ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಪ್ರಚೋದನೆ’ಗೆ ತಕ್ಕ ಪ್ರತಿಕ್ರಿಯೆ..! ಪ್ರಚೋದಕ ಟ್ರಂಪ್‌ಗೆ ಶಾಕ್..!

|
Google Oneindia Kannada News

ಹೌದು, ನಿನ್ನೆ ಇಡೀ ದಿನ ಜಗತ್ತಿನ ಗಮನ ಅಮೆರಿಕದ ಸಂಸತ್ ಮೇಲೆ ನೆಟ್ಟಿತ್ತು. ಕ್ಯಾಪಿಟಲ್ ಹಿಲ್ ಮೇಲಿನ ದಾಳಿಯಿಂದ ರೊಚ್ಚಿಗೆದ್ದಿದ್ದ ಅಮೆರಿಕನ್ ಕಾಂಗ್ರೆಸ್ ಸದಸ್ಯರು, ಅಂದರೆ ಭಾರತದ ಲೆಕ್ಕದಲ್ಲಿ ಲೋಕಸಭೆಯ ಸದಸ್ಯರು ಟ್ರಂಪ್ ವಿರುದ್ಧ ವಾಗ್ದಂಡನೆಗೆ ಚಾಲನೆ ನೀಡಿದ್ದರು. ಅಮೆರಿಕದಲ್ಲಿ ಕಾಂಗ್ರೆಸ್ ಸದಸ್ಯರು ಕೆಳಮನೆ ಪ್ರತಿನಿಧಿಸುವ ಸಂಸದರು. ವಾಗ್ದಂಡನೆ ಪ್ರಕ್ರಿಯೆ ಮೊದಲು ಆರಂಭವಾಗುವುದು ಇಲ್ಲೇ.

ಅಂದುಕೊಂಡಂತೆ ಕೆಳಮನೆ ಸದಸ್ಯ ಪಡೆ ಟ್ರಂಪ್ ವಿರುದ್ಧದ ವಾಗ್ದಂಡನೆ ಅಂದರೆ ಇಂಪೀಚ್‌ಮೆಂಟ್ (Impeachment)ಗೆ ಅನುಮೋದನೆ ನೀಡಿ, ಸಹಿ ಮಾಡಿದ್ದಾರೆ. 232 ಮತಗಳು ಟ್ರಂಪ್ ಓಡಿಸಿ ಎಂದು ಚಲಾವಣೆಗೊಂಡರೆ 197 ಮತಗಳು ಟ್ರಂಪ್ ಪರ ಚಲಾವಣೆಯಾದವು. ಈ ಮೂಲಕ ಭಾರಿ ಅಂತರದಲ್ಲಿ ಟ್ರಂಪ್ ವಿರುದ್ಧ ಸಂಸದರು ಗೆಲುವು ಕಂಡಿದ್ದಾರೆ. ಪ್ರಕ್ರಿಯೆ ನಂತರ ಸೆನೆಟ್‌ಗೆ ವಾಗ್ದಂಡನೆ ಪ್ರಕ್ರಿಯೆ ವರ್ಗಾವಣೆಯಾಗಿದ್ದು, ಅಲ್ಲೂ ಕೂಡ ವೋಟಿಂಗ್ ನಡೆದು ಅಂತಿಮ ತೀರ್ಪು ಹೊರಬೀಳಲಿದೆ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

ಕೆಲ ತಿಂಗಳ ಹಿಂದೆ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾದ ವೇಳೆ ಕೆಳಮನೆ ಇದೇ ರೀತಿ ಅನುಮೋದಿಸಿತ್ತು. ಆದರೆ ಸೆನೆಟ್‌ನಲ್ಲಿ ವಾಗ್ದಂಡನೆಗೆ ಸೋಲು ಉಂಟಾಗಿ, ಟ್ರಂಪ್‌ಗೆ ಒಂದು ಚಾನ್ಸ್ ಸಿಕ್ಕಿತ್ತು. ಆದರೆ ಈ ಬಾರಿ ಅದು ಹುಸಿಯಾಗುವ ನಿರೀಕ್ಷೆ ಇದೆ.

