ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದೇಶದ್ರೋಹಿಗಳಿಗೆ ಬಿರಿಯಾನಿ ತಿನಿಸೋಲ್ಲ, ಗುಂಡೇಟು ತಿನ್ನಿಸುತ್ತೇವೆ'

|
Google Oneindia Kannada News

ವಿಜಯಪುರ, ಫೆಬ್ರವರಿ 26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ದ ವಿವಾದಾತ್ಮಾಕ ಹೇಳಿಕೆ ನೀಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾನು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

Recommended Video

Yuvraj Singh tweet about present Delhi situation | Yuvraj singh | Tweet | Delhi | Oneindia Kannada |

ವಿಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೊರೆಸ್ವಾಮಿ ಅವರು ಪಾಕ್ ಏಜೆಂಟ್‌ರಂತೆ ವರ್ತಿಸುವುದನ್ನು ನಾವು ನೋಡಿದ್ದೇವೆ. ಅದನ್ನೇ ನಾನು ಹೇಳಿದ್ದೇನೆ. ನಾನೇಕೆ ಕ್ಷಮೆ ಕೇಳಬೇಕು. ಪ್ರತಿಭಟನೆ ಮಾಡುವವರು ಮಾಡಲಿ ಬಿಡಿ. ಇನ್ನುಂದೆ ದೇಶದ್ರೋಹಿಗಳಿಗೆ ಬಿರಿಯಾನಿ ತಿನ್ನಿಸುವುದಿಲ್ಲ. ಗುಂಡೇಟೇ ತಿನ್ನಿಸುತ್ತೇವೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

2024 ಕ್ಕೆ ನಾನೇ ಸಿಎಂ: ಕುರ್ಚಿ ಮೇಲೆ ಕರ್ಚೀಫ್‌ ಹಾಕಿದ ಬಿಜೆಪಿ ಶಾಸಕ2024 ಕ್ಕೆ ನಾನೇ ಸಿಎಂ: ಕುರ್ಚಿ ಮೇಲೆ ಕರ್ಚೀಫ್‌ ಹಾಕಿದ ಬಿಜೆಪಿ ಶಾಸಕ

ವಿಜಯಪುರದಲ್ಲಿ ಮಂಗಳವಾರ 'ಪಾಕ್ ಪರ ಲವ್ ಯು ಪಾಕ್ ಆರ್ಮಿ' ಎಂದು ಪೇಸ್ಬುಕ್ ಪೋಸ್ಟ್‌ ಹಾಕಿದ್ದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ, "ಪಾಕಿಸ್ತಾನ್ ಜಿಂದಾಬಾದ್ ಎನ್ನುವರನ್ನು ಇನ್ಮಂದೆ ಜೈಲಿಗೆ ಕಳಿಸುವುದಿಲ್ಲ. ಗುಂಡೇಟು ನೀಡಿ ಕೊಲ್ಲಲಾಗುವುದು. ಇಂತಹ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಬೆಂಗಳೂರಿನ ದೊರೆಸ್ವಾಮಿ ಅಂತಹ ಮುದುಕ ಪಾಕಿಸ್ತಾನ್ ಏಜೆಂಟ್ ಇದ್ದಂತೆ' ಎಂದು ಹೇಳಿದ್ದರು.

No Apologies For Remark On Freedom Fighter Doreswamy BJP MLA Yatnal Says

'ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ದೊರೆಸ್ವಾಮಿ ಒಬ್ಬರೇ ಮಾಡಿಲ್ಲ. ಪಾಕಿಸ್ತಾನ್ ಪರ ಘೋಷಣೆ ಕೂಗುವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಅವರು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದರು. ಇನ್ಮುಂದೆ ಪಾಕಿಸ್ತಾನ್ ಪರ ಮಾತನಾಡುವರನ್ನು ನೇರವಾಗಿ ಸ್ವರ್ಗಕ್ಕೆ ಕಳಿಸುತ್ತೇವೆ, ಮತ್ತೆಲ್ಲಿಗೂ ಕಳಿಸುವುದಿಲ್ಲ' ಎಂದು ಹೇಳಿದ್ದರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ವಿಜಯಪುರ ಶಾಸಕ ಯತ್ನಾಳ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

English summary
No Apologies For Remark On Freedom Fighter Doreswamy BJP MLA Yatnal Says. He Said On Monday, Doreswamy Looks Like Pakistan Agent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X