ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಾಂಗಿ ತಾಯಿಯಿಂದ ಐಸಿಯುನಲ್ಲಿ ಹೋರಾಟ, ಆಕೆಗೆ ಕಾದಿರುವ ಮಗ; ಪ್ಲೀಸ್ ಹೆಲ್ಪ್

Google Oneindia Kannada News

"ಅಜ್ಜಿ, ಅಮ್ಮ ಎಲ್ಲಿ? ಇವತ್ತು ಬರ್ತಾರೆ ಅಂತ ನೀನು ಹೇಳಿದ್ದೆ".

"ಅವಳಿಗೆ ಜ್ವರ ಹಾಗೂ ಆಸ್ಪತ್ರೆಯಲ್ಲೇ ಇರಬೇಕಾಗಿದೆ. ಸದ್ಯದಲ್ಲೇ ಮನೆಗೆ ಬರ್ತಾಳೆ".

"ಅಮ್ಮ ಯಾಕೆ ನನಗೆ ಕಾಲ್ ಕೂಡ ಮಾಡ್ತಿಲ್ಲ?"

13 ವರ್ಷದ ಗೋವಿಂದ್ ತನ್ನ ತಾಯಿ ಮಹಾಲಕ್ಷ್ಮೀಯನ್ನು ಕಳೆದ 15 ದಿನಗಳಿಂದ ನೋಡಿಲ್ಲ. ಪ್ರತಿ ದಿನ ತನ್ನ ಅಜ್ಜಿ ಲಕ್ಷ್ಮಮ್ಮ ಅವರನ್ನು ಅಮ್ಮ ಯಾವಾಗ ಬರ್ತಾಳೆ ಎಂಬುದು ಸಹ ಸೇರಿ ಒಂದು ರಾಶಿ ಪ್ರಶ್ನೆ ಕೇಳುತ್ತಾನೆ. ಅವನಿಗೆ ಗೊತ್ತಿಲ್ಲದಿರುವುದು ಏನೆಂದರೆ, ತನ್ನ ತಾಯಿ ಐಸಿಯುನಲ್ಲಿ ಇದ್ದಾರೆ, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ ಎಂಬುದು ಅವನಿಗೆ ಗೊತ್ತಿಲ್ಲ.

Unaware of his mother’s critical condition, 13-year-old is waiting for her back home

ಲಕ್ಷ್ಮಮ್ಮ ಅವರು ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಧೈರ್ಯವಾದ ಹೆಜ್ಜೆ ಇಟ್ಟಿದ್ದಾರೆ. ಅಮ್ಮನಿಗೆ ಜ್ವರ ಇದೆ, ಅದಕ್ಕಾಗಿ ಆಸ್ಪತ್ರೆಯಲ್ಲಿ ಇದ್ದಾರೆ. ಶೀಘ್ರದಲ್ಲೇ ವಾಪಸ್ ಬರ್ತಾರೆ ಎಂದು ಗೋವಿಂದ್ ಗೆ ಹೇಳುತ್ತ ಬಂದಿದ್ದಾರೆ. ಹೀಗೆ ತಮ್ಮ ಮೊಮ್ಮಗನಿಗೆ ಎಲ್ಲ ಧೈರ್ಯ ಹೇಳಿದರೂ ಮಗಳನ್ನು ಕಳೆದುಕೊಳ್ಳುವ ಆತಂಕ ಅವರಿಗೆ ಇದೆ.

ಆಗಸ್ಟ್ 19ನೇ ತಾರೀಕು ಮಹಾಲಕ್ಷ್ಮೀ ಕೆಲಸಕ್ಕೆ ಹೋಗುವಾಗ ದ್ವಿಚಕ್ರ ವಾಹನ ಆಯತಪ್ಪಿ ಬಿದ್ದಿದ್ದರು. ಆ ದಿನ ಇಡೀ ರಾತ್ರಿ ಮಳೆಯಾಗಿತ್ತು ಹಾಗೂ ರಸ್ತೆಯಲ್ಲಿ ಜಾರಿಕೆ ಆಗುತ್ತಿತ್ತು. ಕೆಲವು ಅಡಿಗಳಷ್ಟು ದೂರಕ್ಕೆ ವಾಹನ ಜಾರಿ, ನೆಲಕ್ಕೆ ಬಡಿಯಿತು. ಮಹಾಲಕ್ಷ್ಮೀ ಅವರ ಹೆಲ್ಮೆಟ್ ತಲೆಯಿಂದ ಹಾರಿ, ತಲೆಗೆ ಬಹಳ ದೊಡ್ಡ ಪೆಟ್ಟಾಯಿತು. ದಾರಿಯಲ್ಲಿ ಹೋಗುತ್ತಿದ್ದವರು ಆಕೆಯನು ಗಮನಿಸಿ, ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಐಸಿಯುನಲ್ಲಿ ದಾಖಲಿಸಲಾಗಿದೆ. ಆಗಿನಿಂದ ಆಕೆಗೆ ಪ್ರಜ್ಞೆ ಕೂಡ ಬಂದಿಲ್ಲ.

