ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉರ್ದು ಶಾಲೆ ಗೋಡೆ ಮೇಲೆ "ಜೈ ಶ್ರೀರಾಮ್': ಬಿಗುವಿನ ವಾತಾವರಣ

By Manjunatha
|
Google Oneindia Kannada News

ವಿಜಯಪುರ, ಡಿಸೆಂಬರ್ 07 : ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದ ಕೋಮುಗಲಭೆ ಈಗ ಉತ್ತರ ಕರ್ನಾಟಕದ ಕಡೆಗೂ ವ್ಯಾಪಿಸಿದಂತಿದೆ. ಇದಕ್ಕೆ ಉದಾಹರಣೆಯಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕೋಮುಸೌಹಾರ್ಧ ಹದಗೆಡುವಂತಹಾ ಘಟನೆಯೊಂದು ನಡೆದಿದೆ.

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದಲ್ಲಿನ ಉರ್ದು ಶಾಲಾ ಕಟ್ಟಡ ಹಾಗೂ ನಾಮಫಲಕದ ಮೇಲೆ ಯಾರೊ ಕಿಡಿಗೇಡಿಗಳು 'ಜೈ ಶ್ರೀರಾಮ್' ಎಂದು ಬರೆದು ವಿವಾದ ಹುಟ್ಟುಹಾಕಿದ್ದಾರೆ.

Vijayapura: 'Jai Sriram' words on Urdu school preclusion situation

ಉರ್ದು ಶಾಲೆಯ ಕಟ್ಟಡದ ಗೋಡೆಗಳ ಮೇಲೆ ಹಾಗೂ ಕಪ್ಪು ಹಲಗೆ ಮೇಲೆ ಜೈ ಶ್ರೀರಾಮ್ ಬರಹಗಳು ಕಾಣಿಸಿಕೊಂಡಿವೆ. ಬೆಳಿಗ್ಗೆ ಶಾಲೆ ಸುತ್ತ-ಮುತ್ತ ಇರುವ ಜನ ಗೋಡೆ ಮೇಲಿನ ಬರಹಗಳನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಮುಸ್ಲಿಂ ಹಾಗೂ ಹಿಂದೂ ಜನಸಂಖ್ಯೆ ಸಮ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ ಈ ಘಟನೆ ಕೋಮುಸೌಯಾರ್ಧ್ಯಕ್ಕೆ ಧಕ್ಕೆ ತಂದೊಡ್ಡಿದೆ. ಮುದ್ದೆಬಿಹಾಳ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

English summary
In Vijayapura's Mudhebihal thalluk Nalathawada village some people written 'Jai Sriram' word on Urdu school witch created communal disturbance in the village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X