• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನವ ಹಕ್ಕುಗಳ ದಾಖಲೆಗಳ ಬಗ್ಗೆ ಭಾರತಕ್ಕೆ ಎಚ್ಚರಿಕೆ ನೀಡಿದ ಅಮೆರಿಕ

|
Google Oneindia Kannada News

ಭಾರತದಲ್ಲಿ ಹಕ್ಕುಗಳ ಗುಂಪಿನಿಂದಾಗಿ ನಾಗರಿಕ ಸ್ವಾತಂತ್ರ್ಯ ಆಕ್ರಮಣಕ್ಕೆ ಒಳಗಾಗುತ್ತಿದೆ. ಆದರೆ, ಟೀಕೆಗಳ ನಡುವೆ ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗಬಾರದು ಎಂದು ಅಮೆರಿಕದ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಭಾರತಕ್ಕೆ ಎಚ್ಚರಿಕೆ ನೀಡಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತಕ್ಕೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಬ್ಲಿಂಕೆನ್, ಅಫ್ಘಾನಿಸ್ಥಾನಕ್ಕೆ ಕೋವಿಡ್-19 ಲಸಿಕೆ ಸರಬರಾಜು ಆಗುತ್ತಿರುವ ಬಗ್ಗೆ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ನಾಗರಿಕ ಸಮಾಜದ ಮುಖಂಡರನ್ನು ಭೇಟಿ ಮಾಡಿದ ಅಮೆರಿಕದ ಪ್ರತಿನಿಧಿಗಳು ಮಾನವ ಹಕ್ಕುಗಳ ದಾಖಲೆಗಳ ಬಗ್ಗೆ ಚರ್ಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿಯಾಗುವ ಮುನ್ನ ಮಾತನಾಡಿದ ಬ್ಲಿಂಕೆನ್, 'ನಮ್ಮ ಎರಡು ದೇಶದ ಪ್ರಜಾಪ್ರಭುತ್ವಗಳು ಪ್ರಗತಿಯಲ್ಲಿವೆ. ಆದರೆ, ಕೆಲವೊಮ್ಮೆ ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ನೋವುಂಟು ಮಾಡುತ್ತವೆ' ಆದರೂ ಅದನ್ನು ಸ್ವೀಕರಿಸುವುದೇ ಪ್ರಜಾಪ್ರಭುತ್ವದ ಶಕ್ತಿ ಎಂದು ಹೇಳಿದರು.

ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ 2.5 ಕೋಟಿ ಡಾಲರ್ ನೀಡಿದ ಅಮೆರಿಕಾ!ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ 2.5 ಕೋಟಿ ಡಾಲರ್ ನೀಡಿದ ಅಮೆರಿಕಾ!

ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ಹಾಗೂ ಅಂತಾರಾಷ್ಟ್ರೀಯ ಸ್ವಾತಂತ್ರ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವವನ್ನು ಹೊಂದಿರುವ ನಾವು, ಈ ಆದರ್ಶಗಳನ್ನು ಬೆಂಬಲಿಸುವಲ್ಲಿ ಒಟ್ಟಾಗಿ ನಿಲ್ಲುವುದು ಅವಶ್ಯ ಎಂದು ಅವರು ಸಲಹೆ ನೀಡಿದರು.

ಭಾರತದ ಹಕ್ಕುಗಳ ದಾಖಲೆಯ ಬಗ್ಗೆ ಅಮೆರಿಕ ಹೇಳಿದ್ದೇನು?

ಇದೇ ವೇಳೆ ಮಾನವ ಹಕ್ಕುಗಳ ದಾಖಲೆ ಸಂಬಂಧ ಮಾತನಾಡಿದ ಬ್ಲಿಂಕೆನ್, ಯುಎಸ್ ಸ್ಟೇಟ್ಸ್ ವಿಭಾಗವು ಕಳೆದ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತವು ಮಾನವ ಹಕ್ಕುಳ ಉಲ್ಲಂಘನೆ ಮಾಡಿರುವುದನ್ನು ಉಲ್ಲೇಖಿಸಿದೆ.

'ಕಾನೂನುಬಾಹಿರ, ಹತ್ಯೆಗಳು, ಪೊಲೀಸರೇ ಕಾನೂನು ಉಲ್ಲಘಿಸಿ ಹತ್ಯೆ ಮಾಡಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಮಾಧ್ಯಮಗಳ ಮೇಲೆ ಹೇರಿದ ನಿರ್ಬಂಧ ಹೇರಿರುವುದು, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಕಾನೂನುಗಳನ್ನು ಬಳಸುವುದು ಸೇರಿದಂತೆ ಹಲವು ಉದಾಹರಣೆಗಳನ್ನು ವರದಿಯು ಗುರುತಿಸಿದೆ.

ಅಲ್ಲದೆ, ಮಾರ್ಚ್ ತಿಂಗಳ ಆರಂಭದಲ್ಲಿ, ಭಯೋತ್ಪಾದನೆ ಆರೋಪದ ಮೇಲೆ ಬಂಧನವಾಗಿದ್ದ 84 ವರ್ಷದ ಪಾದ್ರಿ ಹಾಗೂ ಬುಡಕಟ್ಟು ಮಾನವ ಹಕ್ಕುಗಳ ಕಾರ್ಯಕರ್ತರಿಬ್ಬರು ನ್ಯಾಯಾಂಗ ಬಂಧನದಲ್ಲೇ ಮೃತಪಟ್ಟಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ತಿಳಿಸಿದರು.

