• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಬಳಿ ಹೊದ್ದುಕೊಳ್ಳುವ ಯೋಗ್ಯತೆ ಬಗ್ಗೆ ವಿವರಿಸಿದ ಸಿಎಂ ಬಸವರಾಜ ಬೊಮ್ಮಾಯಿ!

|
Google Oneindia Kannada News

ವಿಜಯಪುರ, ಅ. 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದ್ದುಕೊಳ್ಳುವ ಯೋಗ್ಯತೆ ಇಲ್ಲವಾ? ಯಾಕೆಂದರೆ ಹೇಳುವ ಮೂಲಕ ಪರೋಕ್ಷ ವಾಗ್ದಾಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಉಪ ಚುನಾವಣೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ. ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎದುರಾಗಿರುವ ಸವಾಲು ಎದುರಿಸಲು ಉಪ ಸಮರ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ಮಿಂಚಿನ ಸಂಚಾರ ನಡೆಸಿ ಪ್ರಚಾರ ಮಾಡುತ್ತಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪ್ರಚಾರ ನಡೆಸಿದ್ದ ಬೊಮ್ಮಾಯಿ ಅವರು ಭಾನುವಾರ ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮುಂದುವರೆಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ಇನ್ನೂ ಮೂರು ದಿನಗಳ ಕಾಲಾವಕಾಶವಿದೆ. ಅ. 28ರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಅವರು ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಮುಂದುವರೆಸಿದ್ದಾರೆ. ಇದೇ ವೇಳೆ ಯಾರಿಗೆ ಕಂಬಳಿ ಹೊದ್ದುಕೊಳ್ಳುವ ಯೋಗ್ಯತೆ ಇದೆ? ಎಂಬುದನ್ನೂ ಹೇಳಿದ್ದಾರೆ!

ಸಿದ್ದರಾಮಯ್ಯ ಮೇಲೆ ಪರೋಕ್ಷ ವಾಗ್ದಾಳಿ!

ಸಿದ್ದರಾಮಯ್ಯ ಮೇಲೆ ಪರೋಕ್ಷ ವಾಗ್ದಾಳಿ!

ಪ್ರಚಾರದ ಸಂದರ್ಭದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನದಟ್ಟು ಮಾಡುವುದರೊಂದಿಗೆ ವಿರೋಧ ಪಕ್ಷಗಳ ನಾಯಕರ ಮೇಲೆ ಸಿಎಂ ಬೊಮ್ಮಾಯಿ ಹರಿ ಹಾಯುತ್ತಿದ್ದಾರೆ. ಭಾನುವಾರ ಸಿಂದಗಿಯ ಕೊಕಟನೂರು ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ರೀತಿ ಗಮನ ಸೆಳೆಯುವಂತಿತ್ತು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಪರೋಕ್ಷ ವಾಗ್ದಾಳಿ ಮಾಡಿದ್ದು ಹೀಗಿದೆ.

"ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಭಾಷಣದಲ್ಲಿ ಹೇಳಿದ್ದಾರೆ. ಆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ನಿಮಗೆ ಕಂಬಳಿ ಹೊತ್ತುಕೊಳ್ಳುವ ಯೋಗ್ಯತೆ ಇಲ್ಲ!

ನಿಮಗೆ ಕಂಬಳಿ ಹೊತ್ತುಕೊಳ್ಳುವ ಯೋಗ್ಯತೆ ಇಲ್ಲ!

"ಉಣ್ಣೆ ಕಂಬಳಿಯನ್ನು ಯಾರು ಬೇಕಾದರೂ ಹಾಕಿಕೊಂಡರೆ ಯೋಗ್ಯತೆ ಬರುವುದಿಲ್ಲ. ಹಾಲುಮತದ ಸಮಾಜಕ್ಕೆ ಸರಿಯಾದ ಅಭಿವೃದ್ಧಿ ಮಾಡಿ, ದಾಸಶ್ರೇಷ್ಠರಾದವರಿಗೆ ಮಾತ್ರ ಆ ಯೋಗ್ಯತೆ ಪ್ರಾಪ್ತಯಾಗುತ್ತೆ, ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಅವರ ಕರ್ಮಭೂಮಿ ಕಾಗಿನೆಲೆಯನ್ನು ಬಿ.ಜೆ.ಪಿ. ಅಧಿಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದೆ" ಎಂದು ಹೇಳುವ ಮೂಲಕ ಕುರುಬ ಸಮುದಾಯವನ್ನು ಬಿಜೆಪಿ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದೆ ಎಂಬುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದ್ದಾರೆ.

ಸಂವಿಧಾನ ಶಿಲ್ಪಿಯನ್ನು ಸೋಲಿಸಿದ್ದು ಕಾಂಗ್ರೆಸ್!

ಸಂವಿಧಾನ ಶಿಲ್ಪಿಯನ್ನು ಸೋಲಿಸಿದ್ದು ಕಾಂಗ್ರೆಸ್!

"ಎಲ್ಲಿದೆ ಸಾಮಾಜಿಕ ನ್ಯಾಯ? ಸಾಮಾಜಿಕ ನ್ಯಾಯದ ಹರಿಕಾರರಾದ ಕಾಂಗ್ರೆಸ್ ಪಕ್ಷ ಯಾರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಸಂವಿಧಾನ ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ದೇಶ ಸದಾ ಋಣಿಯಾಗಿರಬೇಕು. ಆದರೆ ಅವರ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಚುನಾವಣೆಯಲ್ಲಿ ಸೋಲಿಸಲಾಯಿತು." ಎಂದು ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಜೊತೆಗೆ ಕುರುಬ ಹಾಲುಮತ ಸಮುದಾಯದ ಬಗ್ಗೆಯೂ ಮಾತನಾಡಿದ್ದಾರೆ.

ಕೇವಲ ಅಧಿಕಾರಕ್ಕಾಗಿ ಹಾಲುಮತ ಸಮುದಾಯದ ಬಳಕೆ!

ಕೇವಲ ಅಧಿಕಾರಕ್ಕಾಗಿ ಹಾಲುಮತ ಸಮುದಾಯದ ಬಳಕೆ!

"ಹಾಲುಮತ ಸಮಾಜ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಸಣ್ಣ ಸಣ್ಣ ಕಸುಬುಗಳನ್ನು ಮಾಡುವವರು ಸಹ ಅದೇ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಚುನಾವಣೆಗೆ ಬಳಸಿಕೊಂಡರು ಅವರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ. ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮಕ್ಕಳು ಮುಂದಕ್ಕೆ ಬಂದು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಯಿಂದ ಮಾತ್ರ ಸಾಧ್ಯ. ಕಾರಣ ಮತದಾರರು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗಲು ಅವಕಾಶ ಮಾಡಿಕೊಡಬೇಕು" ಎಂದು ಮತದಾರರಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಿದರು.

English summary
Chief Minister Basavaraj Bommai has made an indirect allegation in the Sindagi by-election campaign against opposition leader Siddaramaiah. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X