ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಯಾರ್ಕ್‌ನ ಅಪಾರ್ಟ್‌ಮೆಂಟ್‌ನಲ್ಲಿ ಭಯಾನಕ ಬೆಂಕಿ: 19 ಸಾವು-63 ಜನರಿಗೆ ಗಾಯ

|
Google Oneindia Kannada News

ನ್ಯೂಯಾರ್ಕ್ ಜನವರಿ 10: ನ್ಯೂಯಾರ್ಕ್ ನಗರದಲ್ಲಿ ಭಾನುವಾರದಂದು ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. "ಇದು ನಮ್ಮ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಅಗ್ನಿ ಘಟನೆಗಳಲ್ಲಿ ಒಂದಾಗಿದೆ. ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿ 19 ಜನರು ಸತ್ತಿದ್ದಾರೆ ಮತ್ತು ಇನ್ನೂ ಹಲವಾರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಜೊತೆಗೆ 63 ಜನರು ಗಾಯಗೊಂಡಿದ್ದಾರೆ" ಎಂದು ಅಲ್ಲಿನ ಮೇಯರ್ ಎರಿಕ್ ಆಡಮ್ಸ್ ಸಿಎನ್‌ಎನ್‌ಗೆ ತಿಳಿಸಿದರು.

"ನಾವು ಕಳೆದುಕೊಂಡವರಿಗಾಗಿ ಪ್ರಾರ್ಥಿಸಲು ನನ್ನೊಂದಿಗೆ ಸೇರಿ, ವಿಶೇಷವಾಗಿ 9 ಮುಗ್ಧ ಯುವ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋರ್ಟಬಲ್ ಎಲೆಕ್ಟ್ರಿಕ್ ಹೀಟರ್‌ನಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. "ಪ್ರತ್ಯಕ್ಷ ಸಾಕ್ಷಿಗಳ ಆಧಾರದ ಮೇಲೆ ಪೋರ್ಟಬಲ್ ಎಲೆಕ್ಟ್ರಿಕ್ ಹೀಟರ್‌ನಿಂದ ಮಲಗುವ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ" ಎಂದು ನ್ಯೂಯಾರ್ಕ್ ಸಿಟಿ ಅಗ್ನಿಶಾಮಕ ಇಲಾಖೆಯ ಆಯುಕ್ತ ಡೇನಿಯಲ್ ನಿಗ್ರೋ ಸುದ್ದಿಗಾರರಿಗೆ ತಿಳಿಸಿದರು.

ಬ್ರಾಂಕ್ಸ್ ಮೃಗಾಲಯದ ಪೂರ್ವ 181 ನೇ ಬೀದಿಯಲ್ಲಿರುವ 19 ಅಂತಸ್ತಿನ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಬೆಳಗ್ಗೆ 11:00 (1600 GMT)ಕ್ಕೆ ಸ್ಫೋಟಗೊಂಡ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಗಾಬರಿಗೊಂಡ ಜನ ಮಹಡಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಹತಾಶವಾಗಿ ಕಟ್ಟಡ ಮೇಲೆ ಅತ್ತಿತ್ತ ಓಡಾಡುವ ದೃಶ್ಯಗಳು ಕಂಡುಬಂದಿವೆ. ತಕ್ಷಣ ಸ್ಥಳಕ್ಕೆ 200 ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.

19 Dead In New Yorks Worst Apartment Fire In Decades

"ನಾನು 15 ವರ್ಷಗಳಿಂದ ಇಲ್ಲಿದ್ದೇನೆ ಮತ್ತು ನಾನು ಈ ರೀತಿಯದನ್ನು ನೋಡುತ್ತಿರುವುದು ಇದೇ ಮೊದಲು. ಮುಗಿಲೆತ್ತರಕ್ಕೆ ದಟ್ಟವಾದ ಹೊಗೆ ಹೋಗುವುದನ್ನು ನಾನು ನೋಡಿದೆ. ಬಹಳಷ್ಟು ಜನರು ಭಯಭೀತರಾಗಿದ್ದರು. ಯಾರೂ ಕಟ್ಟಡದಿಂದ ಜಿಗಿಯಲು ಧೈರ್ಯ ಮಾಡಲಿಲ್ಲ. ತಪ್ಪಿಸಿಕೊಳ್ಳಲೂ ಸಾಧ್ಯವಾಗದೇ ಹತಾಶರಾಗಿದ್ದರು. ಜನರು ಕಿಟಕಿಗಳಿಂದ ತಮ್ಮ ರಕ್ಷಣೆಗೆ ಅಂಗಲಾಚುತ್ತಿದ್ದರು" ಎಂದು ಸ್ಥಳಿಯರೊಬ್ಬರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಐದು ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಅನೇಕರು ಹೃದಯ ಮತ್ತು ಉಸಿರಾಟ ಸ್ತಂಭನ ಮತ್ತು ತೀವ್ರವಾದ ಹೊಗೆಯಿಂದ ಉಸಿರಾಡುವುದಕ್ಕೆ ತೊಂದರೆ ಅನುಭವಿಸುತ್ತಿದ್ದರು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆಯ ಕಮಿಷನರ್ ಡೇನಿಯಲ್ ನಿಗ್ರೋ ಅವರು ಬೆಂಕಿ ವೇಗವಾಗಿ ಆವರಿಸಿದೆ ಮತ್ತು ಹೊಗೆ ದಟ್ಟವಾಗಿದೆ ಆವರಿಸಿಕೊಂಡ ಪರಿಣಾಮ ಜನ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದರು.

