• search
 • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜಯಪುರ : ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು

By Manjunatha
|
   ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು | Oneindia Kannada

   ವಿಜಯಪುರ, ನವೆಂಬರ್ 30 : ರಕ್ತ ಸಿಕ್ತ ಚರಿತ್ರೆ ಹೊತ್ತ ಭೀಮಾತೀರ ಇತ್ತೀಚಿನ ದಿನಗಳಲ್ಲಿ ಪೊಲೀಸರ ದೆಸೆಯಿಂದಾಗಿ ಸ್ವಲ್ಪ ಶಾಂತವಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಗುಂಡಿನ ಸದ್ದು ಕೇಳಿದೆ.

   ಜಿಲ್ಲೆಯ ಇಂಡಿಯಲ್ಲಿ ರೌಡಿ ಶೀಟರ್ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

   ಇತ್ತೀಚೆಗೆ ಪೊಲೀಸರ ಗುಂಡಿನಿಂದ ಬಲಿಯಾದ ರೌಡಿ ಧರ್ಮರಾಜ್ ಚಡಚಣನ ಬಲಗೈ ಭಂಟ ಸೈಪನ್ ಐರಸಂಗ ಎಂಬುವನು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.

   ಇಂಡಿ ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಜಾತ್ರೆ ನೋಡಲು ಸೈಪನ್ ಗ್ರಾಮಕ್ಕೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿದ್ದ ಸೈಪನ್ ಬೇಕೆಂದೆ ಕೆಲವರೊಂದಿಗೆ ಜಗಳ ತೆಗೆದಿದ್ದ, ಸಿದ್ದ ಪರಚಂಡಿ ಎಂಬುವರು ಜಗಳ ಬಿಡಿಸಲು ಮುಂದಾದಾಗ ಅಲ್ಲಿದ್ದವರನ್ನು ಹೆದರಿಸಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ. ಈ ಬಗ್ಗೆ ಸಿದ್ದು ಪರಚಂಡಿ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

   ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಸೈಪನ್ ಪರಾರಿ ಆಗಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿದ್ದನ್ನು ಪೊಲೀಸರು ಖಚಿತ ಪಡಿಸಿದ್ದಾರೆ.

   ಇಂಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಸೈಪನ್ ಐರಸಂಗ, ಪೊಲೀಸರ ಎನ್‌ಕೌಂಟರ್ ಗೆ ಬಲಿಯಾದ ಧರ್ಮರಾಜ್ ಚಡಚಣ ಜತೆಗೆ ಓಡಾಡಿಕೊಂಡಿದ್ದ.

   English summary
   Rowdy sheeter Syphen Ersasanga fire two round on air in Vijayapura district Indi. he is engaged in a street fight in Indi to avoid beaten up he fires bullet to air. police lodge complaint against him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more