ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ-ಹುಬ್ಬಳ್ಳಿ ರೈಲಿಗೆ ಚಾಲನೆ; ವೇಳಾಪಟ್ಟಿ

|
Google Oneindia Kannada News

ವಿಜಯಪುರ, ಫೆಬ್ರವರಿ 17 : ವಿಜಯಪುರ-ಹುಬ್ಬಳ್ಳಿ ನಡುವಿನ ಇಂಟರ್ ಸಿಟಿ ರೈಲಿಗೆ ಚಾಲನೆ ಸಿಕ್ಕಿದೆ. ಉಭಯ ನಗರಗಳ ನಡುವೆ ರೈಲು ಸಂಚಾರ ಆರಂಭಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು.

ವಿಜಯಪುರ ರೈಲು ನಿಲ್ದಾಣದಲ್ಲಿ ಸೋಮವಾರ ಸಂಸದ ರಮೇಶ ಜಿಗಜಿಣಗಿ ರೈಲು ಸೇವೆಗೆ ಚಾಲನೆ ನೀಡಿದರು. ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ್, ಹುಬ್ಬಳ್ಳಿ ರೈಲ್ವೆ ವಲಯದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯಪುರ-ಮಂಗಳೂರು ರೈಲು ಸೇವೆ 6 ತಿಂಗಳು ವಿಸ್ತರಣೆ ವಿಜಯಪುರ-ಮಂಗಳೂರು ರೈಲು ಸೇವೆ 6 ತಿಂಗಳು ವಿಸ್ತರಣೆ

railways

ವಿಜಯಪುರದಿಂದ ಹೊರಡುವ ರೈಲು ಬಸವನಬಾಗೇವಾಡಿ, ಆಮಲಟ್ಟಿ, ಬಾಗಲಕೋಟೆ, ಬಾದಾಮಿ, ಮಲ್ಲಾಪುರ, ಗದಗ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡು ಹುಬ್ಬಳ್ಳಿಯನ್ನು ತಲುಪಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಬೆಂಗಳೂರು-ಕರಾವಳಿ ನಡುವೆ ಹೊಸ ರೈಲು ಘೋಷಣೆ ಬೆಂಗಳೂರು-ಕರಾವಳಿ ನಡುವೆ ಹೊಸ ರೈಲು ಘೋಷಣೆ

ಹಲವು ವರ್ಷಗಳಿಂದ ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿಗೆ ಬೇಡಿಕೆ ಇತ್ತು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಈ ಕುರಿತು ನೈಋತ್ಯ ರೈಲ್ವೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ರೈಲು ಸಂಚಾರ ಆರಂಭಿಸಲು ಸೂಚನೆ ನೀಡಿದ್ದರು.

ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕಕ್ಕೆ ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಸರ್ಕಾರ

ವೇಳಾಪಟ್ಟಿ

* ಪ್ರತಿದಿನ ಬೆಳಗ್ಗೆ 5.30ಕ್ಕೆ ವಿಜಯಪುರದಿಂದ ಹೊರಡುವ ರೈಲು 11.05ಕ್ಕೆ ಹುಬ್ಬಳ್ಳಿ ತಲುಪಲಿದೆ.
* ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ರಾತ್ರಿ 11.40ಕ್ಕೆ ವಿಜಯಪುರ ತಲುಪಲಿದೆ.

English summary
Hubballi-Vijayapura intercity rail service schedule. Train service open for public from February 17, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X