ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕರ ಭಾವನೆಗೆ ಅವಕಾಶ ನೀಡಿ: ಬಸನಗೌಡ ಪಾಟೀಲ್ ಯತ್ನಾಳ್ ಪತ್ರ

By ವಿಜಯಪುರ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಡಿಸೆಂಬರ್ 31: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವ ಪ್ರಶ್ನಿಸಿ, ಮುಂಬರುವ ಸಂಕ್ರಾಂತಿ ಗಡುವು ನೀಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿಗಳು ಶೀಘ್ರವೇ ಶಾಸಕಾಂಗ ಸಭೆ ಕರೆದು ಮುಕ್ತವಾಗಿ ಶಾಸಕರ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾ.ಪಂ ಚುನಾವಣೆ: ರಾಮನಗರದಲ್ಲಿ ಶೂನ್ಯದಿಂದ ಮೂರಂಕಿ ದಾಟಿದ ಬಿಜೆಪಿ ಬೆಂಬಲಿತರುಗ್ರಾ.ಪಂ ಚುನಾವಣೆ: ರಾಮನಗರದಲ್ಲಿ ಶೂನ್ಯದಿಂದ ಮೂರಂಕಿ ದಾಟಿದ ಬಿಜೆಪಿ ಬೆಂಬಲಿತರು

ಜನೆವೆರಿ 4 ಮತ್ತು 5 ರಂದು ಶಾಸಕಾಂಗ ಸಭೆ ನಡೆಸಿ ಎಂದು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ. ಸಿಎಂ ಅವರ ಕಾರ್ಯ ವೈಖರಿ ಬಗ್ಗೆ ರಾಜ್ಯ ಉಸ್ತುವಾರಿ, ರಾಜ್ಯಾಧ್ಯಕ್ಷರ ಮುಂದೆ ಪ್ರಸ್ತಾಪಿಸಿದ್ದಾನೆ. ಅವರು ಅನುಮತಿ ನೀಡಿದರೆ, ರಾಷ್ಟ್ರೀಯ ಅಧ್ಯಕ್ಷರ ಬಳಿಯೂ ಪ್ರಸ್ತಾಪಿಸುತ್ತೇವೆ ಎಂದರು.

Vijayapura: BJP MLA Basana Gowda Patil Yatnal Letter To BJP President Nalin Kumar Kateel

ಹಿರಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಅಂತ ಹೇಳಿದ್ದಾರೆ ಎಂದರು.

Recommended Video

ಸಿದ್ದು ಪದೇಪದೆ BSY ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ? | Oneindia Kannada

ಯಾರೋ ಒಂದಿಬ್ಬರು ಶಾಸಕರು ಹೀಗೆ ಮಾತನಾಡಿರಬಹುದು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ. ಇನ್ನು ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಸಚಿವ ಕೆ.ಈಶ್ವರಪ್ಪ ಕಿಡಿಕಾರಿದ್ದಾರೆ. ಕುಡಿದು ಮಾತನಾಡುವವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

English summary
The chief ministers should convene a legislators meeting and allow the legislators to share their feelings freely, Speaking in Vijayapura BJP MLA Basanagowda Patil Yatnal said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X