• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪರಿಷತ್ ಚುನಾವಣೆ: ಎಂಬಿ ಪಾಟೀಲ್ ಸಹೋದರ ಸುನೀಲ್‌ಗೆ ಗೆಲುವು

|

ವಿಜಯಪುರ, ಸೆಪ್ಟೆಂಬರ್ 10: ವಿಜಯಪುರ-ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ಸಹೋದರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.

ಎಂ.ಬಿ. ಪಾಟೀಲ್ ಸಹೋದರ ಗೆಲ್ತಾರಾ? ಮತಪೆಟ್ಟಿಗೆಯಲ್ಲಿ ಭವಿಷ್ಯ ಭದ್ರ ಎಂ.ಬಿ. ಪಾಟೀಲ್ ಸಹೋದರ ಗೆಲ್ತಾರಾ? ಮತಪೆಟ್ಟಿಗೆಯಲ್ಲಿ ಭವಿಷ್ಯ ಭದ್ರ

ಈ ಕ್ಷೇತ್ರಕ್ಕೆ ಸೆಪ್ಟೆಂಬರ್ 6ರಂದು ಚುನಾವಣೆ ನಡೆದಿತ್ತು, ಸುನೀಲ್ ಗೌಡ ಅವರು ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು, ಅವರು ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಒಟ್ಟು 38 ಮತಗಟ್ಟೆ ಕೇಂದ್ರದಲ್ಲಿ ಮತದಾನ ನಡೆದಿದ್ದು ಶೇ.99.07ರಷ್ಟು ಮತದಾನ ನಡೆದಿದೆ.

ಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆ ಎಂಎಲ್ಸಿ ಸ್ಥಾನಕ್ಕೆ ಎಂಬಿ ಪಾಟೀಲ್ ಸೋದರ ಸುನಿಲ್ ಸ್ಪರ್ಧೆ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಉಭಯ ಜಿಲ್ಲೆಯ ಒಟ್ಟು 8187ಮತದಾರರ ಪೈಕಿ 8111 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. ಒಟ್ಟು 3999 ಪುರುಷ ಮತದಾರರ ಪೈಕಿ 3940 ಮತದಾರರು ಮತ ಚಲಾಯಿಸಿದ್ದಾರೆ ಇನ್ನು 4188 ಮಹಿಳಾ ಮತದಾರರ ಪೈಕಿ 1171 ಮಹಿಳೆಯರು ಮತ ಚಲಾಯಿಸಿದ್ದರು.

ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್‌ ಟಿಕೆಟ್‌ಗಾಗಿ ಲಾಬಿ! ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್‌ ಟಿಕೆಟ್‌ಗಾಗಿ ಲಾಬಿ!

ಇದರೊಂದಿಗೆ ಒಟ್ಟು ಶೇ.99.07ರಷ್ಟು ಮತದಾನವಾಗಿತ್ತು. 59 ಪುರುಷ ಮತದಾರರು ಹಾಗೂ 17 ಮಹಿಳಾ ಮತದಾರರು ಸೇರಿ ಒಟ್ಟು 76 ಮತದಾರರು ತಮ್ಮ ಹಕ್ಕು ಚಲಾಯಿಸಿಲ್ಲ, ಇದೀಗ ಫಲಿತಾಂಶ ಹೊರಬಿದ್ದಿದ್ದು ಸುನೀಲ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಸುನಿಲ್ ಗೌಡ ಬಿ.ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ ಮತ್ತು ಮಲ್ಲಿಕಾರ್ಜುನ ಲೋಣಿ ಅವರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಸಿ.ಎಸ್.ನಾಡಗೌಡ ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು.

English summary
Former minister MB Patil brother Sunil Patil won the council election from vijayapura-Bagalkot local body seats. This win increases the strength of MB patil in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X