ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿ: ಸಿದ್ದರಾಮಯ್ಯ ವಿರುದ್ದ 'ತಿರುಗಿಬಿದ್ದ' ಸಿ.ಎಂ.ಇಬ್ರಾಹಿಂ

|
Google Oneindia Kannada News

Recommended Video

CM Ibrahim Indirect Attack to Siddaramaiah | Oneindia Kannada

ವಿಜಯಪುರ, ಅ 29: ಟಿಪ್ಪು ಜಯಂತಿಗೆ ( ನ 10) ದಿನ ಹತ್ತಿರ ಬರುತ್ತಿದ್ದಂತೆಯೇ, ಮತ್ತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಸಮರ ಆರಂಭವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಸರಕಾರದ ವತಿಯಿಂದ ಜಯಂತಿ ಆಚರಣೆ ನಡೆಸಲಾಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ.

ಆದರೆ, ಕಾಂಗ್ರೆಸ್ ಮುಖಂಡ ಮತ್ತು ಎಂಎಲ್ಸಿ ಸಿ.ಎಂ.ಇಬ್ರಾಹಿಂ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. "ಮೊದಲಿಗೆ, ಮುಸ್ಲಿಮರಲ್ಲಿ ಜಯಂತಿ ಆಚರಣೆ ಅನ್ನೋ ಸಂಪ್ರದಾಯವೇ ಇಲ್ಲ. ಅದು ತಪ್ಪು ಕಲ್ಪನೆ" ಎಂದು ಹೇಳಿದ್ದಾರೆ.

ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ?ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ?

"ನಮ್ಮಲ್ಲಿ ಜಯಂತಿ ಅಂದರೆ ಏನು. ಅವರು ಹುಟ್ಟಿದ ದಿನದಂದು ಒಳ್ಳೆಯ ಜಾಗದಲ್ಲಿ, ಒಳ್ಳೆಯವರೆಲ್ಲಾ ಕೂತು ಅವರ ಗುಣಗಾನ ಮಾಡುವುದು" ಎಂದು ಪರೋಕ್ಷವಾಗಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ಡಿದಿದ್ದಾರೆ.

The Way Tipu Jayanthi Started Is Not Correct. C M Ibrahim Indirect Attack To Siddaramaiah

"ಬಡವರಿಗೆ, ಅನಾಥ ಮಕ್ಕಳಿಗೆ ಅವರ ಹೆಸರಿನಲ್ಲಿ ಸಹಾಯ ಮಾಡುವುದು. ಮಾಡಿದ ಪುಣ್ಯದ ಕೆಲಸವನ್ನು ಭಗವಂತನಿಗೆ ತಲುಪಿಸುವಂತದ್ದು ನಮ್ಮ ಆಚರಣೆ. ನಮ್ಮಲ್ಲಿ ವಿಗ್ರಹ ಅನ್ನೋದೇ ಇಲ್ಲ" ಎಂದು ಇಬ್ರಾಹಿಂ ಹೇಳಿದ್ದಾರೆ.

"ಸಿದ್ದರಾಮಯ್ಯ ಜಯಂತಿ ಆಚರಣೆ ಮಾಡಿದ ರೀತಿಯೇ ತಪ್ಪು" ಎಂದಿರುವ ಇಬ್ರಾಹಿಂ, "ಬಜಾರ್ ನಲ್ಲಿ ಮೆರವಣಿಗೆ ಮಾಡುವ ಜಯಂತಿ ನಮ್ಮದಲ್ಲ" ಎಂದು ಇಬ್ರಾಹಿಂ ಹೇಳಿದ್ದಾರೆ.

ವಿರೋಧಿಗಳಿಗೆ ಸಿದ್ದರಾಮಯ್ಯ ದೀಪಾವಳಿ ರಾಕೆಟ್ !ವಿರೋಧಿಗಳಿಗೆ ಸಿದ್ದರಾಮಯ್ಯ ದೀಪಾವಳಿ ರಾಕೆಟ್ !

"ಮೂರ್ತಿ ಪೂಜೆಯ ಸಂಪ್ರದಾಯ ನಮ್ಮಲಿಲ್ಲ. ಹಿಂದೆನೂ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಬಿಜೆಪಿಯವರು ಸುಮ್ಮನೆ ಇದನ್ನು ವಿವಾದ ಮಾಡುತ್ತಿದ್ದಾರೆ. ಮಂತ್ರಾಲಯ ರಾಯರ ಮಠಕ್ಕೆ ಜಾಗ ನೀಡಿದವರು ಅಧೋನಿ ನವಾಬರು" ಎನ್ನುವುದನ್ನು ಬಿಜೆಪಿಯವರು ಅರಿತುಕೊಳ್ಳಲಿ" ಎಂದು ಸಿ.ಎಂ.ಇಬ್ರಾಹಿಂ, ಬಿಜೆಪಿಯನ್ನೂ ಟೀಕಿಸಿದ್ದಾರೆ.

English summary
The Way Tipu Jayanthi Started Is Not Correct. Congress MLC C M Ibrahim Indirect Attack To Karnataka Opposition Leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X