ್ಯ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕದ ಅರ್ಥ ವ್ಯವಸ್ಥೆಗೆ ಮಾಡಿರುವ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿರಲಾರದು, ಬದಲಾಗಿ ಮುಳ್ಳಿನ ಹಾದಿಯಾಗಲಿದೆ. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

English summary
Biden appointed 20 Indian-Americans in his administration & From today onwards they will be in power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X