ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧವಾ ವೇತನಕ್ಕಾಗಿ ಲಂಚ ಸ್ವೀಕರಿಸಿ ಜೈಲಿಗೆ ಹೋದ ಗ್ರಾಮಲೆಕ್ಕಾಧಿಕಾರಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಿರುವ ಆದಾಯ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಮೂರು ಸಾವಿರ ಲಂಚ ಸ್ವೀಕರಿಸಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಧವೆ ಮಹಿಳೆ ಬಳಿ ಲಂಚ ಪಡೆಯಲು ಹೋಗಿ ಇದೀಗ ಜೈಲು ಪಾಲಾಗಿದ್ದಾನೆ.

ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ಬಸವರಾಜು ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಅಧಿಕಾರಿ. ರೋಣಿಹಾಳ ಗ್ರಾಮದ ನಿವಾಸಿ ವಿಧವಾ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಡಿಮೆ ಆದಾಯ ಇರುವ ಬಗ್ಗೆ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಅರ್ಜಿದಾರ ಮಹಿಳೆಗೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಆದಾಯ ಪ್ರಮಾಣ ಪತ್ರ ನೀಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದ್ದರು. ಕಡಿಮೆ ಆದಾಯ ಇರುವ ಬಗ್ಗೆ ದೃಢೀಕರಿಸಿ ಸಹಿ ಮಾಡಲು ಮೂರು ಸಾವಿರ ಲಂಚ ನೀಡುವಂತೆ ಮಹಿಳೆ ಬಳಿ ಬೇಡಿಕೆ ಇಟ್ಟಿದ್ದಾರೆ. ಇದರಿದ ಬೇಸತ್ತ ಮಹಿಳೆ ವಿಜಯಪುರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಗುರುವಾರ ಲಂಚ ಸ್ವೀಕರಿಸುವಾಗ ಬಸವರಾಜು ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿತ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

demand for bribe : Ronihal village accountant trapped

Recommended Video

ಬೆಲೆ ಏರಿಕೆ ಖಂಡಿಸಿ ಭಾರತ ಬಂದ್-ದೇಶದ 1,500 ಪಟ್ಟಣಗಳಲ್ಲಿ ನಡೆಯುತ್ತಿರುವ ಬಂದ್ | Oneindia Kannada

ಅಂತೂ ಬಡ ಮಹಿಳೆ ವಿಧವಾ ವೇತನ ಪಡೆಯಲಿಕ್ಕೂ ಆಸ್ಪದ ನೀಡದೇ ಪೀಕಲಿಕ್ಕೆ ಬಸವರಾಜು ಯತ್ನಿಸಿದ್ದ. ಮಾಸಿಕ ಒಂದು ಸಾವಿರ ವಿಧವಾ ವೇತನ ಎಂದು ಗೊತ್ತಿದ್ದರೂ, ಭ್ರಷ್ಟ ಅಧಿಕಾರಿಗಳು ಒಂದು ವರ್ಷದ ವಿಧವಾ ವೇತನ ವನ್ನು ಲಂಚದ ರೂಪದಲ್ಲಿಯೇ ವಸೂಲಿ ಮಾಡಿ ಬಿಡುತ್ತಾರೆ. ಬಡ ಮಹಿಳೆಯಿಂದಲೂ ಲಂಚ ಬಿಡದ ಭ್ರಷ್ಟ ಅಧಿಕಾರಿಗೆ ತಕ್ಕ ಶಾಸ್ತಿ ಆಗಿದೆ.

English summary
Ronihalla Grama Panchayath village accountant was trapped and arrested by Anti corruption wing .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X