ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ: ಚಿಕ್ಕದೊಂದು ಮಾತಿಗೆ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

By ವಿಜಯಪುರ ಪ್ರತಿನಿಧಿ
|
Google Oneindia Kannada News

ವಿಜಯಪುರ, ಫೆಬ್ರವರಿ 28: ಒಂದು ಚಿಕ್ಕ ಕಾರಣಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

Recommended Video

India's unemployment rate go up day by day | Unemployement | BJP | India | Modi

ವಿಜಯಪುರ ಜಿಲ್ಲೆಯ ಕೊಲ್ಹಾರ-ಕೊರ್ತಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಬಿದ್ದು ತಾಯಿ, ಮಗಳು, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಫೆಬ್ರವರಿ 16ರಂದು ಮಧ್ಯ ರಾತ್ರಿ ಮನೆಯಿಂದ ಈ ಮೂವರು ನಾಪತ್ತೆಯಾಗಿದ್ದರು. ಫೆ.19ಕ್ಕೆ ಮಗಳ ಶವ ಪತ್ತೆಯಾಗಿದ್ದರೆ, ಫೆ.25ಕ್ಕೆ ತಾಯಿ ಮತ್ತು ಮಗನ ಶವ ಪತ್ತೆಯಾಗಿದೆ. ಫೆ.26ರಂದು ಸಂಬಂಧಿಕರಿಗೆ ಈ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದುಬಂದಿದೆ.

 12 ವರ್ಷದಿಂದ ವಿಜಯಪುರದಲ್ಲಿ ನೆಲೆಸಿದ್ದ ಕುಟುಂಬ

12 ವರ್ಷದಿಂದ ವಿಜಯಪುರದಲ್ಲಿ ನೆಲೆಸಿದ್ದ ಕುಟುಂಬ

ಉಷಾ ಹವಾಲ್ದಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯಾಗಿದ್ದರು. ವಿಜಯಪುರದಲ್ಲಿ ಹತ್ತು ವರ್ಷಗಳ ಹಿಂದೆ ರೇಣುಕಾ ಅಕ್ಕ ಉಷಾ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಏಳು ವರ್ಷದ ಹಿಂದೆ ನಾರಾಯಣ ಕೂಡ ಸಾವನ್ನಪ್ಪಿದ್ದರು. ಹೀಗಾಗಿ ಉಷಾ-ನಾರಾಯಣ ದಂಪತಿ ಮಗಳು ದೀಪಾಳ ಆರೈಕೆಗಾಗಿ ವಿಜಯಪುರಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ ರೇಣುಕಾ ಕುಟುಂಬ ಸಮೇತ ಬಂದಿದ್ದರು. ಅವರು ಇಲ್ಲಿಗೆ ಬಂದು ಹನ್ನೆರಡು ವರ್ಷಗಳಾಗಿದ್ದವು.

ಪರೀಕ್ಷೆಗೂ ಮೊದಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಪರೀಕ್ಷೆಗೂ ಮೊದಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

 ಸೋದರರ ಮದುವೆಯಾಗಿದ್ದ ಸೋದರಿಯರು

ಸೋದರರ ಮದುವೆಯಾಗಿದ್ದ ಸೋದರಿಯರು

ನಾರಾಯಣ ಮತ್ತು ಅಶೋಕ ಹವಾಲ್ದಾರ ಸಹೋದರ ಜೊತೆಗೆ ಉಷಾ ಮತ್ತು ರೇಣುಕಾ ಸಹೋದರಿಯರ ಮದುವೆಯಾಗಿತ್ತು. ನಾರಾಯಣ, ಉಷಾ ತೀರಿಕೊಂಡ ನಂತರ ಅಕ್ಕನ ಮಗಳ ಆರೈಕೆಗಾಗಿ ರೇಣುಕಾ, ಮಗ, ಮಗಳು ಇಲ್ಲಿಗೆ ಬಂದಿದ್ದರು. ಆದರೆ ಇದೀಗ ಈ ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಣುಕಾ ಅಶೋಕ ಹವಾಲ್ದಾರ (45), ಐಶ್ವರ್ಯ ಅಶೋಕ ಹವಾಲ್ದಾರ (23), ಅಖಿಲೇಶ ಅಶೋಕ ಹವಾಲ್ದಾರ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

 ಒಂದೇ ಮಾತಿಗೆ ಈ ದುಡುಕು ನಿರ್ಧಾರ

ಒಂದೇ ಮಾತಿಗೆ ಈ ದುಡುಕು ನಿರ್ಧಾರ

ಉಷಾ ಮಗಳು ದೀಪಾ, ರೇಣುಕಾ ಅವರಿಗೆ ತಮ್ಮ ಮನೆಯಲ್ಲಿ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ನೀವು ನಿಮ್ಮ ಊರಿಗೆ ಮರಳಿ ಎಂದು ಪದೇ ಪದೇ ಹೇಳುತ್ತಿದ್ದರು ಎನ್ನಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಐಶ್ವರ್ಯ, "ನಮ್ಮ ಸಾವಿಗೆ ಯಾರೂ ಕಾರಣರಲ್ಲ ಪರಿವಾರದವರು, ಸಂಬಂಧಿಗಳು ಕಾರಣರಲ್ಲ, ನಾವೇ ಕಾರಣ" ಎಂಬುದನ್ನು ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಗುರುವಾರ ತಿಳಿದುಬಂದಿದೆ.

ಹೂವಿನಹಡಗಲಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳ ಆತ್ಮಹತ್ಯೆಹೂವಿನಹಡಗಲಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳ ಆತ್ಮಹತ್ಯೆ

 ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರು

ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರು

ಈ ಮೂವರ ಮೃತದೇಹಗಳು ದೊರೆತ ನಂತರ, ಅನಾಮಧೇಯ ಶವವೆಂದು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಮೂವರ ನಾಪತ್ತೆ ವಿಚಾರವಾಗಿ ಫೆ.25ರಂದು ಪ್ರಕರಣ ದಾಖಲಾಗಿತ್ತು. ವಿಜಯಪುರ ಜಿಲ್ಲೆಯ ಕೊಲ್ಹಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲ್ಹಾರ ಪೊಲೀಸರು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಕುಟುಂಬದ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಮೃತರ ಬಟ್ಟೆಪರಿಶೀಲಿಸಿದ ಮೇಲೆ ಮೃತರ ಗುರುತು ಪತ್ತೆಯಾಗಿದೆ.

English summary
Three members from same family committed suicide in kolhara of vijyapura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X