ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋಸೆಫ್ ಬೈಡನ್ ಬರೆದ ದಾಖಲೆ ಏನು?

|
Google Oneindia Kannada News

ವಾಷಿಂಗ್ಟನ್, ಜನವರಿ 20: ಅಮೆರಿಕದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜೋ ಬೈಡನ್ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಟ್ರಂಪ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಬೈಡನ್ ಪದಗ್ರಹಣ ಮಾಡಿದ್ದಾರೆ. ಅಲ್ಲದೆ, ವಯೋಮಿತಿ ವಿಷಯದಲ್ಲೂ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರನ್ನು ಜೋ ಬೈಡನ್ ಹಿಂದಿಕ್ಕಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರಅಮೆರಿಕದ 46ನೇ ಅಧ್ಯಕ್ಷ ಜೋಸೆಫ್ ಬೈಡನ್ ವ್ಯಕ್ತಿಚಿತ್ರ

59ನೇ ಅಧ್ಯಕ್ಷೀಯ ಉದ್ಘಾಟನಾ ಸಮಾರಂಭದಲ್ಲಿಂದು ಯುಎಸ್ ಕ್ಯಾಪಿಟಲ್ ಕಟ್ಟಡದಲ್ಲಿ 78 ವರ್ಷ ವಯಸ್ಸಿನ ಜೋಸೆಫ್ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅಧ್ಯಕ್ಷರ ಪೈಕಿ ಬೈಡನ್ ಅತ್ಯಂತ ಹಿರಿಯರೆನಿಸಿದ್ದಾರೆ.

20 Indian-Americans Officially Join Biden’s Administration From Jan 2

ಕ್ಯಾಥೊಲಿಕ್ ಕುಟುಂಬದಲ್ಲಿ 1942ರ ನವೆಂಬರ್ 20ರಂದು ಜನಿಸಿದ ಜೋಸೆಫ್ ಬೈಡನ್ ಅವರು ಮೂರನೇ ಪ್ರಯತ್ನದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದಾರೆ. ಈ ಹಿಂದೆ ಬರಾಕ್ ಒಬಾಮಾ ಆಡಳಿತದಲ್ಲಿ 2013ರಿಂದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕಾರಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಪ್ರಮಾಣವಚನ ಸ್ವೀಕಾರ

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಜನವರಿ 2017ರಲ್ಲಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ 70 ವರ್ಷ 220 ದಿನಗಳಾಗಿತ್ತು. ಈ ದಾಖಲೆಯನ್ನು 78 ವರ್ಷ ವಯಸ್ಸಿನ ಬೈಡನ್ ಅಳಿಸಿ ಹಾಕಲಿದ್ದಾರೆ. ಜೊತೆಗೆ ಅಮೆರಿಕಾದ ಇತಿಹಾಸದಲ್ಲಿ ಆರನೇ ಕಿರಿಯ ಸೆನೆಟರ್, ನಾಲ್ಕನೇ ಹಿರಿಯ ಸೆನೆಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?

ಜೋಸೆಫ್ ಅವರಿಗೆ ನಾಲ್ಕು ಒಡಹುಟ್ಟಿದವರರಿದ್ದು, ಜೋ ಮೊದಲನೆಯವರು. ಒಬ್ಬ ಸಹೋದರಿ ಮತ್ತು ಇಬ್ಬರು ಸಹೋದರರನ್ನು ಹೊಂದಿದ್ದಾರೆ. ಪೆನ್ಸಿಲ್ವೇನಿಯಾದ ಸ್ಕ್ರ್ಯಾಂಟನ್ ಡೆಲಾವೇರ್, ನ್ಯೂ ಕ್ಯಾಸಲ್ ಕೌಂಟಿಯಲ್ಲಿ ಬೆಳೆದರು. ತಾಯಿ ಜೀನ್ ಐರೀಷ್ ಮೂಲದವರಾಗಿದ್ದು, ಜೋಸೆಫ್ ಬೈಡನ್ ತೈಲ ಉದ್ಯಮಿಯಾಗಿದ್ದು ಮೇರಿಲ್ಯಾಂಡ್ ಬಾಲ್ಟಿಮೋರ್ ಮೂಲದವರು. ಇಂಗ್ಲೀಷ್, ಫ್ರೆಂಚ್, ಐರೀಷ್ ಬೇರುಗಳನ್ನು ಹೊಂದಿರುವ ಕುಟುಂಬ ಇವರದ್ದು.

English summary
Biden appointed 20 Indian-Americans in his administration &> From today onwards they will be in power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X