• search
 • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ನೀವು ಸಿಎಂ ಆಗಿರಿ, ಉಳಿದೆಲ್ಲಾ ಖಾತೆ ವಿಜಯೇಂದ್ರಗೆ ಕೊಟ್ಟು ಬಿಡಿ"

|
Google Oneindia Kannada News

ವಿಜಯಪುರ, ಏಪ್ರಿಲ್ 2; "ಎಲ್ಲಾ ಮಂತ್ರಿಗಳು ಯಾಕೆ ಬೇಕು, ವಿಜಯೇಂದ್ರ ಮಾಡಿಬಿಡಿ. ನೀವು ಮುಖ್ಯಮಂತ್ರಿಯಾಗಿರಿ. ಉಳಿದೆಲ್ಲಾ ಖಾತೆಗಳನ್ನು ವಿಜಯೇಂದ್ರಗೆ ಕೊಟ್ಟುಬಿಡಿ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಟೀಕೆಯನ್ನು ಮುಂದುವರೆಸಿದ್ದಾರೆ. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

ಯತ್ನಾಳ್ ಭವಿಷ್ಯದ ಬಗ್ಗೆ ರೇಣುಕಾಚಾರ್ಯ ಟ್ವೀಟ್! ಯತ್ನಾಳ್ ಭವಿಷ್ಯದ ಬಗ್ಗೆ ರೇಣುಕಾಚಾರ್ಯ ಟ್ವೀಟ್!

"ಯಾವುದಕ್ಕೆ ಸಚಿವ ಸಂಪುಟ ಬೇಕು?. ಮುಖ್ಯಮಂತ್ರಿಗಳು ಎಂದರೆ ಏನು?, ನೀವು ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡುತ್ತೀರಿ. ಎಲ್ಲರನ್ನು ತೆಗೆಯುತ್ತಿದ್ದೀರಿ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

 ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ರನ್ನೂ ಬಿಡದ ಯತ್ನಾಳ್ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ರನ್ನೂ ಬಿಡದ ಯತ್ನಾಳ್

"ಹಣಕಾಸು ಇಲಾಖೆಯಲ್ಲಿ ಒಬ್ಬರು ಕಾರ್ಯದರ್ಶಿ ಇದ್ದರು. ಅವರು ಸಿದ್ದರಾಮಯ್ಯ ಕಾಲದಲ್ಲಿ, ಕುಮಾರಸ್ವಾಮಿ ಕಾಲದಲ್ಲಿಯೂ ಇದ್ದರು. ಮುಖ್ಯಮಂತ್ರಿಗಳು ಹೇಳಿದಂತೆ ಕೇಳಿಕೊಂಡು ಅವರಿಗೆ ಹೊಂದಿಕೊಂಡು ಹೋಗುತ್ತಾರೆ" ಎಂದು ಯತ್ನಾಳ್ ದೂರಿದರು.

ಸದಾ ಗೌಡ್ರ ಗದ್ದಲ; ಬಿಜೆಪಿಯ 'ಬಿಸಿ ತುಪ್ಪ' ಯತ್ನಾಳ ಯಾರು?ಸದಾ ಗೌಡ್ರ ಗದ್ದಲ; ಬಿಜೆಪಿಯ 'ಬಿಸಿ ತುಪ್ಪ' ಯತ್ನಾಳ ಯಾರು?

"10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯ ಒಪ್ಪಿಗೆ ಬೇಕು. ನಾನು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಕೇಳುತ್ತೇನೆ. ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದಿರಿ?" ಎಂದು ಯತ್ನಾಳ್ ಪ್ರಶ್ನಿಸಿದರು.

"ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆ ಆಗುತ್ತದೆ. ಕೊಪ್ಪಳಕ್ಕೆ ಹಣ ಬಿಡುಗಡೆ ಮಾಡಿದ್ದಕ್ಕೆ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಲಾಗಿದೆ. ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ?. ಅಪ್ಪ-ಮಕ್ಕಳು ಕಾವೇರಿ ಮನೆಯಲ್ಲಿ ಕೂತು ಎಲ್ಲಾ ಇಲಾಖೆಗಳನ್ನು ಡೀಲ್ ಮಾಡುತ್ತಿದೆ" ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.

   ಚಾಮುಂಡೇಶ್ವರಿ ಮೊರೆ ಹೋದ ಸಚಿವ ಕೆ.ಎಸ್.ಈಶ್ವರಪ್ಪ | Oneindia Kannada

   "ಯಾವ ಮಂತ್ರಿಗಳಿಗೂ ತಮ್ಮ ಖಾತೆ ಬಗ್ಗೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ. 'ಡಿ' ಗ್ರೂಪ್ ನೌಕರರನ್ನು ವರ್ಗಾವಣೆ ಮಾಡಲು ಅಧಿಕಾರವಿಲ್ಲ. ಈಶ್ವರಪ್ಪ ಅವರು ಎತ್ತಿದ್ದು ಗೌರವಾನ್ವಿತ ಪ್ರಶ್ನೆಯಾಗಿದೆ. ಯಾರಿಗಾದರೂ ಹೇಳಲೇ ಬೇಕಲ್ಲ" ಎಂದು ಯತ್ನಾಳ್ ತಿಳಿಸಿದರು.

   English summary
   Vijayapura city BJP MLA Basanagouda Patil Yatnal verbally attacked on chief minister B. S. Yediyurappa and B. Y. Vijayendra.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X