ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಬದಲಾವಣೆ: ಯತ್ನಾಳ ಬೆದರಿಕೆಗೆ ಮಣಿದರೇ ಯಡಿಯೂರಪ್ಪ?

|
Google Oneindia Kannada News

ವಿಜಯಪುರ, ಅಕ್ಟೋಬರ್ 31: 'ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ. ವಿಜಯಪುರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಮನವಿ ಮಾಡಿದ್ದಾಗ ಅನುದಾನದ ಭರವಸೆ ನೀಡಿದ್ದರು. ಆದರೆ ಬಿಡುಗಡೆ ಮಾಡಿರಲಿಲ್ಲ. ಆದರೆ ಮೊನ್ನೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದರ ಫಲವಾಗಿ ಕೇವಲ 24 ಗಂಟೆಗಳಲ್ಲಿಯೇ 195 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ, ಉತ್ತರ ಕರ್ನಾಟಕದವರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿಯಲ್ಲಿ ಕಿಡಿ ಹಚ್ಚಿಸಿದ್ದರು. ಇದರಿಂದ ಪಕ್ಷದೊಳಗೆ ತೀವ್ರ ವಾಗ್ವಾದಗಳು ಕೂಡ ನಡೆದಿದ್ದವು. ಆರೋಪ ಪ್ರತ್ಯಾರೋಪಗಳಿಗೆ ರಾಜ್ಯದ ಜನ ಸಾಕ್ಷಿಯಾಗಿದ್ದರು. ಆದರೆ ಹಾಗೆ ಮಾತನಾಡಿದ್ದಕ್ಕಾಗಿ ಈಗ ಜಿಲ್ಲೆಗೆ ಅನುದಾನ ಪಡೆದುಕೊಳ್ಳಿವ ಮೂಲಕ ಯತ್ನಾಳ್ ಅವರು ಯಡಿಯೂರಪ್ಪ ಅವರ ಸ್ಥಾನಕ್ಕೆ ಬೆದರಿಕೆಯೊಡ್ಡುವ ತಂತ್ರದಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಯತ್ನಾಳ್ ಮೇಲೆ ಯಾಕೆ ಶಿಸ್ತು ಕ್ರಮವಿಲ್ಲ? ರಹಸ್ಯ ಬಯಲು ಮಾಡಿದ ಜೆಡಿಎಸ್ ನಾಯಕ!ಯತ್ನಾಳ್ ಮೇಲೆ ಯಾಕೆ ಶಿಸ್ತು ಕ್ರಮವಿಲ್ಲ? ರಹಸ್ಯ ಬಯಲು ಮಾಡಿದ ಜೆಡಿಎಸ್ ನಾಯಕ!

'ನಾನು ಮಾತನಾಡಿರುವುದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಮೊದಲು ನಾನು ಜನಪ್ರತಿನಿಧಿ. ನಮಗೆ ದೇಶವೇ ಮೊದಲು, ಬಳಿಕ ಪಕ್ಷ. ಇದನ್ನು ನನ್ನ ಪಕ್ಷ ಬಿಜೆಪಿಯೇ ಕಲಿಸಿಕೊಟ್ಟಿದೆ. ಇದರಲ್ಲಿ ನನ್ನ ಸ್ವಾರ್ಥ ಏನಿದೆ? ಆಡಳಿತ ಪಕ್ಷದಲ್ಲಿ ಇರುವವರು ಸರ್ಕಾರವನ್ನು ಪ್ರಶ್ನಿಸಬಾರದು ಎಂದು ಎಲ್ಲಿ ಹೇಳಲಾಗಿದೆ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಮುಂದೆ ಓದಿ.

ನಾನು ಕೇಳಿದ್ದರಲ್ಲಿ ತಪ್ಪೇನಿದೆ?

ನಾನು ಕೇಳಿದ್ದರಲ್ಲಿ ತಪ್ಪೇನಿದೆ?

