ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನಿಂದ ಹೊರಬಂದ ಚಡಚಣ ಸಹೋದರರ ಕೊಲೆ ಆರೋಪಿಗೆ ಭರ್ಜರಿ ಸ್ವಾಗತ

|
Google Oneindia Kannada News

ವಿಜಯಪುರ, ಮೇ 04: ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆದ ಚಡಚಣ ಸಹೋದರರ ಕೊಲೆ ಪ್ರಕರಣದ ಎ1 ಆರೋಪಿ ಮಹದೇವ್ ಭೈರಗೊಂಡನಿಗೆ ಭಾರಿ ಸ್ವಾಗತ ದೊರೆತಿದೆ.

ಧರ್ಮರಾಜ್‌ ಚಡಚಣ ನಕಲಿ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ ಧರ್ಮರಾಜ್ ಚಡಚಣ ಜಾಮೀನಿನ ಮೇಲೆ ನಿನ್ನೆ ಜೈಲಿನಿಂದ ಬಿಡುಗಡೆ ಆದರು, ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ನೂರಾರು ಅಭಿಮಾನಿಗಳು ದೊಡ್ಡ ಹಾರ ಹಾಕಿ ಭೈರಗೊಂಡನನ್ನು ಸ್ವಾಗತಿಸಿದರು.

ಗುರುವಾರ ರಾತ್ರಿ ಜೈಲಿನಿಂದ ಬಿಡುಗಡೆಗೊಂಡು ಕೇರೂರಿಗೆ ಬಂದ ಧರ್ಮರಾಜ್‌ಗೆ ಅಲ್ಲಿಯೂ ಭಾರಿ ಸ್ವಾಗತ ದೊರೆಯಿತು, ಬೆಂಬಲಿಗರು ಧರ್ಮರಾಜ್ ಪರವಾಗಿ ಘೋಷಣೆಗಳನ್ನು ಕೂಗಿದರು, ಹಾರಗಳನ್ನು ಹಾಕಿ, ಕೇಕೆ ಹಾಕಿ ಸಂಭ್ರಮಿಸಿದರು.

Murder accused Bayragonda gets grand welcome

ಧರ್ಮರಾಜ್ ಚಡಚಣ ಹತ್ಯೆ ಪ್ರಕರಣ: ಆರೋಪಿಗಳಿಗೆ ಜಾಮೀನು ಧರ್ಮರಾಜ್ ಚಡಚಣ ಹತ್ಯೆ ಪ್ರಕರಣ: ಆರೋಪಿಗಳಿಗೆ ಜಾಮೀನು

ಶುಕ್ರವಾರ ಬೆಳಿಗ್ಗೆಯಿಂದಲೂ ಜಿಲ್ಲೆಯ ಹಲವು ಕಡೆಗಳಿಂದ ಭೈರಗೊಂಡ ಭೇಟಿಗಾಗಿ ಜನರು ಆಗಮಿಸಿದ್ದರು, ಅವರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ಈ ಹಿಂದೆ ಮರಳು ದಂಧೆ ಪ್ರಕರಣದಲ್ಲಿ ಇದೇ ಭೈರಗೊಂಡ ಜೈಲಿಗೆ ಹೋಗಿ ಬಂದಾಗಲೂ ಇದೇ ರೀತಿಯ ಸ್ವಾಗತ ಸಿಕ್ಕಿತ್ತು.

ಗಂಗಾಧರ ಚಡಚಣ ಹತ್ಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ? ಗಂಗಾಧರ ಚಡಚಣ ಹತ್ಯೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ?

ಜೈಲಿನಿಂದ ಬಿಡುಗಡೆ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭೈರಗೊಂಡ, ಭೈರಗೊಂಡ-ಚಡಚಣ ಕುಟುಂಬದ ಮಧ್ಯೆ ಹಿಂದಿನಿಂದಲೂ ದ್ವೇಷವಿತ್ತು, ಅದನ್ನು ನಾನು ಬೆಳೆಸಿದ್ದಲ್ಲ, ವಿನಾ ಕಾರಣ ನನ್ನನ್ನು ಆರೋಪಿ ಮಾಡಲಾಗಿದೆ. ನಾನು ಕಷ್ಟಪಟ್ಟು ಬೆಳೆಸಿದ ವಿದ್ಯಾ ಸಂಸ್ಥೆಗಳಿವೆ ಅವುಗಳನ್ನು ನೋಡಿಕೊಂಡು ಇರುತ್ತೇನೆ' ಎಂದು ಅವರು ಹೇಳಿದರು.

English summary
Chadachana brothers murder case accused Mahadeva Bayragonda gets grand welcome by his supporters after releasing from jail on bail yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X