ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಚಿನ್ಹೆ ನಿರೀಕ್ಷೆಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್

By Mahesh
|
Google Oneindia Kannada News

ವಿಜಯಪುರ, ಮಾರ್ಚ್ 12: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಈಗ ಹೊಸ ಚಿನ್ಹೆಯ ನಿರೀಕ್ಷೆಯಲ್ಲಿದೆ.

ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 13ರಂದು ಅಧಿಕೃತ ಚಿನ್ಹೆ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಅನುಪಮಾ ಅವರು, ತಾವು ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.

ಅನುಪಮಾ ಶೆಣೈ ಅವರ ಹೊಸ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್'ಅನುಪಮಾ ಶೆಣೈ ಅವರ ಹೊಸ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್'

ಕೇಂದ್ರ ಚುನಾವಣಾ ಆಯೋಗವು ಚಿನ್ಹೆ ನೀಡಿದ ಬಳಿಕ ಮಾರ್ಚ್ 15ರಂದು ಬಸವನ ಬಾಗೇವಾಡಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ತಾವು ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದರು.

ಯಾವ ಯಾವ ಚಿನ್ಹೆಗಾಗಿ ಬೇಡಿಕೆ

ಯಾವ ಯಾವ ಚಿನ್ಹೆಗಾಗಿ ಬೇಡಿಕೆ

ಪೆನ್ನು, ತೆಂಗಿನಕಾಯಿ, ಮೇಣಸಿನಕಾಯಿ, ದೋಣಿ ಮತ್ತು ಮನುಷ್ಯ ಸೇರಿದಂತೆ 10 ಲಭ್ಯ ಗುರುತುಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಒಂದನ್ನು ಆಯ್ಕೆ ಮಾಡಿ ಆಯೋಗ ಸೂಚಿಸಲಿದೆ. ಯಾವುದು ಎಂಬುದು ಮಾರ್ಚ್ 13ರ ವೇಳೆಗೆ ತಿಳಿಯಲಿದೆ.

Recommended Video

ನ.1 ರಂದು ಹೊಸ ರಾಜಕೀಯ ಪಕ್ಷ ಘೋಷಣೆ: ಅನುಪಮಾ ಶಣೈ | Oneindia Kannada
ಯಾವ ಕ್ಷೇತ್ರ ಎಂದು ನಿರ್ಧರಿಸಿಲ್ಲ

ಯಾವ ಕ್ಷೇತ್ರ ಎಂದು ನಿರ್ಧರಿಸಿಲ್ಲ

ಈ ಬಾರಿ ಚುನಾವಣೆಯಲ್ಲಿ ತಾವು ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ಬಳ್ಳಾರಿ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದರು.

ಪ್ರಜಾಕೀಯದ ಜತೆ ಹೊಂದಾಣಿಕೆ

ಪ್ರಜಾಕೀಯದ ಜತೆ ಹೊಂದಾಣಿಕೆ

ಉಪೇಂದ್ರರವರ ಪಕ್ಷದೊಂದಿಗೆ ಹೊಂದಾಣಿಕೆ ಕುರಿತು ಕೇಳಿದ ಪ್ರಶ್ನೆಗೆ, ಸಮಾನ ಮನಸ್ಕರು ಸೇರಿ ಚುನಾವಣೆ ಎದುರಿಸಬೇಕು ಎಂದುಕೊಂಡು ಅವರೊಂದಿಗೆ ಎರಡು ಬಾರಿ ಸಮಾಲೋಚನೆ ನಡೆಸಿದೆ. ಆದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನೆ ನನ್ನನ್ನು ಸುತ್ತಾಡಿಸಿದರು. ಅವರ ಪಕ್ಷದ ನೋಂದಣಿಗೆ ಇನ್ನೂ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದಿದ್ದರು. ಆದರೆ, ಕೆಪಿಜೆಪಿ ಎಂಬ ನೋಂದಾಯಿತ ಪಕ್ಷದ ಜತೆ ಗುರುತಿಸಿಕೊಂಡರು. ಈಗ ಪ್ರಜಾಕೀಯ ಎನ್ನುತ್ತಿದ್ದಾರೆ. ಗೊಂದಲ ನಿವಾರಣೆಯಾಗುವ ತನಕ ಈ ಬಗ್ಗೆ ಮಾತುಕತೆ ಮಾಡುವುದಿಲ್ಲ

ಜನರ ಹಿತವನ್ನು ಕಾಯಲು ಪಕ್ಷ

ಜನರ ಹಿತವನ್ನು ಕಾಯಲು ಪಕ್ಷ

ಮೊದಲ ಹಂತದಲ್ಲಿ 80 ಕ್ಷೇತ್ರಗಳನ್ನು ಪ್ರಮುಖವಾಗಿ ಪರಿಗಣಿಸಿದ್ದೇವೆ, ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಗಳನ್ನು ಕಣಕ್ಕಿಳಿಸುವ ಇರಾದೆ ಇದೆ.

ನಾನು ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಹಾಗಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು. ಇದರ ಹಿನ್ನಲೆಯಲ್ಲಿ ರಾಜಕೀಯದಲ್ಲಿ ಪೊಲೀಸ್ ಶಕ್ತಿಯನ್ನು ಬಳಸಿ ಭ್ರಷ್ಟಾಚಾರವನ್ನ ನಿರ್ಮೂಲನೆ ಮಾಡಲು ಇಚ್ಛಿಸುತ್ತೇನೆ. ಸಂವಿಧಾನಕ್ಕೆ ಹೆಚ್ಚು ಒತ್ತುಕೊಟ್ಟು ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ನೆಮ್ಮದಿ ಜೀವನ ನೀಡುವುದು ನಮ್ಮ ಮುಖ್ಯ ಗುರಿ ಎಂದರು.

English summary
Elections 2018: Bharatiya Janashakti Congress president Anupama Shenoy yet to decide on her constituency whether to contest from Kaup or Kudligi. She said, but confident about fielding candidates from all fields. Party likely to get official symbol on March 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X