ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಅಬ್ಬರದ ನಡುವೆ ವಿಜಯಪುರದಲ್ಲಿ ಟಗರು ಕಾಳಗ

|
Google Oneindia Kannada News

ವಿಜಯಪುರ, ಜೂನ್ 30: ಒಂದು ಕಡೆ ಕೊರೊನಾ ತನ್ನ ಅಬ್ಬರವನ್ನು ದಿನೇ ದಿನೇ ಹೆಚ್ಚು ಮಾಡಿ ಮುನ್ನುಗುತ್ತಿದೆ. ಆದರೆ, ಅನೇಕ ಕಡೆ ಜನರು ಇನ್ನು ಎಚ್ಚೆತ್ತುಕೊಳ್ಳದೆ ನಿರ್ಲಕ್ಷಾವಾಗಿಯೇ ಇದ್ದಾರೆ.

Recommended Video

ಶಿಷ್ಯವೇತನಕ್ಕೆ ಕೊರೋನಾ ವಾರಿಯರ್ಸ್ ಪರದಾಟ , ಇವರ ಕಷ್ಟ ಕೇಳೋರ್ಯಾರು| Oneindia Kannada

ಕೊರೊನಾ ಸೋಂಕಿನ ನಡುವೆ ವಿಜಯಪುರದಲ್ಲಿ ಟಗರಿನ ಕಾಳಗ ನಡೆಸಿದ್ದಾರೆ. ಮುದ್ದೇಬಿಹಾಳ ಪಟ್ಟಣದ ವೀರೇಶನಗರದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದರಲ್ಲಿ ನೂರಾರೂ ಜನರು ಭಾಗಿಯಾಗಿದ್ದು, ಅನೇಕ ಸ್ಥಳಿಯರಿಂದ ವಿರೋಧ ವ್ಯಕ್ತವಾಗಿದೆ.

ವಿಜಯಪುರ ಪರೀಕ್ಷಾ ಕೇಂದ್ರದ ಬಳಿ ಯುವಕ ಸಾವು; ಪೊಲೀಸ್ ಲಾಠಿಯಿಂದ ಆಯಿತೇ ಅವಘಡವಿಜಯಪುರ ಪರೀಕ್ಷಾ ಕೇಂದ್ರದ ಬಳಿ ಯುವಕ ಸಾವು; ಪೊಲೀಸ್ ಲಾಠಿಯಿಂದ ಆಯಿತೇ ಅವಘಡ

ವೀರೇಶನಗರ ಗೆಳೆಯರ ಬಳಗದ ವತಿಯಿಂದ ಬೃಹತ್ ಟಗರಿನ ಕಾಳಗವನ್ನು ಏರ್ಪಾಡು ಮಾಡಲಾಗಿತ್ತು. ಟಗರುಗಳ ಕಾಳಗ ನೋಡಲು ನೂರಾರೂ ಸಂಖ್ಯೆಯ ಜನರು ಸೇರಿದ್ದು, ಯಾರು ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ.

Sheep Fight Program Was Organised In Vijayapura

ಜನರು ಮಾಸ್ಕ್‌ ಧರಿಸಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು, ಕಂಡುಬರಲಿಲ್ಲ. ಕೊರೊನಾ ನಡುವೆ ಮನರಂಜನೆಗಾಗಿ ಈ ಕಾರ್ಯಕ್ರಮ ಮಾಡಿದ್ದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಕಾರ್ಯಕ್ರಮ ನಡೆಸಲು ವೀರೇಶನಗರ ಗೆಳೆಯರ ಬಳಗ ಜಿಲ್ಲಾಡಳಿತದ ಅನುಮತಿ ಕೂಡ ಪಡೆದಿರಲಿಲ್ಲವಂತೆ.

ಕರ್ನಾಟಕದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಇದೇ ರೀತಿ ಜನರು ನಿರ್ಲಕ್ಷಾ ಮಾಡಿದರೆ, ಕೊರೊನಾ ಕರ್ನಾಟಕ ಬಿಟ್ಟು ಹೋಗುವುದು ದೂರದ ಮಾತಾಗುತ್ತದೆ.

English summary
Coronavirus In Vijayapura: Tagaru kalaga program was organised in Vijayapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X