ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಜೆಪಿ, ಓವೈಸಿ ಒಳ ಒಪ್ಪಂದ: ಮಾಹಿತಿ ಇದ್ದರೆ ಜನತೆ ಮುಂದಿಡಲಿ'

By ವಿಜಯಪುರ ಪ್ರತಿನಿಧಿ
|
Google Oneindia Kannada News

ವಿಜಯಪುರ, ಜನವರಿ 30 : ಬಿಜೆಪಿ ಹಾಗೂ ಓವೈಸಿ ನಡುವೆ ಒಳ ಒಪ್ಪಂದ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೆ ಜನತೆಯ ಮುಂದಿಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಮುಸ್ಲಿಂ ಮತಗಳು ಹಿನ್ನಡೆಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತದೆ ಎನ್ನುವ ಭಯವಿದೆ. ಹಾಗಾಗಿ ಈ ರೀತಿಯ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಜೊತೆಗೆ ಮೈತ್ರಿ ಇಲ್ಲ ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಿಜೆಪಿ ಮೈತ್ರಿ ಮಾಡಿ ನೋಡಲಾಗಿದೆ ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನತೆ ಕೊಡುತ್ತಾರೆ ಎಂದರು.

ಓವೈಸಿ ಪಕ್ಷದ ಜತೆ ಬಿಜೆಪಿ ಗುಪ್ತ ಸಭೆ: ರಾಮಲಿಂಗಾರೆಡ್ಡಿ ಆರೋಪಓವೈಸಿ ಪಕ್ಷದ ಜತೆ ಬಿಜೆಪಿ ಗುಪ್ತ ಸಭೆ: ರಾಮಲಿಂಗಾರೆಡ್ಡಿ ಆರೋಪ

ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ ಮೇಕ್ ಇನ್ ಇಂಡಿಯಾ ಇವತ್ತಿನ ಯುವಕರಿಗೆ ಪಕೋಡ ಮಾರಬೇಕು ಇಲ್ಲ ಸರಗಳ್ಳತನ ಹಾಗೂ ಕಳ್ಳತನ ಮಾಡಬೇಕು ನಮ್ಮ ಯುವಕರು ಪಕೋಡಾ ಮಾರಾಟ ಮಾಡಿ ಬದುಕಬೇಕಿದೆ. ಮೋದಿ‌ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಹೇಳಿದ್ದರು ಆದರೆ ಎಷ್ಟು ಜನರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

HDK urges Ramalinga reddy to reveal fact about BJP and Owaisi nexus

ಪಕೋಡಾ ಮಾರಾಟ ಮಾಡುವುದೂ ಸಹ‌ ಮೇಕ್ ಇನ್ ಇಂಡಿಯಾ ಎಂದು ಜನರಿಗೆ ಇವಾಗಾ ಗೊತ್ತಾಗಿದೆ ಉದ್ಯೋಗ ಕುರಿತು ಮೋದಿ ನೀಡಿದ ಭರವಸೆ ಯಾವುದು ಎಂದು ಜನರಿಗೆ‌ ಈಗ ಗೊತ್ತಾಗಿದೆ ನಾಡಿನ ಜನತೆಯ ತಲೆ ಮೇಲೆ 2 ಲಕ್ಷ 90 ಸಾವಿರ ಕೋಟಿ ಸಾಲದ ಹೊರೆ ಹೊರೆಸಿದ್ದೆ ಸರ್ಕಾರದ ಸಾಧನೆ ಎಂದರು.

ಬಿಜೆಪಿ, ಓವೈಸಿ ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಿಎಂಬಿಜೆಪಿ, ಓವೈಸಿ ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಿಎಂ

5000 ಕೋಟಿ ರೂಪಾಯಿ ಹಗರಣದ ದಾಖಲೆಗಳ ಬಿಡುಗಡೆ ಮಾಡಿದ್ದೀನಿ ಅವು ಸರ್ಕಾರದ ದಾಖಲೆಗಳು ಈ ವರೆಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ ಸಚಿವ ವಿನಯ ಕುಲಕರ್ಣಿಗೆ ಬರೆದುಕೊಟ್ಟು ಹೇಳಿಕೆ ಕೊಡಿಸಲಾಗಿದೆ ಸಧ್ಯಕ್ಕೆ ಭ್ರಷ್ಟಾಚಾರದ ವಿಷಯ ಪ್ರಸ್ತಾಪ ಇಲ್ಲ ಯಾವುದೋ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ ಜನರ ಮನಸಿನ ಗಮನ ಡೈವರ್ಟ್ ಮಾಡುವುದಿಲ್ಲ ಎಂದು ಹೇಳಿದರು.

English summary
Former chief minister HD Kumaraswamy has been urged home minister Ramalingareddy to reveal the fact to people of the state about internal understanding between BJP and AIMIM led by Owaisi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X