ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಂಗಾಧರ ಚಡಚಣ ಹತ್ಯೆ : ಎಂ.ಬಿ.ಅಸೋಡೆ 14 ದಿನ ನ್ಯಾಯಾಂಗ ಬಂಧನಕ್ಕೆ

|
Google Oneindia Kannada News

ವಿಜಯಪುರ, ಅಕ್ಟೋಬರ್ 31 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ ಎಂ.ಬಿ.ಅಸೋಡೆ ಸೇರಿ ಸೇರಿದಂತೆ ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂ.ಬಿ.ಅಸೋಡೆ ಪ್ರಕರಣದ 13ನೇ ಆರೋಪಿ.

ಸಿಐಡಿ ಪೊಲೀಸರ ವಶದಲ್ಲಿದ್ದ ಅಂದಿನ ಚಡಚಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ಅಸೋಡೆ, ಅಸೋಡೆ ಸೋದರ ಸಂಬಂಧಿ ಶ್ರೀಮಂತ ಸಂಗಪ್ಪ ಅಸೋಡೆ, ಕಾರು ಚಾಲಕ ವಿಶ್ವಜ್ಯೋತ ಗಾಯಕವಾಡ ಅವರನ್ನು ವಿಜಯಪುರದ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ

ಇಂಡಿ ನ್ಯಾಯಾಲಯ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಭೈರಗೊಂಡ ಮತ್ತು ಚಡಚಣ ಕುಟುಂಬದ ದ್ವೇಷದ ಹಿನ್ನಲೆಯಲ್ಲಿ ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆ

Gangadhar Chadchan murder case : judicial custody for MB Asode

ಗಂಗಾಧರ ಚಡಚಣ ಮತ್ತು ಧರ್ಮರಾಜ ಚಡಚಣ ಸಾವನ್ನಪ್ಪಿ ಅಕ್ಟೋಬರ್ 30ಕ್ಕೆ ಒಂದು ವರ್ಷ ಕಳೆದಿದೆ. ಚಡಚಣ ಸಹೋದರರ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಅವರು ಚಡಚಣ ಸಹೋದರರ ಫೋಟೋವನ್ನು ತೋಟದ ಮನೆಯಲ್ಲಿಟ್ಟು ಪೂಜೆ ಸಲ್ಲಿಸಿದರು. ಧರ್ಮರಾಜ ಚಡಚಣ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ?ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ?

'ಗಂಗಾಧರ ಚಡಚಣ ಮತ್ತು ಧರ್ಮರಾಜ ಚಡಚಣ ಹತ್ಯೆ ಪ್ರಕರಣದಲ್ಲಿ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ' ಎಂದು ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಒತ್ತಾಯಿಸಿದರು.

English summary
Vijayapura district Indi court ordered 14 days judicial custody for Chadchan police station former inspector M.B.Asode. CID police arrested M.B.Asode in connection with the Gangadhar Chadchan murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X