ಮಹಾದೇವ ಭೈರಗೊಂಡ ಕಾರು ಚಾಲಕ ಆಸ್ಪತ್ರೆಯಲ್ಲಿ ಸಾವು
ವಿಜಯಪುರ, ನವೆಂಬರ್ 03: ಮಹಾದೇವ್ ಭೈರಗೊಂಡ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಭೈರಗೊಂಡ ಕಾರಿನ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿತ್ತು.
ಮಹಾದೇವ್ ಭೈರಗೊಂಡ ಕಾರು ಚಾಲಕ ಲಕ್ಷ್ಮಣ ದಿಂಡೋರ (27) ವಿಜಯಪುರದ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಸೋಮವಾರ ಗುಂಡಿನ ದಾಳಿ ನಡೆದಾಗ ಸಾಹುಕಾರ್ ಭೈರಗೊಂಡ ಜೊತೆಗೆ ದಿಂಡೋರ ಸಹ ಗಾಯಗೊಂಡಿದ್ದರು.
ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ
ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿ ಸೋಮವಾರ ಸಂಜೆ ಭೀಮಾ ತೀರದ ರೌಡಿ ಶೀಟರ್ ಮಹಾದೇವ್ ಭೈರಗೊಂಡ ಕಾರಿಗೆ ಟಿಪ್ಪರ್ ಲಾರಿಯನ್ನು ಡಿಕ್ಕಿ ಹೊಡೆಸಲಾಗಿತ್ತು. ಬಳಿಕ ಅಪರಿಚಿತರು ಗುಂಡಿನ ದಾಳಿಯನ್ನು ನಡೆಸಿದ್ದರು.
ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್ನಲ್ಲೇನಿದೆ?
ಮಹಾದೇವ್ ಭೈರಗೊಂಡ ಆಪ್ತರಾದ ಬಾಬುರಾಯ್ ಕಂಚನಾಳಕರ್ (64) ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮಹಾದೇವ್ ಭೈರಗೊಂಡ, ಲಕ್ಷ್ಮಣ ದಿಂಡೋರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಗಂಗಾಧರ ಚಡಚಣ ಹತ್ಯೆ : 373 ಪುಟದ ಚಾರ್ಜ್ ಶೀಟ್ ಸಲ್ಲಿಕೆ
ಅಪರಿಚಿತರು ಮಹಾದೇವ್ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಐಜಿಪಿ ಮಂಗಳವಾರ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಿದರು. ಆಸ್ಪತ್ರೆಯಲ್ಲಿ ಮಹಾದೇವ್ ಭೈರಗೊಂಡ ಚಿಕಿತ್ಸೆ ಪಡೆಯುತ್ತಿದ್ದಾರೆ.