ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಾಧರ ಚಡಚಣ ಹತ್ಯೆ: ತಲೆಮರೆಸಿಕೊಂಡಿದ್ದ ಇನ್ಸ್‌ಪೆಕ್ಟರ್‌ ಬಂಧನ

|
Google Oneindia Kannada News

ವಿಜಯಪುರ, ಅಕ್ಟೋಬರ್‌ 20: ಭೀಮಾ ತೀರದ ಗಂಗಾಧರ ಚಡಚಣ ಮತ್ತು ಧರ್ಮರಾಜ ಅವರುಗಳ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆ ಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಅಸೋಡೆಯ ಬಂಧನವಾಗಿದೆ.

ಪ್ರಕರಣದಲ್ಲಿ 13ನೇ ಆರೋಪಿ ಆಗಿದ್ದ ಸಿಪಿಐ ಅಸೋಡೆ ತಲೆಮರೆಸಿಕೊಂಡಿದ್ದ. ಆತನಿಗೆ ಹುಡುಕಾಟ ನಡೆಸುತ್ತಿದ್ದ ಸಿಐಡಿ ತಂಡವು ಅಸೋಡೆಯನ್ನು ಕೊಲ್ಕತ್ತದಲ್ಲಿ ಇಂದು ಬಂಧಿಸಿದೆ.

ಗಂಗಾಧರ ಚಡಚಣ ಹತ್ಯೆ : ಮಹಾದೇವ ಭೈರಗೊಂಡ ಸಿಐಡಿ ವಶಕ್ಕೆ ಗಂಗಾಧರ ಚಡಚಣ ಹತ್ಯೆ : ಮಹಾದೇವ ಭೈರಗೊಂಡ ಸಿಐಡಿ ವಶಕ್ಕೆ

ಕಳೆದ ವರ್ಷ ಅಕ್ಟೋಬರ್ 30 ರಂದು ಗಂಗಾಧರ ಚಡಚಣ ಅವರ ಎನ್‌ಕೌಂಟರ್ ಆಗಿತ್ತು. ಆದರೆ ಇದು ನಕಲಿ ಎನ್‌ಕೌಂಟರ್‌ ಎಂದು ಗಂಗಾಧರ ಚಡಚಣ ಅವರ ತಾಯಿ ಆಗಿನ ಉತ್ತರ ವಲಯದ ಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.

ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ? ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ?

Gangadhara Chadachana murder case: CPI arrested

ಪ್ರಕರಣದ ತನಿಖೆ ನಡೆದಾಗ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿ ಅವರೇ ನಕಲಿ ಎನ್‌ಕೌಂಟರ್‌ನಲ್ಲಿ ಗಂಗಾಧರ ಚಡಚಣ ಹಾಗೂ ಧರ್ಮರಾಜನನ್ನು ಕೊಂದಿದ್ದಾರೆ ಎಂದು ಗೊತ್ತಾಗಿದೆ.

ಗಂಗಾಧರ ಚಡಚಣ ಹತ್ಯೆ : ಪ್ರತ್ಯಕ್ಷದರ್ಶಿಯನ್ನು ಬಂಧಿಸಿದ ಸಿಐಡಿಗಂಗಾಧರ ಚಡಚಣ ಹತ್ಯೆ : ಪ್ರತ್ಯಕ್ಷದರ್ಶಿಯನ್ನು ಬಂಧಿಸಿದ ಸಿಐಡಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರು ಆರೋಪಿಗಳಾಗಿದ್ದು, ಸಿಐಡಿ ಅವರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಜನರನ್ನು ಈ ವರೆಗೆ ಬಂಧಿಸಲಾಗಿದೆ.

English summary
Police inspector who is accused in Gangadhar Chadchana case has been arrested today in Kolkata. He was missing from the case was taken up by CID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X