'ಹತ್ತು ಸಲ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅನುದಾನ ಕೇಳಿದ್ದೆ. ಆದರೆ ಅವರು ನೀಡಿರಲಿಲ್ಲ. ಹೀಗಾಗಿ ನ್ಯಾಯದ ಪರ ಧ್ವನಿ ಎತ್ತಿದ್ದೇನೆ. ಮುಖ್ಯಮಂತ್ರಿ ನಮ್ಮ ಪಕ್ಷದವರೆಂದು ಸುಮ್ಮನಿರಲು ಸಾಧ್ಯವಿಲ್ಲ. ಇದು ಪಕ್ಷದ ಶಿಸ್ತಿನ ಪ್ರಶ್ನೆಯಾಗುವುದಿಲ್ಲ. ನಾನು ಕೇಳಿದ್ದರಲ್ಲಿ ತಪ್ಪೇನಿದೆ?' ಎಂದು ಯತ್ನಾಳ್, 'ನನ್ನ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್‌ಗೆ ಪತ್ರ ಬರೆಯುವವರು ಬರೆದುಕೊಳ್ಳಲಿ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ' ಎಂದು ವ್ಯಂಗ್ಯವಾಡಿದ್ದಾರೆ.

ಸಚಿವ ಸ್ಥಾನಕ್ಕೂ ಪ್ರಯತ್ನಿಸಿಲ್ಲ

ಸಚಿವ ಸ್ಥಾನಕ್ಕೂ ಪ್ರಯತ್ನಿಸಿಲ್ಲ

'ವಿಜಯಪುರ ನಗರದಲ್ಲಿ ಈಗ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಾನು ಯಾವ ಹುದ್ದೆಗೂ ಅಪೇಕ್ಷಿಸಿಲ್ಲ. ಸಚಿವ ಸ್ಥಾನಕ್ಕಾಗಿಯೇ ನಾನು ಪ್ರಯತ್ನ ಮಾಡಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ನಾನು ಸಿಎಂ ಆಗಲಿ ಎಂದು ಉತ್ತರ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳೂ ಹೇಳಿದ್ದಾರೆ. ಅಂದು ಮಾತನಾಡಿದ್ದಕ್ಕಾಗಿ ಇಂದು ಮಹಾನಗರಕ್ಕೆ ಅನುದಾನ ಬಂದಿದೆ' ಎಂದಿದ್ದಾರೆ.

ಅವರೇ ಸಿಎಂ ಎಂದು ನಾನು ಹೇಳುವುದಿಲ್ಲ

ಅವರೇ ಸಿಎಂ ಎಂದು ನಾನು ಹೇಳುವುದಿಲ್ಲ

'ಮುಂದಿನ ಮೂರು ವರ್ಷದವರೆಗೂ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ನಾನು ಹೇಳುವುದಿಲ್ಲ. ಬೇರೆ ಸಚಿವರು ಹೇಳುವಂತೆ ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ, ಸೂರ್ಯ ಚಂದ್ರ ಇರುವವರೆಗೂ ಅವರೇ ಸಿಎಂ ಎಂದು ನಾನೇನೂ ಹೇಳುವುದಿಲ್ಲ' ಎಂದು ಅವರು ಮತ್ತೆ ಬಾಣ ಬಿಟ್ಟಿದ್ದಾರೆ.

Recommended Video

ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada
ಬೆಂಗಳೂರಿಗೊಂದು ನ್ಯಾಯ, ಇಲ್ಲಿಗೊಂದು ನ್ಯಾಯ

ಬೆಂಗಳೂರಿಗೊಂದು ನ್ಯಾಯ, ಇಲ್ಲಿಗೊಂದು ನ್ಯಾಯ

'ಪ್ರವಾಹದ ವಿಚಾರದಲ್ಲಿ ಬೆಂಗಳೂರಿಗೊಂದು ನ್ಯಾಯ, ಉತ್ತರ ಕರ್ನಾಟಕಕ್ಕೆ ಒಂದು ನ್ಯಾಯ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಭೀಮಾ ಪ್ರವಾಹ ಸಂತ್ರಸ್ತರಿಗೆ 10 ಸಾವಿರ ರೂ ನೀಡಿದ್ದರೆ, ಬೆಂಗಳೂರಿನಲ್ಲಿನ ಮಳೆ ಸಂತ್ರಸ್ತರಿಗೆ 25 ಸಾವಿರ ರೂ ಪರಿಹಾರ ನೀಡಿದ್ದಾರೆ' ಎಂದು ಯತ್ನಾಳ್ ಮತ್ತೆ ಆರೋಪಿಸಿದ್ದಾರೆ.

English summary
Vijayapura MLA Basanagouda Patil Yatnal said, i will not say Yediyurappa will remain as Chief Minister for next 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X