ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ವಿಜಯಪುರದಲ್ಲಿ 69 ವರ್ಷದ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು 257ನೇ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.

ಕೊರೊನಾ ಲಾಕ್‌ಡೌನ್: ಮೇ 3ರ ವರೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದು ಕೊರೊನಾ ಲಾಕ್‌ಡೌನ್: ಮೇ 3ರ ವರೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದು

ರಾಜ್ಯದಲ್ಲಿ ಇಂದು 11 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 2, ಕಲಬುರಗಿಯಲ್ಲಿ 3, ಬಾಗಲಕೋಟೆ 3, ವಿಜಯಪುರ 1,ಬೆಳಗಾವಿಯಲ್ಲಿ 1, ಚಿಕ್ಕಬಳ್ಳಾಪುರ 1 ಮಂದಿಗೆ ಸೋಂಕು ತಗುಲಿದೆ.

Karataka Reports One More COVID19 Death

ಕಲಬುರಗಿಯಲ್ಲಿ 10 ವರ್ಷದ ಬಾಲಕಿಗೆ ಕೊರೊನಾಗೆ ತುತ್ತಾಗಿದ್ದಾಳೆ. ರಾಜ್ಯದಲ್ಲಿ ಒಟ್ಟು 12 ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೇ 3ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ, ಬೆಂಗಳೂರಿನಲ್ಲಿ ಶುರುವಾಗಲಿದೆ ಕೊರೋನಾ ಟೆಸ್ಟಿಂಗ್ ಮೊಬೈಲ್ ಬೂತ್

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ. ಈ ವ್ಯವಸ್ಥೆ ಡೋರ್ ಟೂ ಡೋರ್ ಸೇವೆ ನೀಡಲಿದೆ ಕೊರೋನಾ ಟೆಸ್ಟಿಂಗ್ ಮೊಬೈಲ್ ಬೂತ್ ನಾಳೆ ಸಿಎಂ ಬಿಎಸ್ ವೈ ರಿಂದ ಕೊರೋನಾ ಟೆಸ್ಟಿಂಗ್ ಮೊಬೈಲ್ ಬೂತ್ ಉದ್ಘಾಟನೆ ಮಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಮೊಬೈಲ್ ಬೂತ್ ಪರಿಚಯ, ಮನೋಜ್ ಎಂಬ ವ್ಯಕ್ತಿಯಿಂದ ಈ ಮೊಬೈಲ್ ಬೂತ್ ಪರಿಚಯ, ಸದ್ಯ ಪ್ರಾಯೋಗಿಕವಾಗಿ 2 ಬೂತ್ ಗಳನ್ನ ತಯಾರಿ ಮಾಡಲಾಗಿದೆ. ಸರ್ಕಾರದ ಮಾನ್ಯತೆ ಕೊಟ್ಟರೆ ಮತ್ತಷ್ಟು ಬೂತ್ ಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

English summary
Karataka Reports One More COVID19 Death In Vijayapura.69 year old COVID19 patient have died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X