ಸದಸ್ಯರು ಪ್ರತಿ ಮಹಡಿಯಲ್ಲಿ, ಮೆಟ್ಟಿಲಸಾಲುಗಳಲ್ಲಿ ಕುಳಿತು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ಇಲ್ಲಿ ಇದೇ ರೀತಿ ಅಗ್ನಿ ಅವಗಢ ಸಂಭವಿಸಿತ್ತು ಎಂದು ನಿಗ್ರೋ ಸುದ್ದಿಗಾರರಿಗೆ ತಿಳಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಕಟ್ಟಡದ ಮೂರನೇ ಅಂತಸ್ತಿನ ಕಿಟಕಿಯಿಂದ ಜ್ವಾಲೆ ಮತ್ತು ದಟ್ಟವಾದ ಕಪ್ಪು ಹೊಗೆಯನ್ನು ತೋರಿಸುತ್ತವೆ. ಅಗ್ನಿಶಾಮಕ ದಳದವರು ಹತ್ತಿರದ ಏಣಿಯ ಮೇಲೆ ಕಾರ್ಯಾಚರಣೆ ನಡೆಸಿದರು.

ಕಟ್ಟಡದ ಎರಡು ಮತ್ತು ಮೂರನೇ ಮಹಡಿಯಲ್ಲಿರುವ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಿದ್ದು, ಬೆಂಕಿ ಮತ್ತು ಹೊಗೆ ಹರಡಲು ಅವಕಾಶ ಮಾಡಿಕೊಟ್ಟಿದೆ. ಬಾಗಿಲು ಮುಚ್ಚಿದರೆ ಹೊಗೆ ಮತ್ತು ಬೆಂಕಿಯ ಹರಡುವಿಕೆಯು ಆ ಅಪಾರ್ಟ್ಮೆಂಟ್ನಲ್ಲಿ ಸಾಧ್ಯವಾಗುತ್ತಿರಲಿಲ್ಲ. ಈ ಕಟ್ಟಡ ಅಗ್ನಿಶಾಮಕಗಳನ್ನು ಹೊಂದಿಲ್ಲ. ಅನೇಕ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ . ಬೆಂಕಿಯ ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಅಗ್ನಿಶಾಮಕ ಮಾರ್ಷಲ್‌ಗಳು ತನಿಖೆ ನಡೆಸುತ್ತಿದ್ದಾರೆ ಎಂದು ನಿಗ್ರೋ ಹೇಳಿದರು.

ಈ ಹಿಂದೆ 1990 ರಲ್ಲಿ ಬ್ರಾಂಕ್ಸ್‌ನಲ್ಲಿರುವ ಹ್ಯಾಪಿ ಲ್ಯಾಂಡ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ 87 ಜನರನ್ನು ಕೊಂದಿತ್ತು. ಈ ಘಟನೆಯನ್ನು ಪುನಃ ನೆನೆಯುವಂತಾಗಿದೆ. "ಇದು ನಿಜವಾಗಿಯೂ ನಮಗೆ ಭಯಾನಕ ದಿನ" ಎಂದು ನಿಗ್ರೋ ಹೇಳಿದರು. ಇನ್ನೂ ಡಿಸೆಂಬರ್ 2017 ರಲ್ಲಿ, ನ್ಯೂಯಾರ್ಕ್ ನಗರದ ಬ್ರಾಂಕ್ಸ್‌ನಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ 25 ವರ್ಷಗಳಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 13 ಜನರು ಸಾವನ್ನಪ್ಪಿದ್ದರು. ಫಿಲಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಸಾರ್ವಜನಿಕ ವಸತಿ ಕಟ್ಟಡದಲ್ಲಿ ಎಂಟು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದ ಕೇವಲ ನಾಲ್ಕು ದಿನಗಳ ನಂತರ ಭಾನುವಾರ ಈ ಘಟನೆ ಸಂಭವಿಸಿದೆ.

Recommended Video

Rishabh Pant ಬಾಯಲ್ಲಿ ಬ್ಯಾಟ್ ಬೀಸುವುದನ್ನು ಬಿಡ್ಬೇಕು!!! ಬೇಕಿತ್ತಾ ಪಂತ್... | Oneindia Kannada

English summary
At least 19 people died, including nine children, and dozens were injured when a fire tore through a high-rise apartment building in New York City on Sunday, its mayor said, in one of America's worst residential fires in recent memory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X