ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸೇರಲು 3 ಷರತ್ತು ವಿಧಿಸಿದ ಬಸನಗೌಡ ಪಾಟೀಲ್ ಯತ್ನಾಳ್!

|
Google Oneindia Kannada News

Recommended Video

ಬಿಜೆಪಿ ಸೇರಲು 3 ಷರತ್ತು ವಿಧಿಸಿದ ಬಸನಗೌಡ ಪಾಟೀಲ್ ಯತ್ನಾಳ್ | Oneindia Kannada

ವಿಜಯಪುರ, ನವೆಂಬರ್ 30 : ಮಾಜಿ ಕೇಂದ್ರ ಸಚಿವ, ವಿಧಾನಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರಲು ಮೂರು ಷರತ್ತುಗಳನ್ನು ವಿಧಿಸಿದ್ದಾರೆ. ಡಿಸೆಂಬರ್ 13ರಂದು ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.

ಕುತೂಹಲ ಮೂಡಿಸಿದ ಯಡಿಯೂರಪ್ಪ, ಯತ್ನಾಳ್ ರಹಸ್ಯ ಭೇಟಿ!ಕುತೂಹಲ ಮೂಡಿಸಿದ ಯಡಿಯೂರಪ್ಪ, ಯತ್ನಾಳ್ ರಹಸ್ಯ ಭೇಟಿ!

ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, 'ನಾನು ಬೇಷರತ್ತಾಗಿ ಬಿಜೆಪಿ ಸೇರುತ್ತಿಲ್ಲ. ಶಿವಸೇನೆ ಕಡೆಯಿಂದಲೂ ಆಹ್ವಾನ ಬಂದಿದೆ. ಬಿಜೆಪಿ ಟಿಕೆಟ್ ನೀಡದಿದ್ದರೆ ಶಿವಸೇನೆ ಅಥವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ' ಎಂದು ಹೇಳಿದರು.

ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿಯಿಂದ ಗೇಟ್ ಪಾಸ್ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿಯಿಂದ ಗೇಟ್ ಪಾಸ್

ಸೋಮವಾರ ವಿಜಯಪುರದ ಪ್ರವಾಸಿ ಮಂದಿರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಪಾಟೀಲ್ ಅವರ ಷರತ್ತುಗಳಿಗೆ ಬಿಜೆಪಿ ನಾಯಕರು ಒಪ್ಪಿಗೆ ನೀಡಿದರೆ, ಅವರು ಡಿಸೆಂಬರ್ 13ರಂದು ಪಕ್ಷ ಸೇರುವ ಸಾಧ್ಯತೆ ಇದೆ.

ಬಿಜೆಪಿ ಯಾತ್ರೆಗೆ ಸೆಡ್ಡು ಹೊಡೆಯಲು, ಸಿದ್ದರಾಮಯ್ಯ ಪ್ರತಿತಂತ್ರ!ಬಿಜೆಪಿ ಯಾತ್ರೆಗೆ ಸೆಡ್ಡು ಹೊಡೆಯಲು, ಸಿದ್ದರಾಮಯ್ಯ ಪ್ರತಿತಂತ್ರ!

ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಈಗ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಯತ್ನಾಳ್ ಪುನಃ ಪಕ್ಷಕ್ಕೆ ವಾಪಸ್ ಆಗುವ ಬಗ್ಗೆ ಚರ್ಚೆ ನಡೆಯುತ್ತಿದೆ...

ಯತ್ನಾಳ್ ವಿಧಿಸಿದ ಷರತ್ತು - 1

ಯತ್ನಾಳ್ ವಿಧಿಸಿದ ಷರತ್ತು - 1

ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್ ನೀಡಬೇಕು

ಯತ್ನಾಳ್ ವಿಧಿಸಿದ ಷರತ್ತು - 2

ಯತ್ನಾಳ್ ವಿಧಿಸಿದ ಷರತ್ತು - 2

ಪಕ್ಷದ ಚುನಾವಣೆಯ ಸಮಿತಿಯಲ್ಲಿ ಸ್ಥಾನ ನೀಡಬೇಕು

ಯತ್ನಾಳ್ ವಿಧಿಸಿದ ಷರತ್ತು - 3

ಯತ್ನಾಳ್ ವಿಧಿಸಿದ ಷರತ್ತು - 3

ತಾವು ಹೇಳುವ ನಾಲ್ಕು ಕಡೆ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು

ಶಿವಸೇನೆಯಿಂದಲೂ ಆಹ್ವಾನ

ಶಿವಸೇನೆಯಿಂದಲೂ ಆಹ್ವಾನ

ಬೇಷರತ್ತಾಗಿ ಬಿಜೆಪಿ ಸೇರುತ್ತಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ. ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದ್ದರು. ಅವರಿಗೆ ಶಿವಸೇನೆಯಿಂದಲೂ ಪಕ್ಷಕ್ಕೆ ಸೇರುವಂತೆ ಆಹ್ವಾನ ಬಂದಿದೆ.

ಪಕ್ಷೇತರನಾಗಿ ಸ್ಪರ್ಧೆ?

ಪಕ್ಷೇತರನಾಗಿ ಸ್ಪರ್ಧೆ?

'ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಹಿಂದೂ ಮತಗಳು ವಿಭಜನೆಯಾದರೆ ನಾನು ಜವಾಬ್ದಾರನಲ್ಲ' ಎಂದು ಯತ್ನಾಳ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

English summary
Basangouda Patil Yatnal said that he will not joining BJP unconditionally. Basangouda Patil Yatnal has been suspended from BJP after he refused to withdraw his nomination for MLC Election in Vijayapura-Bagalakote constituency in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X