ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಾಧರ ಚಡಚಣ ಹತ್ಯೆ : ಮಹಾದೇವ ಭೈರಗೊಂಡ ಸಿಐಡಿ ವಶಕ್ಕೆ

By Gururaj
|
Google Oneindia Kannada News

ವಿಜಯಪುರ, ಜುಲೈ 05 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡನನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಗುರುವಾರ ಬೆಳಗ್ಗೆ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

ಮಹಾದೇವ ಭೈರಗೊಂಡನನ್ನು ಸಿಐಡಿ ಪೊಲೀಸರು ಗುರುವಾರ ಸಂಜೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಆರೋಪಿಯನ್ನು 7 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು.

ಗಂಗಾಧರ ಚಡಚಣ ಕೊಲೆ: ಪ್ರಮುಖ ಆರೋಪಿ ಮಹದೇವ ಸಾಹುಕಾರ ಬಂಧನಗಂಗಾಧರ ಚಡಚಣ ಕೊಲೆ: ಪ್ರಮುಖ ಆರೋಪಿ ಮಹದೇವ ಸಾಹುಕಾರ ಬಂಧನ

ಸಿಐಡಿ ತಂಡ ಗುರುವಾರ ಬೆಳಗ್ಗೆ ಇಂಡಿ ತಾಲೂಕಿನ ಕೆರೂರು ಗ್ರಾಮದಲ್ಲಿನ ಮನೆಯಲ್ಲಿ ಮಹಾದೇವ ಭೈರಗೊಂಡನನ್ನು ಬಂಧಿಸಿತ್ತು. ಬೈರಗೊಂಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.

Mahadev Bairgonda sent to 7 day CID custody

ಸಿಐಡಿ ಪರವಾಗಿ ಆರ್.ಎ.ಗಡಕರಿ ವಾದ ಮಂಡನೆ ಮಾಡಿದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ 7 ದಿನಗಳ ಕಾಲ ವಶಕ್ಕೆ ನೀಡಿತು.

ಗಂಗಾಧರ ಚಡಚಣ ಹತ್ಯೆಯಲ್ಲಿ ಮತ್ತಷ್ಟು ಪೊಲೀಸರು ಭಾಗಿ?ಗಂಗಾಧರ ಚಡಚಣ ಹತ್ಯೆಯಲ್ಲಿ ಮತ್ತಷ್ಟು ಪೊಲೀಸರು ಭಾಗಿ?

ಭೀಮಾ ತೀರದ ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅಕ್ಟೋಬರ್ 30ರಂದು ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಎನ್‌ಕೌಂಟರ್‌ ಬಳಿಕ ಆತನ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಗಂಗಾಧರ ಚಡಚಣ ಹತ್ಯೆ : ಎಲ್ಲಾ ಆರೋಪಿಗಳು ಸಿಐಡಿ ವಶಕ್ಕೆಗಂಗಾಧರ ಚಡಚಣ ಹತ್ಯೆ : ಎಲ್ಲಾ ಆರೋಪಿಗಳು ಸಿಐಡಿ ವಶಕ್ಕೆ

ಪೊಲೀಸರ ವಶದಲ್ಲಿರುವ ಗಂಗಾಧರ ಚಡಚಣ ನಾಪತ್ತೆಯಾಗಿದ್ದ. ಈ ಕುರಿತು ಆತನ ತಾಯಿ ಐಜಿಪಿಗೆ ದೂರು ನೀಡಿದ್ದರು. ತನಿಖೆ ಬಳಿಕ ಆತ ಕೊಲೆಯಾಗಿದ್ದಾನೆ ಎಂಬ ಮಾಹಿತಿ ದೊರಕಿತ್ತು. ಮಹಾದೇವ ಭೈರಗೊಂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ಕೆಲವು ಪೊಲೀಸ್ ಅಧಿಕಾರಿಗಳು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಮೂವರನ್ನು ಬಂಧಿಸಲಾಗಿದೆ. ಕರ್ನಾಟಕ ಸರ್ಕಾರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.

English summary
Indi court on July 5, 2018 sent Mahadev Bairgonda to 7 days CID custody. Mahadev Bairgonda main accused of Gangadhara Chadachana murder case. He is arrested by CID today morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X