ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆ

By Nayana
|
Google Oneindia Kannada News

Recommended Video

ಪರಿಷತ್ ಚುನಾವಣೆ: ವಿಜಯಪುರ -ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವಿನ ನಿರೀಕ್ಷೆ | Oneindia Kannada

ವಿಜಯಪುರ, ಸೆಪ್ಟೆಂಬರ್ 6: : ವಿಜಯಪುರ ಹಾಗೂ ಬಾಗಲಕೋಟೆಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರದ ಉಪಚುನಾವಣೆ ಇಂದು (ಸೆ.6)ರಂದು ನಡೆಯಲಿದೆ.

ಒಟ್ಟು 38 ಮತಗಟ್ಟೆಗಳನ್ನು ಸ್ಥಾಪನೆಗೊಂಡಿದ್ದು ಮತದಾನ ಆರಂಭವಾಗಿದೆ. 16 ಅತಿಸೂಕ್ಷ್ಮ, 14ಸೂಕ್ಷ್ಮ, 8 ಸಾಧಾರಣ ಮತಗಟ್ಟೆಗಳಿವೆ. ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಉಪಕದನ ನಡೆಯುತ್ತಿದ್ದು, ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ಬಿ. ಪಾಟೀಲ್ ಸಹೋದರ ಸುನೀಲ್‌ ಗೌಡ, ಬಿಜೆಪಿಯಿಂದ ಗೂಳಪ್ಪ ಶಟಗಾರ ಸೇರಿದಂತೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆ

ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 4,074 ಪುರುಷ, 4,163 ಮಹಿಳಾ ಮತದಾರರು ಸೇರಿದಂತೆ ಒಟ್ಟು 8,237 ಮತದಾರರಿದ್ದಾರೆ.ಅಹಿತರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Vijayapura MLC poll: Acid test for former minister M.B.Patil

7 ಪರಿಷತ್ ಸ್ಥಾನ ತೆರವು, ಮೇಲ್ಮನೆ ಸ್ಥಾನಕ್ಕೆ ಪ್ರಬಲ ಪೈಪೋಟಿ!7 ಪರಿಷತ್ ಸ್ಥಾನ ತೆರವು, ಮೇಲ್ಮನೆ ಸ್ಥಾನಕ್ಕೆ ಪ್ರಬಲ ಪೈಪೋಟಿ!

ತಲಾ ಓರ್ವ ಪಿಎಸ್ ಐ, ಮೂವರು ಎಎಸ್ ಐ, 15 ಮಂದಿ ಮುಖ್ಯ ಪೊಲೀಸ್‌ ಸಿಬ್ಬಂದಿ ಹಾಗೂ ಎಲ್ಲಾ ಉಪ ವಿಭಾಗಕ್ಕೆ ಒಂದು ಡಿಆರ್ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 20, ಬಾಗಲಕೋಟೆ ಜಿಲ್ಲೆಯಲ್ಲಿ 18 ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ.

English summary
It will be acid test for former minister M.B.Patil as his brother Sunil Patil contesting for Vijayapura- Bagalkot local bodies council seat which polling will be held on September 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X