• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

25 ಕಿ.ಮೀ ಸಿಂಗಲ್ ಲೇನ್ ರಸ್ತೆಯನ್ನು ದಾಖಲೆಯ ಸಮಯದಲ್ಲಿ ಅಭಿವೃದ್ಧಿಪಡಿಸಿದ NHAI

|
Google Oneindia Kannada News

ವಿಜಯಪುರ, ಫೆಬ್ರವರಿ 27: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(ಎನ್‌ಎಚ್‌ಎಐ) ವಿಜಯಪುರ-ಸೋಲಾಪುರ (ಎನ್‌ಎಚ್ 52) ಮಧ್ಯೆ ಅಭಿವೃದ್ಧಿ ಹೊಂದುತ್ತಿರುವ 25.54 ಕಿ.ಮೀ ಉದ್ದದ ನಾಲ್ಕು ಪಥದ ಒಂದೇ ಪಥವನ್ನು 18 ಗಂಟೆಗಳ ದಾಖಲೆ ಸಮಯದಲ್ಲಿ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಧವಾ ವೇತನಕ್ಕಾಗಿ ಲಂಚ ಸ್ವೀಕರಿಸಿ ಜೈಲಿಗೆ ಹೋದ ಗ್ರಾಮಲೆಕ್ಕಾಧಿಕಾರಿ ವಿಧವಾ ವೇತನಕ್ಕಾಗಿ ಲಂಚ ಸ್ವೀಕರಿಸಿ ಜೈಲಿಗೆ ಹೋದ ಗ್ರಾಮಲೆಕ್ಕಾಧಿಕಾರಿ

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಈ ತ್ವರಿತ ಕೆಲಸವನ್ನು ಸೇರಿಸಲಾಗುವುದು, ನಾನು ಕಾರ್ಮಿಕರನ್ನು ಮತ್ತು ಯೋಜನಾ ನಿರ್ದೇಶಕರನ್ನು, ಎನ್‌ಎಚ್‌ಎಐ, ಇತರ ಅಧಿಕಾರಿಗಳು, ಕಂಪನಿಯ ಪ್ರತಿನಿಧಿಗಳನ್ನು ಅಭಿನಂದಿಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರು-ಚಿತ್ರದುರ್ಗ, ವಿಜಯಪುರ-ಸೋಲಾಪುರ-ಔರಂಗಾಬಾದ್-ಧುಲೆ-ಇಂದೋರ್-ಗ್ವಾಲಿಯರ್ ನ ಭಾಗವಾಗಿದ್ದು, ಈ ರಸ್ತೆ ಹೆಚ್ಚಿನ ಸಾಂದ್ರತೆಯ ಸಂಚಾರ ಕಾರಿಡಾರ್ ಆಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ತಿಳಿಸಿದ್ದಾರೆ.

English summary
Union Road Transport and Highways Minister Nitin Gadkari said the NHAI develops 25.54 km long lane between Vijayapura-Solapur (NH 52) was completing the single lane in 18 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X