ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರಕ್ಕೆ ಬಂದ ಮಹಾರಾಷ್ಟ್ರದ ಸರ್ಕಾರಿ ಬಸ್‌ಗಳು

|
Google Oneindia Kannada News

ವಿಜಯಪುರ, ಸೆಪ್ಟೆಂಬರ್ 16 : ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮ ವಿಜಯಪುರಕ್ಕೆ ಬಸ್ ಸೇವೆಯನ್ನು ಆರಂಭಿಸಿದೆ. ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ವಿಜಯಪುರಕ್ಕೆ ಔರಂಗಾಬಾದ್‌ನಿಂದ ಮಂಗಳವಾರ ಬಸ್ ಆಗಮಿಸಿದೆ. ಇದರಿಂದಾಗಿ ಅಂತರರಾಜ್ಯಗಳ ನಡುವೆ ಸಂಚಾರ ನಡೆಸಲು ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದ ಜನರಿಗೆ ಸಹಕಾರಿಯಾಗಿದೆ.

ಬೆಂಗಳೂರು-ಪಣಜಿ ಸ್ಲೀಪರ್ ಬಸ್ ಸೇವೆ; ವೇಳಾಪಟ್ಟಿ ಬೆಂಗಳೂರು-ಪಣಜಿ ಸ್ಲೀಪರ್ ಬಸ್ ಸೇವೆ; ವೇಳಾಪಟ್ಟಿ

ಜಿಲ್ಲೆಯ ತಿಕೋಟಾ, ವಿಜಯಪುರ, ಚಡಚಣ ಮತ್ತು ಇಂಡಿ ತಾಲೂಕುಗಳು ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಪ್ರತಿನಿತ್ಯ ನೂರಾರು ಜನರು ಉಭಯ ರಾಜ್ಯಗಳ ನಡುವೆ ಸಂಚಾರ ನಡೆಸಲಿದ್ದು, ವ್ಯಾಪಾರ ವಹಿವಾಟು ಸಹ ನಡೆಯುತ್ತದೆ.

ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ

Maharashtra Resumes Bus Service To Vijayapura

ವಿಜಯಪುರದಿಂದ ಸಾಂಗ್ಲಿ, ಮೀರಜ್, ಸೊಲ್ಹಾಪುರ ಪ್ರದೇಶಗಳಿಗೆ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಪುಣೆ ಮತ್ತು ಮುಂಬೈ ನಗರಗಳಿಗೂ ಬಸ್ ಸೇವೆ ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ಅನ್ ಲಾಕ್ ಮಾರ್ಗಸೂಚಿ; ಮೆಟ್ರೋ ಸಂಚಾರವಿಲ್ಲ ಮಹಾರಾಷ್ಟ್ರ ಅನ್ ಲಾಕ್ ಮಾರ್ಗಸೂಚಿ; ಮೆಟ್ರೋ ಸಂಚಾರವಿಲ್ಲ

ಸುಮಾರು 170 ದಿನಗಳ ಬಳಿಕ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಆರಂಭವಾಗಿದೆ. ಇದರಿಂದಾಗಿ ಬಡ, ಮಧ್ಯಮ ವರ್ಗದ ಜನರು ನಿಟ್ಟುಸಿರುವ ಬಿಟ್ಟಿದ್ದಾರೆ. ಗುರುವಾರದಿಂದ ಮಹಾರಾಷ್ಟ್ರಕ್ಕೆ ಹೆಚ್ಚಿನ ಬಸ್‌ಗಳು ಕರ್ನಾಟಕದಿಂದ ಸಂಚಾರ ನಡೆಸಲಿವೆ.

"ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಹೆಚ್ಚಿನ ಬಸ್‌ಗಳನ್ನು ಉಭಯ ರಾಜ್ಯಗಳ ನಡುವೆ ಓಡಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ" ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

Recommended Video

ಗೃಹ ಸಚಿವ Basavaraj Bommaiಗೆ ಕೋವಿಡ್ ಸೋಂಕು | Oneindia Kannada

ಕೇಂದ್ರ ಗೃಹ ಇಲಾಖೆ 3ನೇ ಹಂತದ ಲಾಕ್ ಡೌನ್ ಮಾರ್ಗಸೂಚಿಯಲ್ಲಿಯೇ ಅಂತರರಾಜ್ಯಗಳ ನಡುವಿನ ಸಂಚಾರಕ್ಕೆ ಇದ್ದ ನಿರ್ಬಂಧ ತೆಗೆದುಹಾಕಿತ್ತು. 4ನೇ ಹಂತದ ಮಾರ್ಗಸೂಚಿ ಪ್ರಕಟಣೆ ಬಳಿಕ ದೇಶವ ವಿವಿಧ ರಾಜ್ಯಗಳಲ್ಲಿ ಅಂತರರಾಜ್ಯ ಬಸ್ ಸಂಚಾರ ಆರಂಭಿಸಲಾಗಿದೆ.

English summary
Maharashtra resumed bus service to Vijayapura district of Karnataka. Bus service stopped after announcement of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X