• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾದಲ್ಲಿ ಒಂದೇ ದಿನ 1.58 ಲಕ್ಷ ಜನರಿಗೆ ಕೊರೊನಾವೈರಸ್!

|

ವಾಶಿಂಗ್ಟನ್, ನವೆಂಬರ್.24: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಪ್ರತಿನಿತ್ಯ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಅಮೆರಿಕಾದಲ್ಲಿ ವರದಿಯಾಗಿವೆ.

ಒಂದೇ ದಿನದಲ್ಲಿ 1,58,211ಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊವಿಡ್-19 ಸೋಂಕಿತರ ಸಂಖ್ಯೆ 1,27,63,282 ಗಡಿ ದಾಟಿ ಹೋಗಿದೆ.

ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!

ಇಡೀ ವಿಶ್ವದ ಪೈಕಿ ಅಮೆರಿಕಾದಲ್ಲಿಯೇ ಅತಿಹೆಚ್ಚು ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಮಹಾಮಾರಿಗೆ 912ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯು 2,63,629ಕ್ಕೆ ಏರಿಕೆಯಾಗಿದೆ.

ಯುಎಸ್ ನಲ್ಲಿ ಈವರೆಗೆ 75 ಲಕ್ಷ ಸೋಂಕಿತರು ಗುಣಮುಖ:

ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿತರ ಜೊತೆ ಜೊತೆಗೆ ಗುಣಮುಖರ ಸಂಖ್ಯೆಯೂ ಹೆಚ್ಚಳವಾಗಿದೆ. ದೇಶದಲ್ಲಿ ಈವರೆಗೂ 75,40,946 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 49,58,707 ಸಕ್ರಿಯ ಪ್ರಕರಣಗಳಿರುವುದಾಗಿ ಅಮೆರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವು ಮಾಹಿತಿ ನೀಡಿದೆ.

ಇನ್ನು, ವಿಶ್ವದಲ್ಲಿ 5,94,87,127 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಈವರೆಗೂ 14,01,490 ಜನರು ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಲ್ಲಿ ಈವರೆಗೂ 4,11,37,233 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಅತಿಹೆಚ್ಚು ಕೊರೊನಾವೈರಸ್ ಸೋಂಕಿತರು ಮತ್ತು ಸಾವಿನ ಸಂಖ್ಯೆಯು ಹೆಚ್ಚಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

   Samsung ಭಾರತದಲ್ಲಿ ನೂತನವಾಗಿ 5 ಸಾವಿರ ಕೋಟಿ ಹೂಡಿಕೆ | Oneindia Kannada

   English summary
   1.58 Lakh New Coronavirus Cases Reported in United States Of America Today, State Tally Rise to 12763282.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X