ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ-ಬೆಂಗಳೂರು ನಡುವೆ 10 ದಿನದಲ್ಲಿ ಹೊಸ ರೈಲು

|
Google Oneindia Kannada News

ವಿಜಯಪುರ, ಅಕ್ಟೋಬರ್ 15 : ಬೆಂಗಳೂರಿನ ಯಶವಂತಪುರ-ವಿಜಯಪುರ ನಡುವೆ ಹೊಸ ರೈಲನ್ನು ಘೋಷಣೆ ಮಾಡಲಾಗಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳನ್ನು ಅಂತಿಮಗೊಳಿಸುವ ತಯಾರಿಯಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ.

ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ 10 ದಿನಗಳಲ್ಲಿ ನೂತನ ರೈಲು ಸಂಚಾರದ ದಿನಾಂಕ ಅಂತಿಮವಾಗಲಿದೆ. ಯಶವಂತಪುರದಿಂದ ಹೊರಡುವ ನೂತನ ರೈಲು ಹೊಸಪೇಟೆ ಮಾರ್ಗವಾಗಿ ವಿಜಯಪುರವನ್ನು ತಲುಪಲಿದೆ.

ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಬೆಳಗಾವಿ ತನಕ ವಿಸ್ತರಣೆ

ಬೆಂಗಳೂರು-ವಿಜಯಪುರ ನಡುವೆ ಸಂಚಾರ ನಡೆಸುವ ಜನರಿಗೆ ನೂತನ ರೈಲು ಸೇವೆಯಿಂದ ಸಹಾಯಕವಾಗಲಿದೆ. ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಯ ಜನರಿಗೆ ಹೊಸ ರೈಲಿನಿಂದ ಹೆಚ್ಚಿನ ಅನುಕೂಲವಾಗಲಿದೆ.

ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು

Bengaluru Vijayapura New Train Soon

ಪ್ರಸ್ತುತ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರದ ತನಕ ಸಂಚಾರ ನಡೆಸುತ್ತಿದೆ. ಕೆಲವು ಬೇರೆ ರೈಲುಗಳ ಸಂಚಾರ ನಡೆಸುತ್ತಿದ್ದರು ಸಮಯದ ಹೊಂದಾಣಿಕೆ ಆಗದ ಕಾರಣ ಜನರು ಹೊಸ ರೈಲಿಗಾಗಿ ಬೇಡಿಕೆ ಇಟ್ಟಿದ್ದರು.

ತುಮಕೂರು-ಬೆಂಗಳೂರು ಡೆಮು ರೈಲು; ಸಮಯ, ನಿಲ್ದಾಣ ವಿವರ ತುಮಕೂರು-ಬೆಂಗಳೂರು ಡೆಮು ರೈಲು; ಸಮಯ, ನಿಲ್ದಾಣ ವಿವರ

ಜನರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಹೊಸ ರೈಲು ಆರಂಭಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ವಿಜಯಪುರ-ಹೊಸಪೇಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸ ರೈಲು ಆರಂಭಿಸಲು ಈಗ ಸಿದ್ಧತೆ ನಡೆದಿದೆ.

ರೈಲಿನ ಸಮಯ, ನಿಲ್ದಾಣ ಮುಂತಾದವುಗಳನ್ನು ಅಂತಿಮಗೊಳಿಸುವಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. 10 ದಿನದಲ್ಲಿ ರೈಲು ಸಂಚಾರದ ದಿನಾಂಕ ಅಂತಿಮಗೊಳ್ಳುವ ನಿರೀಕ್ಷೆ ಇದೆ.

English summary
Vijayapura to get new train from Yeshwantpur Bengaluru. Train will run in the route of Hospet. Time and stations will be finalized soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X