ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗ್ನಿಪಥ್ ವಿರೋಧಿಸುವ ಭರದಲ್ಲಿ ಬೆಂಕಿ ಹಚ್ಚುವ ಕೆಲಸ ನಿಲ್ಲಿಸಿ: ಭಗವಂತ ಖೂಬಾ

|
Google Oneindia Kannada News

ವಿಜಯಪುರ, ಜೂ21: ಅಗ್ನಿಪಥ್ ಯೋಜನೆಯನ್ನು ವಿರೋಧಿಸುವ ಭರದಲ್ಲಿ ಬೆಂಕಿ ಹಚ್ಚುವುದು, ಕಲ್ಲು ತೂರಾಟ ಮಾಡುವುದು, ಪ್ರತಿಭಟನೆ ಮಾಡುವುದನ್ನು ಕೈಬಿಡಬೇಕು. ನಿಮ್ಮ ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ಯಶಸ್ವಿಯಾಗುವುದಿಲ್ಲ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ಅಗ್ನಿಪಥ್ ಯೋಜನೆ ವಿರೋಧ ಹಿನ್ನೆಲೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿರೋಧ ಪಕ್ಷದವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದು ಸ್ವಾಸ್ಥ್ಯ ಸಮಾಜಕ್ಕೆ ಶೋಭೆ ತರುವುದಿಲ್ಲ. ಬೆಂಕಿ ಹಚ್ಚುವುದು, ಕಲ್ಲು ತೂರಾಟ ಮಾಡುವುದು, ಪ್ರತಿಭಟನೆ ಮಾಡುವುದು ಅಲ್ಲ. ಮೊಸರಿನಲ್ಲಿ ಕಲ್ಲು ಹುಡುಕಿ ಯಶಸ್ವಿಯಾಗಲ್ಲ ಎಂದರು. ಆರ್ಎಸ್ಎಸ್ ಅಜೆಂಡಾ ದೇಶದ ಹಿತಕ್ಕಾಗಿ, ದೇಶದ ಭದ್ರತೆಗಾಗಿ ನಿರತವಾಗಿದೆ. ಪ್ರಧಾನಿ ಮೋದಿ ಮೇಲೆ ಸಂಪೂರ್ಣ ವಿಶ್ವಾಸ ಇಡಿ. ರಾಜಕಾರಣ ಮಾಡದೇ ಯುವಕರ ಭವಿಷ್ಯಕ್ಕಾಗಿ ಎಲ್ಲರು ಸಹಕರಿಸಬೇಕು," ಎಂದರು.

ಏನೋ ಹೇಳೋದು, ಆಮೇಲೆ ಹೇಳಿಕೆ ತಿರುಚಲಾಗಿದೆ ಎನ್ನುವುದು: ಯಾಕೀ ನಾಟಕ?ಏನೋ ಹೇಳೋದು, ಆಮೇಲೆ ಹೇಳಿಕೆ ತಿರುಚಲಾಗಿದೆ ಎನ್ನುವುದು: ಯಾಕೀ ನಾಟಕ?

ಯೋಜನೆಯಲ್ಲಿ ಆರ್ ಎಸ್​ಎಸ್ ಕೈವಾಡ ಇದೆ ಹೇಳಿಕೆ ಸಲ್ಲದು, ಅಗ್ನಿಪಥ ವಿಚಾರದಲ್ಲಿ ರಾಜಕಾರಣ ಮಾಡದೇ ಯುವಕರ ಭವಿಷ್ಯಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು. ಪ್ರತಿಪಕ್ಷಗಳು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು, ಅದನ್ನು ಮೊದಲು ಕೈಬಿಡಬೇಕು. ಜೊತೆಗೆ ಯುವಕರನ್ನು ದಾರಿತಪ್ಪಿಸುವ ಕೆಲಸ ಮಾಡುವದನ್ನು ಬಿಡಬೇಕು.

Vijayapura: RSS is working for the good of the country: Bhagwanth Khuba

ಗೊಬ್ಬರ ಪೂರೈಕೆಯಲ್ಲಿ ಗೊಂದಲ ಸೃಷ್ಟಿಸಬೇಡಿ

ನಾನು ಜಿಲ್ಲೆಗೆ ಆಗಮಿಸುವ ಮುನ್ನವೇ ಕೃಷಿ ಉಪನಿರ್ದೇಶಕರಿಂದ ರಸಗೊಬ್ಬರದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯ ರೈತರ ಬೇಡಿಕೆಗಿಂತ ಹೆಚ್ಚು ಗೊಬ್ಬರ ಪೂರೈಕೆಯಾಗಿದೆ. ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸ್ಪಷ್ಟಪಡಿಸಿದರು.

Vijayapura: RSS is working for the good of the country: Bhagwanth Khuba

ಮುಂಗಾರು ಬಿತ್ತನೆಗಾಗಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರ ಕೊರತೆ ಇಲ್ಲ. ದೇಶದ ರೈತರು ಯಾವುದೇ ರಾಜಕೀಯ ಗೊಂದಲಕ್ಕೆ ಕಿವಿಕೊಡಬಾರದು ಎಂದು ಹೇಳಿದರು.

Recommended Video

ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

English summary
Protest against the Agnipth scheme should be abandoned. Union minister Bhagwant Khooba said everyone should cooperate for the future of the youth without doing politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X