ಮೋದಿ, ಅಮಿತ್ ಶಾ ಪ್ರಚಾರ ಮಾಡಿದ್ರು ಗೆದ್ದು ಬೀಗಿದ ಎಂ.ಬಿ.ಪಾಟೀಲ್!
ವಿಜಯಪುರ, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಚಿವ ಎಂ.ಬಿ.ಪಾಟೀಲ್ ಅವರ ತವರು ಜಿಲ್ಲೆ ವಿಜಯಪುರದಲ್ಲಿ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಗಳಿಸಿದೆ.
ವಿಜಯಪುರ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 3, ಬಿಜೆಪಿ 3 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿವೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನದಲ್ಲಿ ಜಯಗಳಿಸಿತ್ತು. ಬಿಜೆಪಿ ಕೇವಲ 1 ಸ್ಥಾನ ಪಡೆದಿತ್ತು.
ಬಿಎಸ್ವೈ, ತಮ್ಮ ಘನತೆಗೆ ತಕ್ಕಂತೆ ಮಾತಾಡಲಿ: ಎಂ.ಬಿ.ಪಾಟೀಲ್
ಜಿಲ್ಲೆಯಲ್ಲಿ ಭಾರೀ ಕುತೂಹಲ ಕೆರೆಳಿಸಿದ್ದ ಕ್ಷೇತ್ರ ಬಬಲೇಶ್ವರ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ತವರು ಕ್ಷೇತ್ರವಿದು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೂ ಎಂ.ಬಿ.ಪಾಟೀಲ್ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬರುವುದಾಗಿ ಹೇಳಿದ್ದರು. 29,715 ಮತಗಳ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
ಕ್ಷೇತ್ರ | ಗೆದ್ದವರು |
ಗಳಿಸಿದ ಮತಗಳು | ಪಕ್ಷ | ಸೋತವರು |
ಗಳಿಸಿದ ಮತಗಳು | ಪಕ್ಷ |
ಮುದ್ದೇಬಿಹಾಳ
| ಎ.ಎಸ್.ಪಾಟೀಲ ನಡಹಳ್ಳಿ | 63,512 | ಬಿಜೆಪಿ | ಸಿ.ಎಸ್. ನಾಡಗೌಡ | 54,879 | ಕಾಂಗ್ರೆಸ್ |
ದೇವರಹಿಪ್ಪರಗಿ | ಸೋಮನಗೌಡ ಪಾಟೀಲ | 38,802 | ಬಿಜೆಪಿ | ಭೀಮನಗೌಡ ಪಾಟೀಲ | 38,712 | ಜೆಡಿಎಸ್ |
ಬಸವನ ಬಾಗೇವಾಡಿ | ಶಿವಾನಂದ ಎಸ್. ಪಾಟೀಲ | 58,647 | ಕಾಂಗ್ರೆಸ್ | ಎಸ್.ಬಿ.ಪಾಟೀಲ(ಮನಗೂಳಿ) | 55,461 | ಜೆಡಿಎಸ್ |
ಬಬಲೇಶ್ವರ
(ಎಸ್
ಟಿ) |
ಎಂ.ಬಿ.
ಪಾಟೀಲ | 98,339 | ಕಾಂಗ್ರೆಸ್ | ವಿಜಯಕುಮಾರ್ ಪಾಟೀಲ್ | 68,624 | ಬಿಜೆಪಿ |
ಬಿಜಾಪುರ ನಗರ | ಬಸನಗೌಡ ಪಾಟೀಲ ಯತ್ನಾಳ್ | 76,308 | ಬಿಜೆಪಿ | ಹಮೀದ ಮುಶ್ರೀಫ್ | 69,895 | ಕಾಂಗ್ರೆಸ್ |
ನಾಗಠಾಣ
(ಎಸ್
ಸಿ) | ದೇವನಾಂದ ಚವಾಣ್ | 59,709 | ಜೆಡಿಎಸ್ | ವಿಠ್ಠಲ ಕಟಕದೋಂಡ | 54,108 | ಕಾಂಗ್ರೆಸ್ |
ಇಂಡಿ |
ಯಶವಂತರಾವ್
ಗೌಡ ಪಾಟೀಲ | 50,401 | ಕಾಂಗ್ರೆಸ್ | ಜಿ.ಡಿ.ಪಾಟೀಲ | 40,463 | ಜೆಡಿಎಸ್ |
ಸಿಂಧಗಿ | ಎಂ.ಸಿ.ಮನಗೂಳಿ | 70,865 | ಜೆಡಿಎಸ್ | ರಮೇಶ ಭೂಸನೂರ | 61,560 | ಬಿಜೆಪಿ |