• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜಯಪುರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

|

ವಿಜಯಪುರ, ಮೇ 06: ಲಾಕ್‌ಡೌನ್ ಸಡಿಲಗೊಳುಸುತ್ತಿದ್ದಂತೆಯೆ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಅಪಘಾತಗಳು ಸಂಭವಿಸುತ್ತಿವೆ. ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಎರಡು ಬೈಕ್ ಗಳ ಮದ್ಯೆ ಮುಖಾಮುಖಿ ಡಿಕ್ಕಿ ನಡೆದಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ ನಗರ ನಿವಾಸಿಗಳಾದ ಸಿದ್ದರಾಮ ಭೈರೊಡಗಿ(30) ಹಾಗೂ ವಿಜಯಕುಮಾರ ಧುಳಂಗೆ(32) ಮೃತ ದುರ್ದೈವಿಗಳು. ಗಾಯಾಳುಗಳಾದ ನವೀನಕುಮಾರ ಹಾಗೂ ರವಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡರಾತ್ರಿ ನಡೆದ ಘಟನೆ ಸಂಭವಿಸಿದ್ದು, ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two persons were killed and two others injured when two bikes collided in the Vijayapur district. A case has been registered at the city's traffic police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X