ವಿವಾದಿತ ಕೃಷಿ ಕಾಯ್ದೆ ಕುರಿತು ದೋವಲ್-ಬ್ಲಿಂಕೆನ್ ಮಾತುಕತೆವಿವಾದಿತ ಕೃಷಿ ಕಾಯ್ದೆ ಕುರಿತು ದೋವಲ್-ಬ್ಲಿಂಕೆನ್ ಮಾತುಕತೆ

ಈಚೆಗೆ ಧರ್ಮಾಧಾರಿತ ಪೌರತ್ವ ಕಾನೂನು ಮುಸ್ಲಿಮರನ್ನು ತಾರತಮ್ಯದಿಂದ ನೋಡುತ್ತಿವೆ. ಆದರೆ, ಭಿನ್ನಮತೀಯವನ್ನು ನಿರಾಕರಿಸುವ ಸರ್ಕಾರವು ಎಲ್ಲ ಧರ್ಮದ ಜನರಿಗೂ ಸಮಾನ ಹಕ್ಕುಗಳಿವೆ ಎಂಬುದನ್ನು ಸಾಬೀತುಪಡಿಸಿದೆ ಎಂದು ನೆನಪಿಸಿದರು.

ಅಫ್ಘಾನಿಸ್ತಾನದ ಬಗ್ಗೆ ಬ್ಲಿಂಕೆನ್ ಹೇಳಿದ್ದಿಷ್ಟು:

ಅಫ್ಘಾನಿಸ್ತಾನದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನನದಿಂದ ಅಮೆರಿಕ ಮಿಲಿಟರಿಯು ಹಿಂದೆ ಸರಿಯುತ್ತಿದೆ ಎಂಬುದಾಗಿ ಭಾರತೀಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಮೆರಿಕಾ ಮಿಲಿಟರಿ ಪಡೆ ಹಿಂದೆ ಸರಿದ ನಂತರ ತಾಲಿಬಾನ್ ಇದರ ಲಾಭ ಪಡೆಯಬಹುದು ಎನ್ನುವ ಆತಂಕವನ್ನೂ ವ್ಯಕ್ತಪಡಿಸಿದೆ ಎಂದಿದ್ದಾರೆ.

Blinken made his remarks in a meeting with civil society leaders

ಅಫ್ಘಾನಿಸ್ತಾನವು ಪರಿಪೂರ್ಣ ರಾಜ್ಯವಾದರೆ ಮತ್ತೆ ಉಗ್ರಗಾಮಿ ಗುಂಪುಗಳು ಮತ್ತೆ ಅಧಿಕಾರವನ್ನು ವಶಪಡಿಸಿಕೊಳ್ಳಲಿವೆ. 2001ರಲ್ಲಿ ಅಮೆರಿಕ ಅಂತಾರಾಷ್ಟ್ರೀಯ ಒಕ್ಕೂಟವನ್ನು ಮುನ್ನಡೆಸಿದ ನಂತರದಲ್ಲಿ ಅಫ್ಘಾನಿಸ್ತಾನ 9/11 ದಾಳಿ ನಡೆಸಿತ್ತು.ಆದರೆ, ಅಲ್-ಖೈದಾ ದೇಶವನ್ನು ತಮ್ಮ ಗಡಿಯಾರದ ನೆಲೆಯಾಗಿ ಬಳಸುತ್ತಿದೆ ಎಂಬ ಕಾರಣಕ್ಕೆ ಪಾಶ್ಚಿಮಾತ್ಯ ಪಡೆಗಳು ತಾಲಿಬಾನ್ ಅನ್ನು ಉಚ್ಛಾಟಿಸಲು ಮುಂದಾದವು. ಆದರೆ, 'ತನ್ನ ಜನರ ಹಕ್ಕುಗಳನ್ನೇ ಗೌರವಿಸದ, ತನ್ನದೇ ಜನರ ವಿರುದ್ಧ ದೌರ್ಜನ್ಯ ಎಸಗುವ ಅಫ್ಘಾನಿಸ್ತಾನವು ಒಂದು ಪರಿಪೂರ್ಣ ರಾಜ್ಯವಾಗಲಿದೆಯೇ ಎಂದು ಹೇಳಿದರು.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಬಾರಿಗೆ ಆಂಟೋನಿ ಬ್ಲಿಂಕೆನ್ ಭಾರತಕ್ಕೆ ಆಗಮಿಸಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ಸೇರಿದಂತೆ ದೇಶದ ಹಲವು ಪ್ರಸಕ್ತ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಜೊತೆ ಚರ್ಚೆ ನಡೆಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ, ಲವ್ ಜಿಹಾದ್, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಉಭಯ ನಾಯಕರ ನಡುವೆ ಚರ್ಚೆಯಾಗಿದೆ. (AFP, AP, Reuters)

English summary
US Secretary of State Antony Blinken has warned New Delhi not to backslide on human rights amid mounting criticism that the Indian government is cracking down on dissent and discriminating against its Muslim population.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X