ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜರ್ಸಿಯ ನರ್ಸಿಂಗ್ ಹೋಂ ಶೆಡ್‌ನಲ್ಲಿ ಶವಗಳ ರಾಶಿ: ಬೆಚ್ಚಿಬಿದ್ದ ಪೊಲೀಸರು

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 16: ನ್ಯೂ ಜರ್ಸಿಯ ಅತಿದೊಡ್ಡ ನರ್ಸಿಂಗ್ ಹೋಂ ಶೆಡ್‌ನಲ್ಲಿ ಮೃತದೇವನ್ನು ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು ತೆರಳಿದಾಗ ಎಚ್ಚರಿ ಕಾದಿತ್ತು.

Recommended Video

ಅಮೆರಿಕಾದಲ್ಲಿ ನಾವು ಆತಂಕದಿಂದ ಬದುಕ್ತಿದ್ದೀವಿ, ಭಾರತ ನೋಡಿ ಅಮೆರಿಕಾ ಬುದ್ಧಿ ಕಲಿಯಬೇಕು | California | India

ಪೊಲೀಸರು ನರ್ಸಿಂಗ್ ಹೋಂ ಶೆಡ್‌ ಗೆ ತೆರಳಿ ನೋಡಿದಾಗ 17 ಶವಗಳಿತ್ತು. ಸುಮಾರು ಹೆಚ್ಚು ಅಂದರೆ 4 ಶವಗಳನ್ನು ಇರಿಸುವಷ್ಟು ಜಾಗದಲ್ಲಿ ಬರೋಬ್ಬರಿ 17 ಶವಗಳನ್ನು ಇರಿಸಲಾಗಿತ್ತು. ಶೆಡ್‌ನಲ್ಲಿ ಕೊರೊನಾದಿಂದ ಮೃತಪಟ್ಟಿದ್ದ 17 ಮಂದಿಯ ಶವವನ್ನು ಚಿಕ್ಕ ಜಾಗದಲ್ಲಿ ಒಂದೇ ಕಡೆ ಸಂಗ್ರಹಿಸಿಡಲಾಗಿತ್ತು.

ಕೊರೊನಾದಿಂದಾಗಿ ಅತಿ ಹೆಚ್ಚು ಮಂದಿ ಮೃತಪಡುತ್ತಿರುವುದರಿಂದ ಒಂದರ ಮೇಲೊಂದರಂತೆ ಶವಗಳನ್ನು ಎಸೆಯುತ್ತಿದ್ದರು.

17 Bodies Found At Nursing Home Hit By Virus

ಇದೊಂದೇ ನರ್ಸಿಂಗ್ ಹೋಂ ಅಲ್ಲ ನ್ಯೂಯಾರ್ಕ್ ಪ್ರಾಂತ್ಯದ ಬಹುತೇಕ್ ನರ್ಸಿಂಗ್ ಹೋಂಗಳಲ್ಲಿ ಕೊರೊನಾ ಚಿಕಿತ್ಸೆಗೆ ಇರಬೇಕಾದ ಸೌಲಭ್ಯಗಳ ಕೊರತೆ, ಹೆಚ್ಚುತ್ತಿರುವ ಸೋಂಕು ಹರಡುವಿಕೆ, ವೈಯಕ್ತಿಕ ಸುರಕ್ಷತೆ ಕಾಪಾಡಲು ಸೂಕ್ತ ಮುಂಜಾಗ್ರತಾ ಕ್ರಮಗಳ ಕೊರತೆ ಎಲ್ಲವೂ ಕಾಡುತ್ತಿದೆ.

68 ಮಂದಿ ದೀರ್ಘಕಾಲದ ಕಾಯಿಲೆ ಬಳಲುತ್ತಿದ್ದವರು , ಅದರಲ್ಲಿ 17 ಮಂದಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದರು. ಒಟ್ಟು 26 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ನರ್ಸಿಂಗ್ ಹೋಮ್‌ನ ಎರಡು ಕಟ್ಟಡಗಳಲ್ಲಿ ಬಾಕಿ ಉಳಿದಿರುವ 76 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಒಬ್ಬ ಆಡಳಿತಾಧಿಕಾರಿ ಸೇರಿ 41 ಸಿಬ್ಬಂದಿಗೆ ಕೊವಿಡ್ 19 ರೋಗದಿಂದ ಬಳಲುತ್ತಿದ್ದಾರೆ.

English summary
In New jersy When the police arrived, the corpse had been removed from the shed, but they discovered 17 bodies piled inside the nursing home in a small morgue intended to hold no more than four people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X