ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ : ಮೊಘಲ್ ಉದ್ಯಾನ ವೀಕ್ಷಣೆಗೆ ಪ್ರವೇಶ ಶುಲ್ಕ ನಿಗದಿ

By Gururaj
|
Google Oneindia Kannada News

ವಿಜಯಪುರ, ಜೂನ್ 19 : ಆಲಮಟ್ಟಿಯ ಮೊಘಲ್ ಉದ್ಯಾನಕ್ಕೆ ಭೇಟಿ ನೀಡಲು ಇನ್ನು ಮುಂದೆ ಪ್ರವೇಶ ಶುಲ್ಕವನ್ನು ಪಾವತಿ ಮಾಡಬೇಕಿದೆ. ದಶಕಗಳಿಂದ ಉಚಿತವಾಗಿ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಬಹುದಾಗಿತ್ತು.

ಉದ್ಯಾನ, ಕೆಲವು ದಿನಗಳ ಹಿಂದೆ ಅಭಿವೃದ್ಧಿ ಪಡಿಸಿದ ಇಟಾಲಿಯನ್ ಹಾಗೂ ಫ್ರೆಂಚ್ ಉದ್ಯಾನ, ಸಂಗೀತ ಕಾರಂಜಿ ಸೇರಿ ಎಲ್ಲದಕ್ಕೂ ಒಂದೇ ಪ್ರವೇಶ ದರ ನಿಗದಿ ಮಾಡಲಾಗಿದೆ. ಸಂಗೀತ ಕಾರಂಜಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಆದ್ದರಿಂದ, ಬೆಳಗ್ಗೆ ಮತ್ತು ಸಂಜೆ ಬೇರೆ-ಬೇರೆ ದರ ನಿಗದಿ ಮಾಡಲಾಗಿದೆ.

ಕರ್ನಾಟಕದಿಂದ 15 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತೆಲಂಗಾಣಕರ್ನಾಟಕದಿಂದ 15 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತೆಲಂಗಾಣ

2 ವರ್ಷಕ್ಕೆ ಗುತ್ತಿಗೆ : ಮೊಘಲ್ ಉದ್ಯಾನದ ಪ್ರವೇಶ ಶುಲ್ಕವನ್ನು ಸಂಗ್ರಹಿಸಲು ಕೆಬಿಜೆಎನ್‌ಎಲ್ ವತಿಯಿಂದ ಎರಡು ವರ್ಷದ ಗುತ್ತಿಗೆ ನೀಡಲಾಗಿದೆ. 2 ವರ್ಷದ ಅವಧಿಗೆ 1.14 ಕೋಟಿ ನಗದು ಪಾವತಿ ಮಾಡಬೇಕು.

Now pay entrance fee to visit Mughal garden, Almatti Dam

ಪ್ರವೇಶ ಶುಲ್ಕ : ಬೆಳಗ್ಗೆ 9.30ರಿಂದ ಸಂಜೆ 5.30ರ ತನಕ ವಯಸ್ಕರಿಗೆ 10, ಮಕ್ಕಳಿಗೆ 5 ರೂ. ಪ್ರವೇಶ ದರವಿದೆ. ಸಂಜೆ 5.30ರಿಂದ ವಯಸ್ಕರಿಗೆ 20, ಮಕ್ಕಳಿಗೆ 5 ರೂ. ಪ್ರವೇಶದರ ನಿಗದಿಪಡಿಸಲಾಗಿದೆ. ಸಂಜೆ ಪ್ರವೇಶದ ಟಿಕೆಟ್ ಪಡೆದವರು ಸಂಗೀತ ಕಾರಂಜಿಗೆ ಪ್ರತ್ಯೇಕವಾದ ಟಿಕೆಟ್ ಪಡೆಯುವ ಅಗತ್ಯವಿಲ್ಲ.

ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಅಂಗಳದಲ್ಲಿರುವ ಮೊಘಲ್ ಉದ್ಯಾನದ ಮಾದರಿಯಲ್ಲಿ ಅಣೆಕಟ್ಟು ಪ್ರದೇಶದ ಕೆಳಭಾಗದಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ ಮೊಘಲ್ ಉದ್ಯಾನವನ್ನು ನಿರ್ಮಿಸಲಾಗಿದೆ. ಇಟಾಲಿಯನ್ ಮತ್ತು ಫ್ರೆಂಚ್ ಉದ್ಯಾನ, ಸಂಗೀತ ಕಾರಂಜಿಯನ್ನು ಇಲ್ಲಿ ನೋಡಬಹುದಾಗಿದೆ.

English summary
Tourist who wish to visit Mughal style garden with musical fountain in Almatti Dam, Vijayapura should pay entrance fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X