ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳು

|
Google Oneindia Kannada News

ವಿಜಯಪುರ, ಅಕ್ಟೋಬರ್ 20 : ವಿಜಯಪುರ-ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಗೆ ಅಕ್ಟೋಬರ್ 22ರಂದು ಚಾಲನೆ ಸಿಗಲಿದೆ. ಡಿಸೆಂಬರ್ 21ರ ತನಕ ಪ್ರಾಯೋಗಿಕವಾಗಿ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನ ಕೈಗೊಂಡಿದೆ.

ವಿಜಯಪುರ-ಯಶವಂತಪುರ ವಿಶೇಷ ರೈಲಿಗೆ ವಿಜಯಪುರದಲ್ಲಿ ಅಕ್ಟೋಬರ್ 22ರಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಲಿದ್ದಾರೆ. ಇದರಿಂದಾಗಿ ಬಹುದಿನಗಳ ಬೇಡಿಕೆ ಈಡೇರಲಿದ್ದು, ಸಾವಿರಾರು ಜನರಿಗೆ ಸಹಾಯಕವಾಗಲಿದೆ.

ತುಮಕೂರು-ಬೆಂಗಳೂರು ಡೆಮು ರೈಲು; ಸಮಯ, ನಿಲ್ದಾಣ ವಿವರ ತುಮಕೂರು-ಬೆಂಗಳೂರು ಡೆಮು ರೈಲು; ಸಮಯ, ನಿಲ್ದಾಣ ವಿವರ

ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಸಂಚಾರ ನಡೆಸಲಿದೆ. ಡಿಸೆಂಬರ್ 21ರ ತನಕ ರೈಲು ಪ್ರಾಯೋಗಿಕವಾಗಿ ಸಂಚಾರ ನಡೆಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿ

Train

ವೇಳಾಪಟ್ಟಿ : ವಿಜಯಪುರದಿಂದ ಪ್ರತಿನಿತ್ಯ ಮಧ್ಯಾಹ್ನ 1 ಗಂಟೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ 4.15ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.45ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 8.30ಕ್ಕೆ ವಿಜಯಪುರ ತಲುಪಲಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

ನಿಲ್ದಾಣಗಳು : ವಿಜಯಪುರ-ಯಶವಂತಪುರ ರೈಲು ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕಡೂರು, ಅರಸೀಕೆರೆ, ದಾವಣಗೆರೆ, ತುಮಕೂರು ಮಾರ್ಗವಾಗಿ ಯಶವಂತಪುರ ತಲುಪಲಿದೆ.

ವಿಜಯಪುರದಿಂದ ಯಶವಂತಪುರ ತಲುಪಲು 15 ತಾಸು 15 ನಿಮಿಷ, ಯಶವಂತಪುರದಿಂದ ವಿಜಯಪುರಕ್ಕೆ ಬರಲು 14 ತಾಸು 45 ನಿಮಿಷ ಬೇಕಾಗುತ್ತದೆ.

ವಿಶೇಷ ಎಕ್ಸ್‌ಪ್ರೆಸ್ ರೈಲಿನಲ್ಲಿ 2 ಟೈರ್ ಹವಾನಿಯಂತ್ರಿತ ಬೋಗಿ 1, 3 ಟೈರ್ ಹವಾ ನಿಯಂತ್ರಿತ ಬೋಗಿ 1, ಸ್ಲೀಪರ್ ಕ್ಲಾಸ್ 8, 2 ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡಿದೆ.

English summary
Schedule and Stations information of Vijayapura-Yeshwantpur daily special train. Train service will be launched on October 22 at Vijayapura railway stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X