Unaware of his mother’s critical condition, 13-year-old is waiting for her back home

"ನನ್ನ ಮಗಳು ತುಂಬ ಕಷ್ಟದ ಜೀವನ ನಡೆಸುತ್ತಿದ್ದಳು. ಆದರೆ ಅವಳೊಬ್ಬಳು ಹೋರಾಟಗಾರ್ತಿ. ಅವಳು ಈ ಯುದ್ಧವನ್ನು ಹೋರಾಡಿ ಗೆಲ್ಲುತ್ತಾಳೆ ಅನ್ನೋ ನಂಬಿಕೆ ನನಗೆ ಇದೆ" ಎನ್ನುತ್ತಾರೆ ತಮ್ಮ ಕಣ್ಣೀರನ್ನು ತಡೆದುಕೊಂಡು ಮಾತನಾಡುವ ಲಕ್ಷ್ಮಮ್ಮ.

ಆರು ವರ್ಷಗಳ ಹಿಂದೆ ಮಹಾಲಕ್ಷ್ಮೀ ಅವರನ್ನು ಪತಿ ತೊರೆದಿದ್ದಾನೆ. ಆ ವೇಳೆ ಆಕೆ ಕಂಕುಳಲ್ಲಿ ಪುಟ್ಟ ಕಂದಮ್ಮ ಇತ್ತು. ತನ್ನ ವಯಸ್ಸಾದ ತಾಯಿ ಜತೆಗೆ ಜೀವನ ಕಳೆಯಲು ಆರಂಭಿಸಿದ ಮಹಾಲಕ್ಷ್ಮೀ ಸ್ವಭಾವತಃ ಬಹಳ ಗಟ್ಟಿ. ತನ್ನ ಕುಟುಂಬ ನಿರ್ವಹಣೆಗೆ ಒಂದು ಪಾರ್ಲರ್ ಗೆ ಸೇರಿಕೊಂಡರು.

Unaware of his mother’s critical condition, 13-year-old is waiting for her back home

ಆಂತಿಮವಾಗಿ, ಕೆಲ ವರ್ಷಗಳ ನಂತರ ಆಕೆ ಕುಟುಂಬದಲ್ಲಿ ಎಲ್ಲ ಬದಲಾಗುತ್ತಿದೆ, ಸುಧಾರಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಆಕೆಗೆ ಭೀಕರವಾದ ಅಪಘಾತವಾಗಿದೆ.

"ಅವನ ತಾಯಿ ಮನೆಗೆ ವಾಪಸ್ ಬರುತ್ತಾಳೆ ಅಂತ ಹಲವು ದಿನದಿಂದ ಗೋವಿಂದ್ ಗೆ ಸುಳ್ಳು ಹೇಳುತ್ತಿದ್ದೇನೆ. ಈ ಸುಳ್ಳನ್ನು ಇನ್ನಷ್ಟು ದಿನ ಮುಂದುವರಿಸುವ ಧೈರ್ಯ ನನಗಿಲ್ಲ. ತನ್ನ ತಾಯಿಯನ್ನು ಒಂದು ದಿನಕ್ಕೂ ಬಿಟ್ಟಿದ್ದವನಲ್ಲ. ಅವನಿಗೆ ಎಲ್ಲವೂ ತಾಯಿಯೇ" ಎಂದು ಲಕ್ಷ್ಮಮ್ಮ ಅವರು ಕಣ್ಣೀರು ಹಾಕುತ್ತಾರೆ.

Unaware of his mother’s critical condition, 13-year-old is waiting for her back home

ಮಹಾಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಅಪಘಾತವು ಆಕೆ ಮೆದುಳನ್ನು ತೀವ್ರವಾಗಿ ಹಾನಿ ಮಾಡಿದೆ. ವೈದ್ಯರ ವರದಿಗಳ ಪ್ರಕಾರ ಆಕೆಗೆ ಲೆಫ್ಟ್ ಫ್ರಂಟೋಟೆಂಪೋರಲ್ ಕಂಟ್ಯೂಷನ್ ಜತೆಗೆ ಒಡೆಮಾ. ಸದ್ಯಕ್ಕೆ ಆಕೆ ನ್ಯೂರೋ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ, ಆಕೆಯ ಆರ್ಥಿಕ ಸ್ಥಿತಿ ಗಮನಿಸಿದಾರೆ ಚಿಕಿತ್ಸೆಯನ್ನು ಮುಂದುವರಿಸುವುದು ಬಹಳ ಕಷ್ಟವಿದೆ. ಈಗಾಗಲೇ ಆಸ್ಪತ್ರೆಯ ಬಿಲ್ 25.09 ಲಕ್ಷ ರುಪಾಯಿ ($34,929) ಆಗಿದೆ. ತಮ್ಮ ಮಗಳ ಚಿಕಿತ್ಸೆ ಸಲುವಾಗಿಯೇ ಬಳಿ ಇದ್ದ ಅಲ್ಪ- ಸ್ವಲ್ಪ ಚಿನ್ನದ ಆಭರಣಗಳನ್ನು ಕೂಡ ಲಕ್ಷ್ಮಮ್ಮ ಮಾರಿದ್ದಾರೆ. ಆದರೂ ಚಿಕಿತ್ಸೆಗೆ ಅಗತ್ಯ ಇರುವ ಹಣ ಹೊಂದಿಸಲು ಆಗುತ್ತಿಲ್ಲ.

Unaware of his mother’s critical condition, 13-year-old is waiting for her back home

"ಕೆಲ ದಿನಗಳಿಂದ ತನ್ನ ತಾಯಿಗಾಗಿ ಗೋವಿಂದ್ ಕಾಯುತ್ತಾ ಇದ್ದಾನೆ. ನಮಗೆ ಅಗತ್ಯ ಇರುವ ಹಣ ದೊರೆಯದಿದ್ದರೆ ಆವನಿಂದ ಮತ್ತೆಂದೂ ಭೇಟಿ ಆಗಲು ಸಾಧ್ಯವಿಲ್ಲ. ಆ ಬಗ್ಗೆ ಯೋಚನೆ ಬಂದರೂ ಹೃದಯ ನಡುಗಿಹೋಗುತ್ತದೆ" ಎಂದು ಲಕ್ಷ್ಮಮ್ಮ ಕಣ್ಣೀರು ಹಾಕುತ್ತಾರೆ.

Unaware of his mother’s critical condition, 13-year-old is waiting for her back home

"ನಾನು ಯಾವಾಗೆಲ್ಲ ಮಗಳನ್ನು ಐಸಿಯುನಲ್ಲಿ ನೋಡ್ತೀನೋ, ಅವಳ ಕೈ ಹಿಡಿದು, ನೀನು ತುಂಬ ಗಟ್ಟಿ ಇರಬೇಕು ಎಂದು ಹೇಳ್ತೀನಿ. ಅವಳನ್ನು ಈ ಸ್ಥಿತಿಯಲ್ಲಿ ನೋಡಿದರೆ ಪ್ರಾಣ ಹೋದಂತೆ ಆಗುತ್ತದೆ. ಪ್ರತಿ ಕ್ಷಣವೂ ಅವಳ ಸ್ಥಿತಿ ಹದಗೆಡುತ್ತಾ ಇದೆ. ನಿಮ್ಮ ಬೆಂಬಲ ಇಲ್ಲದಿದ್ದರೆ ಅವಳನ್ನು ಕಳೆದುಕೊಳ್ತೀವಿ," ಎನ್ನುತ್ತಾರೆ ಲಕ್ಷ್ಮಮ್ಮ.

Unaware of his mother’s critical condition, 13-year-old is waiting for her back home

ನೀವು ಹೇಗೆ ಸಹಾಯ ಮಾಡಬಹುದು?
ಮಹಾಲಕ್ಷ್ಮೀ ಸ್ಥಿತಿ ವಿಪರೀತ ಗಂಭೀರವಾಗಿದೆ. ಒಂದು ವೇಳೆ ಚಿಕಿತ್ಸೆ ನಿಂತುಹೋದರೆ ಮತ್ತೆಂದೂ ಆಕೆಗೆ ಮಗನನ್ನು ನೋಡಲು ಸಾಧ್ಯವಾಗಲ್ಲ. ಆಕೆಯ ಸ್ನೇಹಿತರು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಣ ಹೊಂದಿಸಲು ಆಗುತ್ತಿಲ್ಲ. ನಿಮ್ಮ ದೇಣಿಗೆಯಿಂದ ಆಕೆಯ ಜೀವವನ್ನು ಉಳಿಸಬಹುದು. ದಯವಿಟ್ಟು ಉದಾರವಾಗಿ ದೇಣಿಗೆ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X