• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂ.ಬಿ. ಪಾಟೀಲ್ ಸಹೋದರ ಗೆಲ್ತಾರಾ? ಮತಪೆಟ್ಟಿಗೆಯಲ್ಲಿ ಭವಿಷ್ಯ ಭದ್ರ

By Nayana
|

ವಿಜಯಪುರ, ಸೆಪ್ಟೆಂಬರ್ 7: ವಿಜಯಪುರ-ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆ ಸೆಪ್ಟೆಂಬರ್ 6ರಂದು ನಡೆದಿದೆ. ಎಂಬಿ ಪಾಟೀಲ್ ಸಹೋದನ ಸುನೀಲ್ ಗೌಡ ಕೂಡ ಕಣದಲ್ಲಿದ್ದರು.

ಆದರೆ ಅವರು ಗೆಲ್ತಾರಾ ಎನ್ನುವುದು ಎಲ್ಲರ ಕುತೂಹಲವಾಗಿದ್ದರೆ ಮತಪೆಟ್ಟಿಯಲ್ಲಿರುವ ಮತಗಳು ಅವರ ಭವಿಷ್ಯವನ್ನು ನಿರ್ಧಾರ ಮಾಡಲಿದೆ.

ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆ ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆ

ಒಟ್ಟು 38 ಮತಗಟ್ಟೆ ಕೇಂದ್ರದಲ್ಲಿ ಮತದಾನ ನಡೆದಿದ್ದು ಶೇ.99.07ರಷ್ಟು ಮತದಾನ ನಡೆದಿದೆ, 2015ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಶೇ.99.77ರಷ್ಟು ಮತದಾನವಾಗಿತ್ತು.

ಹೀಗಾಗಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಕುಗ್ಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಉಭಯ ಜಿಲ್ಲೆಯ ಒಟ್ಟು 8187ಮತದಾರರ ಪೈಕಿ 8111 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಒಟ್ಟು 3999 ಪುರುಞ ಮತದಾರರ ಪೈಕಿ 3940 ಮತದಾರರು ಮತ ಚಲಾಯಿಸಿದ್ದಾರೆ ಇನ್ನು 4188 ಮಹಿಳಾ ಮತದಾರರ ಪೈಕಿ 1171 ಮಹಿಳೆಯರು ಮತ ಚಲಾಯಸಿದ್ದಾರೆ. ಇದರೊಂದಿಗೆ ಒಟ್ಟು ಶೇ.99.07ರಷ್ಟು ಮತದಾನವಾಗಿದೆ.

ಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆ ಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆ

59 ಪುರುಷ ಮತದಾರರು ಹಾಗೂ 17 ಮಹಿಳಾ ಮತದಾರರು ಸೇರಿ ಒಟ್ಟು 76 ಮತದಾರರು ತಮ್ಮ ಹಕ್ಕು ಚಲಾಯಿಸಿಲ್ಲ, ಸೆ.11ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಸುನೀಲ್ ಗೌಡ ಅವರ ಭವಿಷ್ಯ ನಿರ್ಧಾರವಾಗಲಿದೆ.

ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ಬಿ. ಪಾಟೀಲ್ ಸಹೋದರ ಸುನೀಲ್‌ ಗೌಡ, ಬಿಜೆಪಿಯಿಂದ ಗೂಳಪ್ಪ ಶಟಗಾರ ಸೇರಿದಂತೆ 7 ಅಭ್ಯರ್ಥಿಗಳು ಕಣದಲ್ಲಿದ್ದರು.

English summary
Sunil Patil, brother of former minister M.B.Patil has contested in Vijayapura- Bagalkot council election. The polling was registered 99.07percent and counting will be conducted on September 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X