2 ಬಾರಿ ವಾಗ್ದಂಡನೆ, ಟ್ರಂಪ್ ಸಾಧನೆ..!

2 ಬಾರಿ ವಾಗ್ದಂಡನೆ, ಟ್ರಂಪ್ ಸಾಧನೆ..!

ಅಮೆರಿಕದಲ್ಲಿ ಒಬ್ಬ ಅಧ್ಯಕ್ಷನ ವಿರುದ್ಧ ಎರಡೆರಡು ಬಾರಿ ವಾಗ್ದಂಡನೆ ಈವರೆಗೂ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿ ಟ್ರಂಪ್ ಅಂತಹದ್ದೊಂದು ಕೆಟ್ಟಸಾಧನೆ ಮಾಡಿದ್ದಾರೆ. ಟ್ರಂಪ್ ವಿರುದ್ಧ ಇದು 2ನೇ ವಾಗ್ದಂಡನೆ ಆಗಿದ್ದು, ಈ ಬಾರಿ ಟ್ರಂಪ್ ಖುರ್ಚಿ ನಡುಗುತ್ತಿದೆ. ಅಮೆರಿಕದ ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಟ್ರಂಪ್ ವಿರುದ್ಧ ಅವರದ್ದೇ ಪಕ್ಷದ ಸದಸ್ಯರನ್ನ ತಿರುಗಿಬೀಳುವಂತೆ ಮಾಡಿದೆ. ಇದೀಗ ಟ್ರಂಪ್ ವಿರುದ್ಧ ಚಲಾವಣೆಯಾಗಿರುವ 232 ಮತದಲ್ಲಿ 10 ಮತಗಳು ರಿಪಬ್ಲಿಕನ್ ಸದಸ್ಯರದ್ದು. ಎಂದರೆ ಸ್ವತಃ ಟ್ರಂಪ್ ಪಕ್ಷದ ಸದಸ್ಯರು ಕೂಡ ಟ್ರಂಪ್ ವಿರುದ್ಧ ಮತ ಹಾಕಿದ್ದಾರೆ.

ಪ್ರತಿಯೊಬ್ಬ ಸದಸ್ಯನ ಆಕ್ರೋಶ..!

ಪ್ರತಿಯೊಬ್ಬ ಸದಸ್ಯನ ಆಕ್ರೋಶ..!

ನಮ್ಮ ದೇಶದ ಇತಿಹಾಸದಲ್ಲೇ ಹೀಗೆ ಆಗಿರಲಿಲ್ಲ ಆದರೆ ಟ್ರಂಪ್ ಎಡವಟ್ಟಿನಿಂದ ಅಮೆರಿಕದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ. ಇದಕ್ಕೆಲ್ಲಾ ನೇರ ಹೊಣೆ ಟ್ರಂಪ್ ಅಲ್ಲದೆ ಬೇರೆ ಯಾರೂ ಅಲ್ಲ ಎಂದು ರಿಪಬ್ಲಿಕನ್ ಪಕ್ಷದ ಸದಸ್ಯರು ಗುಡುಗಿದ ಪ್ರಸಂಗ ನಿನ್ನೆ ನಡೆದಿದೆ. ಅಲ್ಲದೆ ನಾವು ಒಗ್ಗಟ್ಟಿನಿಂದ ಟ್ರಂಪ್‌ಗೆ ಈಗ ಮನೆ ದಾರಿ ತೋರಿಸಬೇಕಿದೆ ಎಂದು ಅಮೆರಿಕದ ಸಂಸದರು ಗುಡುಗಿದರು. ಈ ಮೂಲಕ 'ಕ್ಯಾಪಿಟಲ್ ಹಿಲ್' ಮೇಲಿನ ಭೀಕರ ದಾಳಿಗೆ ಅಮೆರಿಕ ಸಂಸತ್ ಟ್ರಂಪ್ ವಿರುದ್ಧ ರಿವೇಂಜ್ ತೆಗೆದುಕೊಳ್ಳಲು ಸಜ್ಜಾಗಿದೆ.

