ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಧರ್ಮ: ಡಿಕೆಶಿ ವಿರುದ್ಧ ಏಕವಚನದ ವಾಗ್ದಾಳಿ ಮಾಡಿದ MB.ಪಾಟೀಲ್

|
Google Oneindia Kannada News

ವಿಜಯಪುರ, ಏಪ್ರಿಲ್ 13: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಾಜ್ಯದ ಜನರ ಕ್ಷಮೆ ಕೇಳಿದ ಡಿ.ಕೆ.ಶಿವಕುಮಾರ್ ವಿರುದ್ಧ ಎಂ.ಬಿ.ಪಾಟೀಲ್ ಗರಂ ಆಗಿದ್ದು, ಡಿ.ಕೆ.ಶಿ ಅವರನ್ನು ಏಕವಚನದಲ್ಲಿಯೇ ಸಂಭೋದಿಸಿ ಬೈದಾಡಿದ್ದಾರೆ.

ಇದೇ ವಿಚಾರವಾಗಿ ಇಂದು ಕರೆದಿದದ್ದ ಪತ್ರಿಕಾಗೋಷ್ಠಿ ಆರಂಭವಾಗುವುದಕ್ಕೆ ಮುನ್ನಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್ ಅವರು ಏಕವಚನದಲ್ಲಿಯೇ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ದಿನೇಶ್ ಗುಂಡೂರಾವ್ ಅವರ ಬಳಿ ಮಾತನಾಡಿದರು.

Lingayat separate religion matter: MB Patil slammed at DK Shivakumar

ಲಿಂಗಾಯತ ಧರ್ಮದ ವಿಚಾರವಾಗಿ ಕ್ಷಮೆ ಕೇಳಲು ಅವನ್ಯಾರು? ಅವನೇನು ಮೇಲಿನಿಂದ ಬಿದ್ದವನಾ? ಇದೇ ಮೊದಲಲ್ಲ ಅವನು ಹೀಗೆ ಮಾಡುತ್ತಿರುವುದು, ಹಿಂದೆಯೂ ಹೀಗೆಯೇ ಮಾಡಿದ್ದಾನೆ ಎಂದು ಎಂ.ಬಿ.ಪಾಟೀಲ್ ಅವರು ದಿನೇಶ್ ಗುಂಡೂರಾವ್ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದರು.

ಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರು ಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರು

ಮತ್ತೂ ಮಾತು ಮುಂದುವರೆಸಿ, ನನಗಷ್ಟೆ ಬುದ್ಧಿ ಹೇಳಬೇಡಿ, ಅವನಿಗೂ ಇತರರ ವಿಷಯದಲ್ಲಿ ಮೂಗು ತೂರಿಸಬೇಡ ಎಂದು ಹೇಳಿ, ಮೊದಲು ಅವನನ್ನು ಸುಧಾರಿಸಿ, ಆಮೇಲೆ ನಮ್ಮನ್ನು ಸುಧಾರಿಸಿ ಎಂದು ಎಂ.ಬಿ.ಪಾಟೀಲ್ ಅವರು ಸಿಟ್ಟಿನಿಂದಲೇ ದಿನೇಶ್ ಗುಂಡೂರಾವ್ ಬಳಿ ಮಾತನಾಡಿದ್ದಾರೆ.

ಎಂ.ಬಿ.ಪಾಟೀಲ್‌ಗೆ ಟೀಚರ್‌ ಸ್ಥಾನದ ಆಫರ್ ಕೊಟ್ಟ ಯಡಿಯೂರಪ್ಪ!ಎಂ.ಬಿ.ಪಾಟೀಲ್‌ಗೆ ಟೀಚರ್‌ ಸ್ಥಾನದ ಆಫರ್ ಕೊಟ್ಟ ಯಡಿಯೂರಪ್ಪ!

ಆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಲಿಂಗಾಯತ ಧರ್ಮ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ, ಆದರೆ ನಾನು ಅದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುವುದಿಲ್ಲ ಎಂದರು.

ಕ್ಷಮೆ ಕೇಳುವ ಅಧಿಕಾರವನ್ನು ಎಂ.ಬಿ.ಪಾಟೀಲ್ ಅವರಿಗೆ ಕೊಟ್ಟವರು ಯಾರು? ಮೊದಲು ಒಕ್ಕಲಿಗರ ಬಾಹುಳ್ಯ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಲಿ ಎಂದರು. ಈ ಕುರಿತು ರಾಹುಲ್ ಗಾಂಧಿ ಅವರ ಬಳಿ ದೂರು ನೀಡಲಾಗುವುದು ಎಂದು ಸಹ ಪಾಟೀಲ್ ಅವರು ಹೇಳಿದರು.

English summary
Minister MB Patil angry about DK Shivakuamr. He said who gave rights to DK Shivakuamr to ask apology about Lingayat separate religion matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X