ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಉಲ್ಲಂಘನೆ: ವಿನೂತನ ಶಿಕ್ಷೆ ನೀಡುತ್ತಿರುವ ಪೊಲೀಸರು

|
Google Oneindia Kannada News

ವಿಜಯಪುರ, ಮಾರ್ಚ್ 30: ಲಾಕ್ ಡೌನ್ ಇದ್ದರೂ, ಜನರನ್ನು ಸಂಪೂರ್ಣವಾಗಿ ಹೊರಗೆ ಬರದಂತೇ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಲಾಠಿ ಬೀಸಿದ್ದಕ್ಕೆ ವಿರೋಧ ವ್ಯಕ್ತವಾದ ನಂತರ, ತಿಳಿಹೇಳುವ, ಬುದ್ದಿ ಹೇಳುವ, ಬಸ್ಕಿ ಹೊಡೆಸುವ ಕೆಲಸಕ್ಕೂ ಪೊಲೀಸರು ಮುಂದಾದರು. ಅದಕ್ಕೂ ಜಗ್ಗದಾಗ, ಕೈಮುಗಿಯುವುದು, ಗುಲಾಬಿ ಕೊಟ್ಟು ಪ್ರಯತ್ನ ಮಾಡಿದರು. ಆದರೂ, ಅದು ಸರಿಯಾಗಿ ವರ್ಕೌಟ್ ಆಗುತ್ತಿಲ್ಲ.

Live Updates: ಮಹಾರಾಷ್ಟ್ರದಲ್ಲಿ ಕೊರೊನಾಗೆ ಮತ್ತೋರ್ವ ಬಲಿLive Updates: ಮಹಾರಾಷ್ಟ್ರದಲ್ಲಿ ಕೊರೊನಾಗೆ ಮತ್ತೋರ್ವ ಬಲಿ

ಇದೆಲ್ಲಾ ಪ್ರಯತ್ನದ ನಂತರ ವಿಜಯಪುರ ಪೊಲೀಸರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದು, ಅಲ್ಲಿನ ಯುವ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.

Coronavirus Lock Down Violation, Different Step Taken By Vijayapura Police

ಮನೆಯಿಂದ ವಿನಾ ಕಾರಣ ಹೊರ ಬರುವ ಯುವಕರನ್ನು ತಡೆದು ನಿಲ್ಲಿಸುತ್ತಿರುವ ಪೊಲೀಸರು, "ನಾನು ಸಮಾಜದ ವಿರೋಧಿ, ಲಾಕ್ ಡೌನ್ ಉಲ್ಲಂಘಿಸಿದ್ದೇನೆ" ಎನ್ನುವ ಸೀಲನ್ನು, ಲಾಕ್ ಡೌನ್ ಉಲ್ಲಂಘಿಸುವವರ ಹಣೆಗೆ ಒತ್ತಿಒತ್ತಿ ಕಳುಹಿಸುತ್ತಿದ್ದಾರೆ.

ನಗರದ ಗಾಂಧಿ ಚೌಕ್ ನಲ್ಲಿ ಈ ಹೊಸ ಪ್ರಯತ್ನ ಮಾಡುತ್ತಿರುವ ಪೊಲೀಸರು, ಹಣೆಗೆ ಸೀಲ್ ಹಾಕಿದ ಮೇಲೆ, ಎಚ್ಚರಿಕೆ ಕೊಟ್ಟು, ಬಿಟ್ಟು ಕಳುಹಿಸುತ್ತಿದ್ದಾರೆ. ಇದು, ಯಾವರೀತಿ ವರ್ಕೌಟ್ ಆಗುತ್ತದೆ ಎಂದು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.

ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ? ಕೊರೊನಾ: ಲಾಕ್‌ಡೌನ್ ಸಂದರ್ಭದಲ್ಲಿ ಇ ಪಾಸ್ ಪಡೆಯುವುದು ಹೇಗೆ?

ಈ ನಡುವೆ, ಕೊರೊನಾ ಅಟ್ಟಹಾಸ ವಿಶ್ವಾದ್ಯಂತ ಮುಂದುವರಿದಿದೆ. ಈ ಸೋಂಕಿನಿಂದಾಗಿ ಸ್ಪೇನ್‌ ನಲ್ಲಿ ಕಳೆದ 24 ಗಂಟೆಯಲ್ಲಿ 812 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಆ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 7,340 ಆಗಿದೆ.

English summary
Coronavirus Lock Down Violation, Different Step Taken By Vijayapura Police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X