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಟ್ರಂಪ್‌ನ ಓಡಿಸೋದೆ ಸರಿಯಂತೆ..!

ಎಲೆಕ್ಟೊರಲ್ ಕಾಲೇಜ್ ಮತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಗುಂಪು, ಅಮೆರಿಕದ ಸಂಸತ್ ಇರುವ 'ಕ್ಯಾಪಿಟಲ್ ಹಿಲ್' ಕಟ್ಟಡಕ್ಕೆ ನುಗ್ಗಿ ಹಿಂಸಾಚಾರವನ್ನ ನಡೆಸಿತ್ತು. ಟ್ರಂಪ್ ಕುಮ್ಮಕ್ಕಿನಂತೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಸುಗಮ ಅಧಿಕಾರ ಹಸ್ತಾಂತರ ನಡೆಸಲು ಒಪ್ಪಿಕೊಂಡಿದ್ದರೂ, ಗಲಭೆ ಘಟನೆಯಿಂದ ಅಸಮಾಧಾನಗೊಂಡಿರುವ ಸಂಸದರು ಟ್ರಂಪ್ ನಡೆ ಬಗ್ಗೆ ಅನುಮಾನ ಇರುವುದರಿಂದ ಟ್ರಂಪ್ ಪದಚ್ಯುತಿ ಮಾರ್ಗ ಸೂಕ್ತವಾಗಿದೆ ಎನ್ನುತ್ತಿದ್ದಾರೆ. ಹೀಗಾಗಿಯೇ ಟ್ರಂಪ್ ವಿರುದ್ಧ ವಾಗ್ದಂಡನೆಗೆ ಚಾಲನೆ ಕೂಡ ಸಿಕ್ಕಿದ್ದು, ಅಮೆರಿಕ ಸಂಸತ್‌ನ ಕೆಳಮನೆ ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಸ್ತಾವನೆಯನ್ನ ಅನುಮೋದಿಸಿದೆ.

ಎಡವಟ್ಟುಗಳ ಸರದಾರ ಟ್ರಂಪ್..!

ಎಡವಟ್ಟುಗಳ ಸರದಾರ ಟ್ರಂಪ್..!

ಟ್ರಂಪ್‌ಗೆ ಜಗತ್ತಿನಾದ್ಯಂತ ಬೆಂಬಲಿಗರು ಹಾಗೂ ವಿರೋಧಿಗಳು ಇದ್ದಾರೆ. ಆದರೆ ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲಿನ ದಾಳಿ ಬಳಿಕ ಎಲ್ಲರೂ ಟ್ರಂಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ಸ್ವತಃ ಅವರ ಸಹೋದ್ಯೋಗಿ ಹಾಗೂ ಅತ್ಯಾಪ್ತ ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಟ್ರಂಪ್ ನೀವು ಸರಿಯಿಲ್ಲ ಎಂದಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಮೊದಲೇ ಟ್ರಂಪ್‌ಗೆ ಟ್ವಿಟ್ಟರ್ ಕೂಡ ಶಾಕ್ ಕೊಟ್ಟಿತ್ತು. ಆದರೆ ಇಷ್ಟು ಆದ ಬಳಿಕ ಸುಮ್ಮನಾಗದೆ ಮತ್ತೆ ಮೊಂಡಾಟ ಮುಂದುವರಿಸಿದ್ದ ಟ್ರಂಪ್ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿಯೇ ಅಮೆರಿಕನ್ನರನ್ನ ರೊಚ್ಚಿಗೆಬ್ಬಿಸಿದೆ.

English summary
10 Republican congress members voted against president Donald Trump in impeachment process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X